57ನೇ ವಯಸ್ಸಿಗೆ ಮತ್ತೊಮ್ಮೆ ಅಪ್ಪನಾಗುತ್ತಿರುವ ಅರ್ಬಾಜ್‌ ಖಾನ್‌

Published : Jun 12, 2025, 01:13 PM IST
Arbaz

ಸಾರಾಂಶ

ಸಲ್ಮಾನ್ ಖಾನ್ ಸಹೋದರ, ಬಾಲಿವುಡ್‌ ನಟ, ನಿರ್ಮಾಪಕ ಅರ್ಬಾಜ್‌ ಖಾನ್‌ 57ನೇ ವಯಸ್ಸಿನಲ್ಲಿ ಮತ್ತೊಮ್ಮೆ ತಂದೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತನ್ನ ಪತ್ನಿ ಶೂರಾ ಖಾನ್‌ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದಾರೆ.

  ಸಿನಿವಾರ್ತೆ :  ಸಲ್ಮಾನ್ ಖಾನ್ ಸಹೋದರ, ಬಾಲಿವುಡ್‌ ನಟ, ನಿರ್ಮಾಪಕ ಅರ್ಬಾಜ್‌ ಖಾನ್‌ 57ನೇ ವಯಸ್ಸಿನಲ್ಲಿ ಮತ್ತೊಮ್ಮೆ ತಂದೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತನ್ನ ಪತ್ನಿ ಶೂರಾ ಖಾನ್‌ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದಾರೆ.

‘ಸದ್ಯ ನಾನು ನಟಿಸುತ್ತಿರುವ ‘ಮೈನೆ ಪ್ಯಾರ್‌ ಕಿಯಾ ಫಿರ್‌ ಸೆ’ ಸಿನಿಮಾ ಕಥೆ ತನ್ನ ಬದುಕಿಗೆ ಹತ್ತಿರವಾಗಿದೆ. ನೀವು ಒಮ್ಮೆ ಪ್ರೇಮದಲ್ಲಿ ಬಿದ್ದಿರಬಹುದು, ಆದರೆ ಅದೇ ಕೊನೆಯಲ್ಲ. ಬದುಕಿನಲ್ಲಿ ಮತ್ತೆ ಮತ್ತೆ ಪ್ರೀತಿ ಆಗುತ್ತಿರುತ್ತದೆ’ ಎಂದಿರುವ ನಟ, ‘ಪ್ರೀತಿಸುವುದು ತಪ್ಪಲ್ಲ, ದ್ವೇಷಿಸುವುದು ತಪ್ಪು’ ಎಂದೂ ಹೇಳಿದ್ದಾರೆ.

ಅರ್ಬಾಜ್ ಈ ಹಿಂದೆ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದು, ಇವರಿಗೆ 22 ವರ್ಷದ ಮಗನಿದ್ದಾನೆ. ಎಂಟು ವರ್ಷದ ಹಿಂದೆ ಇವರಿಗೆ ವಿಚ್ಛೇದನವಾಗಿತ್ತು. ಎರಡು ವರ್ಷದ ಕೆಳಗೆ ಶೂರಾ ಖಾನ್‌ ಜೊತೆ ವಿವಾಹವಾಗಿದ್ದರು.

PREV
Read more Articles on

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