ತವರಿನಲ್ಲಿ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Jan 20, 2026, 01:45 AM ISTUpdated : Jan 20, 2026, 05:13 AM IST
Mandya

ಸಾರಾಂಶ

ಬಿಗ್ ಬಾಸ್-12 ನೇ ಆವೃತ್ತಿ ರಿಯಾಲಿಟಿ ಶೋನಲ್ಲಿ ವಿಜೇತ ಗಿಲ್ಲಿ (ನಟರಾಜ್‌)ಯ ತವರು ಮಳವಳ್ಳಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಬೃಹತ್ ಹೂವಿನ ಹಾರಹಾಕಿ ಹೂಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಂಡರು.

  ಮಳವಳ್ಳಿ :  ಬಿಗ್ ಬಾಸ್-12ನೇ ಆವೃತ್ತಿ ರಿಯಾಲಿಟಿ ಶೋನಲ್ಲಿ ವಿಜೇತ ಗಿಲ್ಲಿ (ನಟರಾಜ್‌)ಯ ತವರು ಮಳವಳ್ಳಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಬೃಹತ್ ಹೂವಿನ ಹಾರಹಾಕಿ ಹೂಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತಿಸಿ ಬರ ಮಾಡಿಕೊಂಡರು.

ಪಟ್ಟಣದ ಹೊರ ಭಾಗದಲ್ಲಿರುವ ಶಕ್ತಿ ದೇವತೆ ಶ್ರೀದಂಡಿನ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಗ್ ಬಾಸ್ ಟ್ರೋಫಿಯೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಪಟ್ಟಣಕ್ಕೆ ಆಗಮಿಸಿದರು. ಅನಂತ್ ವೃತ್ತದ ಬಳಿ ಗಿಲ್ಲಿಗೆ ಬೃಹತ್ ಹೂವಿನ ಹಾರ ಹಾಕಿ ಹೂಮಳೆ ಸುರಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕರ ದಂಡು ಜಯ ಘೋಷದೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬೈಕ್‌ ರ್‍ಯಾಲಿ:

ಶ್ರೀದಂಡಿನ ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತೆರದ ವಾಹನದಲ್ಲಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿಯನ್ನು ದಡದಪುರದವರೆವಿಗೂ ಹಮ್ಮಿಕೊಳ್ಳಲಾಗಿತ್ತು.

ಸೆಲ್ಫಿಗೆ ಮುಗಿಬಿದ್ದ ಯುವಕರು:

ಗಿಲ್ಲಿ ನಟನೊಂದಿಗೆ ಫೋಟೋ ತೆಗೆದುಕೊಳ್ಳಲು ಯುವಕ-ಯುವತಿಯರು ಮುಗಿಬಿದ್ದರು. ಫೋಟೋ ತೆಗದುಕೊಳ್ಳುವ ಸಂದರ್ಭದಲ್ಲಿ ಎಳೆದಾಡಿದರು. ಪೊಲೀಸರು ಯುವಕರನ್ನು ನಿಯಂತ್ರಿಸುವಲ್ಲಿ ಹರೆಸಾಹಸಪಟ್ಟರು.

ಸಾವಿರಾರು ಮಂದಿ ಭಾಗಿ:

ಗಿಲ್ಲಿನಟನನ್ನು ನೋಡಲು ಮೈಸೂರು, ಚಾಮರಾಜನಗರ, ಹನೂರು, ಕೊಳ್ಳೇಗಾಲ ಬನ್ನೂರು ಸೇರಿದಂತೆ ವಿವಿಧೆಡೆಯಿಂದ ಯುವಕ-ಯುವತಿಯರ ದಂಡೇ ಆಗಮಿಸಿತ್ತು. ಪಟ್ಟಣದಲ್ಲಿ ಗಿಲ್ಲಿ ಅಭಿಮಾನಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಗಿಲ್ಲಿ ಗಿಲ್ಲಿ ಎಂಬ ಘೋಷಣೆಗಳನ್ನು ಕೂಗಿ ಅಭಿಮಾನ ಮೆರೆದರು.

