ಪುಷ್ಪ- 2 ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅವರು 300 ಕೋಟಿ , ರಶ್ಮಿಕಾಗೆ ₹10 ಕೋಟಿ ಸಂಭಾವನೆ?

ಸಾರಾಂಶ

ಪುಷ್ಪ- 2 ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅವರು 300 ಕೋಟಿ ರು. ಹಾಗೂ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರು 10 ಕೋಟಿ ರು. ಪಡೆದಿದ್ದಾರೆ ಎಂದು ವರದಿಗಳು ಹೇಳಿವೆ.

ಮುಂಬೈ: ಪುಷ್ಪ- 2 ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅವರು 300 ಕೋಟಿ ರು. ಹಾಗೂ ನಾಯಕ ನಟಿ ರಶ್ಮಿಕಾ ಮಂದಣ್ಣ ಅವರು 10 ಕೋಟಿ ರು. ಪಡೆದಿದ್ದಾರೆ ಎಂದು ವರದಿಗಳು ಹೇಳಿವೆ.

ಅಲ್ಲು ಅರ್ಜುನ್‌ ಅವರ 300 ಕೋಟಿ ರು. ಸಂಭಾವನೆಯು ಲಾಭ ಮೊತ್ತ ಮತ್ತು ಚಿತ್ರ ಹಂಚಿಕೆಯ ಒಪ್ಪಂದ ಎಂದು ಮೂಲಗಳು ಹೇಳಿವೆ. ಈ ಮೂಲಕ ರಜನೀಕಾಂತ್‌, ಬಾಲಿವುಡ್‌ ಖಾನ್‌ಗಳನ್ನು ಹಿಂದಿಕ್ಕಿದ್ದಾರೆ.

 ಆದರೆ ಅಧಿಕೃತ ಮಾಹಿತಿ ಲಭಿಸಿಲ್ಲ. ಮತ್ತೊಂದೆಡೆ ಮೊದಲು 2 ಕೋಟಿ ರು. ಕೇಳಿದ್ದ ರಶ್ಮಿಕಾ ಮಂದಣ್ಣ ಈಗ 10 ಕೋಟಿ ರು. ಸಂಭಾವನೆ ಪಡೆದು, ದಕ್ಷಿಣದ ಅತಿ ದುಬಾರಿ ನಟಿ ಎನ್ನಿಸಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಆದರೆ ನಟಿ ಮಾತ್ರ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.

Share this article