ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರೇಕ್ಷಕರ ನಿರಾಸಕ್ತಿ ಮತ್ತು ಕೊರತೆಯಿಂದ ವಿನಾಶದತ್ತ ಮುಖ ಮಾಡಿರುವ ಕನ್ನಡ ಚಿತ್ರರಂಗದ ಉಳಿವಿಗೆ ಸರ್ಕಾರ ಹಾಗೂ ಚಿತ್ರೋಧ್ಯಮ ಗಂಭೀರ ಚಿಂತನೆ ನಡೆಸಬೇಕು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಹೇಳಿದರು.ನಗರದ ಉಪ ಕಾರಾಗೃಹ ವೃತ್ತದ ಸಮೀಪ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಆಯೋಜಿಸಿದ್ದ ಅಪ್ಪು ಜನ್ಮದಿನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ದರ ಏರಿಕೆ, ವಿಭಿನ್ನ ಮನೋರಂಜನೆ, ಸಮಯದ ಅಭಾವ, ಕೆಲಸದ ಒತ್ತಡ, ಮೊಬೈಲ್ ಬಳಕೆಯಂತಹ ಹತ್ತಾರು ಕಾರಣದಿಂದ ಚಿತ್ರರಂಗ ಕಳೆಗುಂದಿದ್ದು, ಭವಿಷ್ಯದಲ್ಲಿ ಜನರ ಅಭಿರುಚಿಗೆ ಪೂರಕವಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರರಂಗವನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕು ಎಂದರು.ಸದಭಿರುಚಿ ಚಿತ್ರದ ಮೂಲಕ ಅಸಂಖ್ಯಾತ ಪ್ರೇಕ್ಷಕ ವೃಂದವನ್ನು ಹೊಂದಿದ್ದಂತಹ ಪುನೀತ್ ರಾಜ್‌ಕುಮಾರ ಉತ್ತಮ ಕಥೆಗಳ ಮೂಲಕ ಸಮಾಜವನ್ನು ತಿದ್ದುವ ಪ್ರಯತ್ನ ಮಾಡಿದ್ದರು. ಅಂತಹ ಚಿತ್ರಗಳು ಇಂದಿಗೂ ಪ್ರಸ್ತುತ ಎಂದರು.
ನಿಜ ಜೀವನದಲ್ಲಿ ಜನಮುಖಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಯುವಜನರ ಆದರ್ಶವೇ ಆಗಿದ್ದಾರೆ ಎಂದ ಅವರು, ಅಪ್ಪು ಬಿರಿಯಾನಿ ಸೆಂಟರ್‌ನ ಮಾಲೀಕರಾದ ಕೆ.ಎಸ್. ಗುರುರಾಜ್ ಪ್ರತಿ ವರ್ಷ ಸಮಾಜಸೇವಾ ಕಾರ್ಯದ ಮೂಲಕ ಪುನೀತ್ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಅಪ್ಪು ಅಭಿಮಾನಿ ಬಳಗದ ಕೆ.ಎಸ್.ಗುರುರಾಜ್, ಮುಖಂಡರಾದ ಎಂ. ಕೃಷ್ಣ, ಪ್ರದೀಪ್ ಯಲಿಯೂರು, ಶಿವಕುಮಾರ್ ಸಂತೆಕಸಲಗೆರೆ ಅಭಿಮಾನಿಗಳು ಹಾಜರಿದ್ದರು.ನಟ ದಿ.ಪುನೀತ್ ರಾಜಕುಮಾರ್ 51 ನೇ ಜನ್ಮದಿನ ಆಚರಣೆಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಗ್ರಾಮಗಳಲ್ಲಿ ನಟ ದಿ.ಪುನೀತ್ ರಾಜಕುಮಾರ್ ರವರ51 ನೇ ಜನ್ಮದಿನದ ಆಚರಣೆಯನ್ನು ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಭಾವಚಿತ್ರದ ಮುಂದೆ ಕೇಕ್ ಕತ್ತರಿಸಿ ಆಚರಣೆ ಮಾಡಿದರು.ತಾಲೂಕಿನ ನಗುವನಹಳ್ಳಿಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಅಲ್ಲದೇ, ಬೆಳಗೊಳ ಗ್ರಾಮದ ಪುನೀತ್ ಅಭಿಮಾನಿ ಬಳಗ ಹಾಗೂ ಪಟ್ಟಣದ ಕಾವೇರಿ ಸ್ನಾನಗಟ್ಟದ ಗಣೇಶ ದೇವಾಲಯದ ಸಮಿತಿ ಯುವಕರು ಅಪ್ಪು ಹುಟ್ಟಿದ ದಿನವನ್ನು ಗಣೇಶನಿಗೆ ಪೂಜೆ ಮೂಲಕ ಸಂಭ್ರಮವಾಗಿ ಆಚರಿಸಿಪ್ರವಾಸಿಗರಿಗೆ ಅನ್ನ ಸಂತರ್ಪಣೆ ಮಾಡಿದರು.ಈ ವೇಳೆ ಪುನೀತ್ ರಾಜಕುಮಾರ್ ಅಭಿಮಾನಿಗಳಾದ ಜೈ ರಾಮ್ ಜಿ, ಫಾಸ್ಟ್ ಫುಡ್ ಮುರುಳಿ, ಪಾಲಹಳ್ಳಿ ಮಂಜು, ನಗುವನಹಳ್ಳಿ ಶಿವಸ್ವಾಮಿ, ಲಕ್ಷ್ಮಿನಾರಾಯಣ್, ಉಮೇಶ್ ಕುಮಾರ್, ಬಸವರಾಜು, ಸ್ನಾನಘಟ್ಟ ರವಿ, ಪುರುಷೋತ್ತಮ್, ಗಂಜಾಂ ಸೋಮಶೇಖರ್, ಪ್ರತಾಪ್ ಸಿಂಹ, ನಂದೀಶ್, ಟೆಂಪೋ ಕುಮಾರ, ಟೀ ಕ್ಯಾಂಟೀನ್ ರವಿ, ವಿಜಿ, ವಿನಯ್, ಸತೀಶ್, ಎಲ್‌ಐಸಿ ಶ್ರೀಧರ್, ಕುಮಾರ್, ಕೇಬಲ್ ಶಿವು, ಚೆಲುವಪ್ಪ ಚನ್ನಪ್ಪ, ನಾಗರಾಜು, ಸೇರಿದಂತೆ ಇತರರು ಪಾಲ್ಗೊಂಡಿದ್ದರು.