ಪ್ರತಿಯೊಂದು ಹಳ್ಳಿಗಳಲ್ಲಿ ಸ್ವಾಗತ:

ಮಳವಳ್ಳಿ ಪಟ್ಟಣದಿಂದ ಸುಲ್ತಾನ್ ರಸ್ತೆಯ ಮೂಲಕ ಹುಟ್ಟೂರು ದಡದಪುರಕ್ಕೆ ಆಗಮಿಸುವ ಸಂದರ್ಭದಲ್ಲಿ ಪ್ರತಿಯೊಂದು ಗ್ರಾಮದ ಗೇಟ್‌ನಲ್ಲಿ ಗೆಲ್ಲಿಗೆ ಮಂಗಳಾರತಿ ಎತ್ತಿ ತಮಟೆ ವಾದ್ಯಗಳೊಂದಿಗೆ ಈಡುಗಾಯಿ ಒಡೆದು ಸ್ವಾಗತಿಸಿದರು.

ಮನೆಗೆದ್ದ ಗಿಲ್ಲಿ:

ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ಗಿಲ್ಲಿ ನಟ ರೀಲ್ಸ್ ಮೂಲಕ ತನ್ನ ಮಾತಿನ ಚಟಾಕಿಯ ಮೂಲಕ ಜನರ ಮನಸ್ಸನ್ನು ಗೆದ್ದಿದ್ದ ಗಿಲ್ಲಿನಟ ಖಾಸಗಿ ವಾಹಿನಿಯಲ್ಲಿ ನಡೆದ ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುರಲ್ಸ್ ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. ಪ್ರಸ್ತುತದಲ್ಲಿ ಕನ್ನಡ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್-೧೨ನೇ ಆವೃತ್ತಿಯಲ್ಲಿ ವಿಜೇತರಾಗಿ ಗಿಲ್ಲಿಗೆ ಸಾವಿರಾರು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತ ಕೋರಿದ ದೃಶ್ಯ ಅಭಿಮಾನಕ್ಕೆ ಮಿತಿ ಇಲ್ಲದಂತಿತ್ತು.

ಬಿಗ್‌ಬಾಸ್‌ನಲ್ಲಿ ಗೆಲ್ಲಿನಟ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗಿಲ್ಲಿನಟ ಆಗಮಿಸಿದ ವೇಳೆ ಆರ್.ಆರ್ ರೆಸ್ಟೊರೆಂಟ್‌ನಲ್ಲಿ ಮಾಜಿ ಪುರಸಭೆ ಸದಸ್ಯ ರಾಜು ಅವರ ನೇತೃತ್ವದಲ್ಲಿ ಮಸ್ರೂಮ್ ಬಿರಿಯಾನಿ, ಚಿಕನ್ ಬಿರಿಯಾನಿ ಹಾಗೂ ಕಾಲ್‌ಸೂಪ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಯಿತು. ನಂತರ ಗಿಲ್ಲಿನಟನ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನವನ್ನು ಮೆರೆದರು.

ಪೊಲೀಸ್ ಭದ್ರತೆ:

ರಿಯಾಲಿಟಿ ಶೋನಲ್ಲಿ ಗೆಲುವು ಸಾಧಿಸಿ ತಮ್ಮ ಊರಿಗೆ ಆಗಮಿಸುವ ಗಿಲ್ಲಿನಟನನ್ನು ನೋಡಲು ಯುವಕರು ಸಾವಿರಾರು ಸಂಖ್ಯೆಯಲ್ಲಿ ಯುವಕರು ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಹಾಗೂ ಡಿವೈಎಸ್‌ಪಿ ಯಶವಂತಕುಮಾರ್‌ ನೇತೃತ್ವದಲ್ಲಿ ಪಟ್ಟಣದ ಹಾಗೂ ತಾಲೂಕಿನ ದಡದಪುರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಜನದಟ್ಟಣೆ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

ಪ್ರಶಸ್ತಿಗೆ ಮುತ್ತು:

