ವಾರದೊಳಗೇ ಅರ್ಧಕ್ಕರ್ಧ ಥೇಟರ್‌ನಿಂದ ಥಗ್‌ಲೈಫ್‌ ಔಟ್

Published : Jun 12, 2025, 12:30 PM IST
Thug Life

ಸಾರಾಂಶ

ಕಮಲ್‌ ಹಾಸನ್‌ ನಿರ್ದೇಶನದ ‘ಥಗ್‌ಲೈಫ್‌’ ರಿಲೀಸ್‌ ಆದ ವಾರದೊಳಗೇ ಅರ್ಧಕ್ಕರ್ಧ ಥೇಟರ್‌ನಿಂದ ಹೊರದಬ್ಬಲ್ಪಟ್ಟಿದೆ.

 ಸಿನಿವಾರ್ತೆ

ಕಮಲ್‌ ಹಾಸನ್‌ ನಿರ್ದೇಶನದ ‘ಥಗ್‌ಲೈಫ್‌’ ರಿಲೀಸ್‌ ಆದ ವಾರದೊಳಗೇ ಅರ್ಧಕ್ಕರ್ಧ ಥೇಟರ್‌ನಿಂದ ಹೊರದಬ್ಬಲ್ಪಟ್ಟಿದೆ. ಭಾರತದಲ್ಲಿ 4917 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದ ಈಗ ಕೇವಲ 2089 ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಅದರೆ ಎಷ್ಟೋ ಸ್ಕ್ರೀನ್‌ಗಳಲ್ಲಿ ಜನರಿಲ್ಲದೆ ಸಿನಿಮಾ ಪ್ರದರ್ಶನ ರದ್ದಾಗಿದೆ.

ಆರನೇ ದಿನಕ್ಕೆ ಈ ಸಿನಿಮಾ ಒಟ್ಟು 41 ಕೋಟಿ ರು.ಗಳಷ್ಟು ಮಾತ್ರ ಕಲೆಕ್ಷನ್‌ ಮಾಡುವುದು ಸಾಧ್ಯವಾಗಿದೆ. ಇದರ ಜೊತೆಗೇ ಬಿಡುಗಡೆಯಾದ ಬಾಲಿವುಡ್‌ನ ‘ಹೌಸ್‌ಫುಲ್‌ 5’ ಸಿನಿಮಾ, ‘ಥಗ್‌ಲೈಫ್‌’ ಅನ್ನು ಸಲೀಸಾಗಿ ಹಿಂದಕ್ಕೆ ಹಾಕಿ ಬಿಡುಗಡೆಯಾದ ನಾಲ್ಕೇ ದಿನದಲ್ಲಿ 100 ಕೋಟಿ ಕ್ಲಬ್‌ ಸೇರಿದೆ.

ಕಮಲ್‌ ನಟನೆ ನಿರ್ಮಾಣದ ‘ಥಗ್‌ಲೈಫ್‌’ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸಿದ್ದು, ಸಿಂಬರಸನ್‌, ತ್ರಿಶಾ, ಅಭಿರಾಮಿ ಮುಖ್ಯಪಾತ್ರಗಳಲ್ಲಿದ್ದಾರೆ.

PREV
Read more Articles on

Recommended Stories

ವೈರಲ್ ಆಗುತ್ತಿರುವ ಸುದೀಪ್‌ ಹೊಸ ಲುಕ್ಕು : ಗಮನ ಸೆಳೆಯುತ್ತಿರುವ ಹೊಸ ಹೇರ್ ಸ್ಟೈಲ್‌
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಮಿಳು ನಟ ಮದನ್ ಬಾಬ್ ನಿಧನ