ಕನ್ನಡಪ್ರಭ ಸಿನಿವಾರ್ತೆ
ಈ ವೇಳೆ ರಾಧಿಕಾ ಕುಮಾರಸ್ವಾಮಿ, ‘ಈ ಚಿತ್ರ ಆರಂಭವಾದಾಗಿನಿಂದ ಸಾಕಷ್ಟು ಅಡೆತಡೆಗಳು ಎದುರಾಗಿವೆ. ಹಾಗಾಗಿ ಚಿತ್ರದ ಬಿಡುಗಡೆಯ ಯೋಚನೆಯನ್ನೇ ಮಾಡಿರಲಿಲ್ಲ. ಆದರೆ ಈಗ ಸಡನ್ನಾಗಿ ಯಾವುದೋ ಸ್ಫೂರ್ತಿಯಿಂದ ರಿಲೀಸ್ ಮಾಡಲು ಮುಂದಾಗಿದ್ದೇನೆ. ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದು. ಪ್ರೇಕ್ಷಕರಿಗೆ ಭೈರಾದೇವಿ ಇಷ್ಟ ಆದರೆ ಇನ್ನೊಂದು ಸಿನಿಮಾ ಮಾಡುತ್ತೀನಿ. ಇಷ್ಟ ಆಗಲಿಲ್ಲ ಎಂದರೆ ಚಿತ್ರರಂಗದಿಂದ ದೂರ ಆಗಿಬಿಡುತ್ತೀನಿ’ ಎಂದಿದ್ದಾರೆ. ರಮೇಶ್ ಅರವಿಂದ್, ‘ಖಡಕ್ ಪೊಲೀಸ್ ಆಫೀಸರ್ ಪಾತ್ರ ನನ್ನದು. ಆದರೆ ಈ ಚಿತ್ರದಲ್ಲಿ ನನ್ನ ವೈರಿ ರಾಜ್ಯದವರಲ್ಲ, ಈ ದೇಶದವರಲ್ಲ, ಈ ಲೋಕದವರೇ ಅಲ್ಲ. ಬೇರೆ ಲೋಕದ ಶಕ್ತಿಯ ವಿರುದ್ಧ ಹೋರಾಡುವ ಪಾತ್ರ’ ಎಂದರು. ನಿರ್ದೇಶಕ ಶ್ರೀಜೈ, ನಟಿ ಅನು ಪ್ರಭಾಕರ್ ಉಪಸ್ಥಿತರಿದ್ದರು.