ಚಂದನ್‌ ಶೆಟ್ಟಿ-ನಿವೇದಿತಾ ಡಿವೋರ್ಸ್‌

ಸಾರಾಂಶ

ಗುರುವಾರದವರೆಗೂ ಗಂಡ-ಹೆಂಡ್ತಿಯಾಗಿದ್ದ ಚಂದನ್‌ ಶೆಟ್ಟಿ ನಿವೇದಿತಾ ಗೌಡ ಜೋಡಿ ಇಂದಿ ನೀನ್ಯಾರೋ? ನಾನ್ಯಾರೋ? ಅಂತಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ.

ಬೆಂಗಳೂರು :  ಗುರುವಾರದವರೆಗೂ ಗಂಡ-ಹೆಂಡ್ತಿಯಾಗಿದ್ದ ಚಂದನ್‌ ಶೆಟ್ಟಿ ನಿವೇದಿತಾ ಗೌಡ  ಜೋಡಿ ಇಂದಿ ನೀನ್ಯಾರೋ? ನಾನ್ಯಾರೋ? ಅಂತಿದ್ದಾರೆ.  ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ.

ಅದು ಮೈಸೂರು ಯುವ ದಸರಾ  ವೇದಿಕೆಯಲ್ಲಿ ಚಂದನ್‌ ಶೆಟ್ಟಿ ಆಗಷ್ಟೇ ತಮ್ಮ ಕಾರ್ಯಕ್ರಮ ಮುಗಿಸಿದ್ದರು. ಮುಗಿಸಿದವರೇ ನೇರವಾಗಿ ಮಂಡಿಯೂರಿ, ನಿವೇದಿತಾ ಗೌಡಗೆ  ಪ್ರಪೋಸ್‌ ಮಾಡಿಬಿಟ್ಟರು. ನೆರೆದಿದ್ದ ಜನಸ್ತೋಮ 'ಹೋ..' ಎಂದು ಕೂಗಿ ಸಂಭ್ರಮಿಸಿತ್ತು. ಅದಾದ ನಂತರ ಆಗಿದ್ದು ಮಾತ್ರ ವಿವಾದ. ಯುವ ದಸರಾ ಇಂಥದ್ದಕ್ಕೆಲ್ಲಾ ವೇದಿಕೆಯಲ್ಲ ಅನ್ನೋದರೊಂದಿಗೆ ಅಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣನವರ ಟೀಕೆಗೂ ಕಾರಣವಾಗಿತ್ತು. 

ಚಂದನ್‌ ಶೆಟ್ಟಿ ವರ್ತನೆಗೆ ಅವರು ತೀವ್ರ ಅಸಮಾಧಾನ ಕೂಡ ವ್ಯಕ್ತಪಡಿಸಿದ್ದರು. ಕೊನೆಗೆ ಚಂದನ್‌ ಶೆಟ್ಟಿಯೇ ಇದಕ್ಕೆ ಕ್ಷಮೆ ಕೇಳಿದರೆ, ಅಂದಿನ ಮೈಸೂರು ಕೊಡಗು ಸಂಸದ ಪ್ರತಾಪ್‌ ಸಿಂಹ ಹೊಸ ಜೋಡಿಯ ಪರವಾಗಿ ಮಾತನಾಡಿ ವಿಚಾರ ತಣ್ಣಗೆ ಮಾಡಿದ್ದರು. ಅದಾಗಿ ಸ್ವಲ್ಪವೇ ದಿನಗಳಲ್ಲಿ 2020ರ ಫೆಬ್ರವರಿ 26 ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾಗಿದ್ದರು. ಬಿಗ್‌ ಬಾಸ್‌ನಲ್ಲಿ   ಚಂದನ್‌ ಶೆಟ್ಟಿ, ನಿವೇದಿತಾ ಗೌಡರನ್ನು ತಂಗಿ ತಂಗಿ ಎಂದೇ ಕರೆಯುತ್ತಿದ್ದರು. ಕೊನೆಗೆ ಇದೇ ಜೋಡಿ ಗಂಡ ಹೆಂಡ್ತಿಯಾದಾಗ ಎಲ್ಲರೂ ಅಚ್ಚರಿ ಪಟ್ಟಿದ್ದರು. ಆದರೆ, ಇವರಿಬ್ಬರ ಸಂಸಾರ ತೀರಾ ಕಳೆದ ವಾರದವರೆಗೂ ಚೆನ್ನಾಗಿಯೇ ಇತ್ತು. ಗುರುವಾರದವರೆಗೂ ಗಂಡ-ಹೆಂಡ್ತಿಯಾಗಿದ್ದ ಜೋಡಿ ಇಂದಿ ನೀನ್ಯಾರೋ? ನಾನ್ಯಾರೋ? ಅಂತಿದ್ದಾರೆ.

  ಒಂದೇ ದಿನದಲ್ಲಿ ವಿಚ್ಛೇದನ ಸಿಕ್ಕಿದೆ. ಫ್ಯಾಮಿಲಿ ಕೋರ್ಟ್‌ನಲ್ಲಿ ಗುರುವಾರ ಅರ್ಜಿ ಹಾಕಿದ್ದ ಈ ಜೋಡಿಗೆ ಶುಕ್ರವಾರ ವಿಚ್ಛೇದನ ಸಿಕ್ಕಿದೆ. ಅರೇ ಇದೇನಿದು ದೇಶದ ಎಲ್ಲಾ ಕಡೆ ವಿಚ್ಛೇದನ ಅಂದ್ರೆ ವರ್ಷಗಳ ಕಾಲ ನಡೆಯುವ ಪ್ರಕ್ರಿಯೆ ಆಗಿರುವಾಗ ಇವರಿಗೆ ವಿಚ್ಛೇದನ ಒಂದೇ ದಿನದಲ್ಲಿ ಸಿಕ್ಕಿದ್ದಾದರೂ ಹೇಗೆ ಎನ್ನುವ ಅನುಮಾನ ವ್ಯಕ್ತವಾಗಿತ್ತು. 

ಕೆಲವರು ಇವರು ವಿಚ್ಛೇದನ ಪಡೆದಿದ್ದೇ ಸುಳ್ಳು ಎನ್ನತೊಡಗಿದರು. ಆದರೆ, ಸಂಜೆಯ ವೇಳೆಗೆ ಇವರಿಬ್ಬರೂ ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಸುದ್ದಿ ಹಂಚಿಕೊಂಡಾಗ ಖಚಿತವಾಗಿತ್ತು. ಆದರೆ, ಒಂದೇ ದಿನದಲ್ಲಿ ಇವರಿಗೆ ವಿಚ್ಛೇದನ ಸಿಕ್ಕಿದ್ದು ಹೇಗೆ ಎನ್ನುವುದಕ್ಕೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಇದಕ್ಕೆ ಕಾರಣವಾಗಿದ್ದು, ಫ್ಯಾಮಿಲಿ ಕೋರ್ಟ್‌ನ 13ಬಿ ಸೆಕ್ಷನ್‌..

Share this article