ಕನ್ನಡಪ್ರಭವಾರ್ತೆ
ಆರ್‌ವಿ ವಿಶ್ವವಿದ್ಯಾಲಯದ ಚಲನಚಿತ್ರ, ಮಾಧ್ಯಮ ಮತ್ತು ಸೃಜನಶೀಲ ಕಲೆಗಳ ವಿಭಾಗವು ಆಯೋಜಿಸಿದ್ದ ಚಲನಚಿತ್ರ ನಿರ್ಮಾಣ ಕುರಿತ ಕಾರ್ಯಾಗಾರದಲ್ಲಿ ಅವರು ಭಾಗಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ನಿರ್ದೇಶಿಸಿದ್ದ, ಸನ್ನಿ ಡಿಯೋಲ್ ನಟನೆಯ ‘ಅರ್ಜುನ್’ ಚಿತ್ರದ ಪ್ರದರ್ಶನ ಮತ್ತು ಸಂವಾದ ನಡೆಯಿತು.
ಬೆಂಗಳೂರಿನ ಜಯನಗರದ ಮೂರನೇ ಬ್ಲಾಕ್‌ನಲ್ಲಿರುವ ಆರ್‌ವಿ ವಿಶ್ವವಿದ್ಯಾನಿಲಯದಲ್ಲಿ ಅಕ್ಟೋಬರ್ 25ರವರೆಗೆ ಕಾರ್ಯಾಗಾರ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಸಿನಿಮಾ ಕ್ಷೇತ್ರದ ಕುರಿತು ತಿಳುವಳಿಕೆ ಒದಗಿಸಲಿದೆ.ಸ್ಕೂಲ್ ಆಫ್ ಫಿಲ್ಮ್, ಮೀಡಿಯಾ ಮತ್ತು ಕ್ರಿಯೇಟಿವ್ ಆರ್ಟ್ಸ್‌ನ ಸ್ಥಾಪಕ ಡೀನ್ ಮತ್ತು ಪ್ರಾಧ್ಯಾಪಕ ಪ್ರೊ.(ಡಾ). ಪಿಯೂಷ್ ರಾಯ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್, ಕೆಜಿಎಫ್ ಛಾಯಾಗ್ರಾಹಕ ಭುವನ್ ಗೌಡ, ನಿರ್ದೇಶಕ- ಗೀತರಚನೆಕಾರ ಸಂತೋಷ್ ಆನಂದರಾಮ್ ಕಾರ್ಯಾಗಾರದಲ್ಲಿ ತರಬೇತಿ ನೀಡಲಿದ್ದಾರೆ.