ಪಟ್ಟಣದ ಅನಂತ್‌ರಾಂ ವೃತ್ತದಲ್ಲಿ ಬಿಗ್‌ಬಾಸ್‌ನಲ್ಲಿ ನೀಡಿದ ಪ್ರಶಸ್ತಿಯನ್ನು ಪ್ರದರ್ಶಿಸಿದ ಗಿಲ್ಲಿ ಸಾವಿರಾರು ಅಭಿಮಾನಿಗಳ ಮುಂದೆ ಪ್ರಶಸ್ತಿಯನ್ನು ಪ್ರದರ್ಶಿಸಿ ಮುತ್ತು ನೀಡಿದರು.ಬಿಗ್ ಬಾಸ್-೧೨ನೇ ಆವೃತ್ತಿ ರಿಯಾಲಿಟಿ ಶೋನಲ್ಲಿ ಗೆದ್ದ ನನಗೆ ಇಷ್ಟೊಂದು ಅಭಿಮಾನದಿಂದ ಸ್ವಾಗತಿಸಿ ಬರಮಾಡಿಕೊಂಡಿದ್ದನ್ನು ಎಂದಿಗೂ ಮರೆಯುವುದಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿರುವುದು ತುಂಬಾ ಸಂತೋಷವಾಗಿದೆ. ನಿಮ್ಮ ಅಭಿಮಾನಕ್ಕೆ ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ಶಕ್ತಿ ದೇವತೆ ದಂಡಿನ ಮಾರಮ್ಮನ ಪೂಜೆ ಸಲ್ಲಿಸಿ ನನ್ನ ಹುಟ್ಟೂರಿನ ಜನರನ್ನು ನೋಡುತ್ತಿರುವುದು ಖುಷಿ ಕೊಟ್ಟಿದೆ.

- ಗಿಲ್ಲಿನಟ, ಬಿಗ್‌ಬಾಸ್‌ ವಿಜೇತ

ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂದು ಬೆಂಗಳೂರಿಗೆ ಬಂದಿದ್ದ. ನಾವು ಬೆಂಗಳೂರಲ್ಲೇ ಇದ್ದರೂ ನಮ್ಮ ಮನೆಗೆ ಬರಲಿಲ್ಲ, ನಮ್ಮ ಬಳಿ ಒಂದು ದಿನವೂ ಕಷ್ಟ ಹೇಳಿಕೊಳ್ಳಲಿಲ್ಲ, ಗಿಲ್ಲಿ ತುಂಬಾ ಕಷ್ಟ ಪಟ್ಟಿದ್ದಾನೆ, ಸಿನಿಮಾ ಹುಚ್ಚು ಅಂಟಿಸಿಕೊಂಡರೇ ಉದ್ದಾರ ಆಗಲ್ಲ ಅಂತ ಹೇಳ್ತಿದ್ವಿ, ಆದರೆ ಗಿಲ್ಲಿ ಅಂದುಕೊಂಡಂತೆ ಸಾಧಿಸಿದ್ದಾನೆ. ಕರ್ನಾಟಕದ ಜನರ ಪ್ರೀತಿಗೆ ಯಾವಾಗಲೂ ಋಣಿ.

-ಚಂದ್ರಮ್ಮ ಗಿಲ್ಲಿ ನಟ ದೊಡ್ಡಮ್ಮ.

ಮೈಸೂರಿನಿಂದ ಕಾಲೇಜಿಗೆ ಹೋಗದೇ ಗಿಲ್ಲಿನಟನನ್ನು ನೋಡಲು ಬಂದಿದ್ದೇವೆ. ಬಡವರ ಮಕ್ಕಳು ಬೆಳೆಯಬೇಕೆಂಬ ಉದ್ದೇಶದಿಂದ ನಾವೇಲ್ಲಾರೂ ಗಿಲ್ಲಿಗೆ ವೋಟ್ ಮಾಡಿದ್ದೇವು. ಗಿಲ್ಲಿ ಗೆದ್ದಿರುವುದು ಖುಷಿ ತಂದಿದೆ. ಬಡವರ ಮಕ್ಕಳನ್ನು ನಾಡಿನ ಜನತೆ ಬೆಳೆಸಿದ್ದಾರೆ. ಗಿಲ್ಲಿ ಬಡವರಿಗೆ ಅನುಕೂಲ ಮಾಡಿಕೊಡಬೇಕು.

- ನಿಶ್ವಿತಾ, ಕಾಲೇಜು ವಿದ್ಯಾರ್ಥಿನಿ, ಮೈಸೂರು

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಸಾಹಿತ್ಯ, ಅಂಬೇಡ್ಕರ್‌, ಸಂವಿಧಾನದ ಓದು ನನ್ನ ಬದುಕಿನ ನಡೆ ಬದಲಿಸುತ್ತಿದೆ : ದುನಿಯಾ ವಿಜಯ್‌
ಗಿಲ್ಲಿ ನಟಗೆ ಬಿಗ್‌ಬಾಸ್‌ 12ನೇ ಸೀಸನ್‌ ಕಿರೀಟ