ಚಿಕ್ಕಣ್ಣ ಇನ್ನೆರಡು ವರ್ಷದಲ್ಲಿ ದೊಡ್ಡ ಸೂಪರ್‌ ಸ್ಟಾರ್‌: ಶಿವಣ್ಣ

Published : Nov 23, 2026, 01:02 PM IST
Shiva Rajkumar Praises Chikkanna

ಸಾರಾಂಶ

ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಲಕ್ಷ್ಮೀಪುತ್ರ’ದ ಟ್ರೇಲರನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ನ. 27ರಂದು ಈ ಸಿನಿಮಾ ತೆರೆಗೆ ಬರಲಿದೆ.ಎ.ಪಿ. ಅರ್ಜುನ್‌ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರ

ಸಿನಿವಾರ್ತೆ

ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಲಕ್ಷ್ಮೀಪುತ್ರ’ದ ಟ್ರೇಲರನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ನ. 27ರಂದು ಈ ಸಿನಿಮಾ ತೆರೆಗೆ ಬರಲಿದೆ.

ಎ.ಪಿ. ಅರ್ಜುನ್‌ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ

ಎ.ಪಿ. ಅರ್ಜುನ್‌ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಅನ್ನಪೂರ್ಣ ಎ.ಪಿ. ಅರ್ಜುನ್‌ ನಿರ್ಮಾಣ ಮಾಡಿದ್ದು, ರವಿಕುಮಾರ್‌ ಸಹ ನಿರ್ಮಾಪಕರಾಗಿದ್ದಾರೆ. ವಿಜಯ್‌ ಎಸ್‌. ಸ್ವಾಮಿ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಚಿಕ್ಕಣ್ಣ ಹಳ್ಳಿ ಹುಡುಗನ ಗೆಟಪ್‌ನಲ್ಲಿ ಮಿಂಚಿದ್ದು, ತಾರಾ ಅವರ ತಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಟ್ರೇಲರ್‌ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್‌, ‘ಚಿಕ್ಕಣ್ಣ ಈ ಚಿತ್ರದಲ್ಲಿ ತುಂಬಾ ಲೀಲಾಜಾಲವಾಗಿ ಡ್ಯಾನ್ಸ್‌ ಮಾಡಿದ್ದಾರೆ. ಅವರ ಡ್ಯಾನ್ಸ್‌ ನೋಡಿದರೆ ನನಗೆ ಪ್ರಭುದೇವ ನೆನಪಾಗುತ್ತಾರೆ. ಚಿಕ್ಕಣ್ಣ ಅವರ ಹಾಸ್ಯದಲ್ಲಿ ಆಡಂಬರವಿಲ್ಲ, ಬಹಳ ಸಟಲ್‌ ಆಗಿ ನಟಿಸುತ್ತಾರೆ. ಬರೆದಿಟ್ಟುಕೊಳ್ಳಿ, ಇನ್ನೆರಡು-ಮೂರು ವರ್ಷಗಳಲ್ಲಿ ಚಿಕ್ಕಣ್ಣ ದೊಡ್ಡ ಸೂಪರ್‌ ಸ್ಟಾರ್‌ ಆಗುತ್ತಾರೆ’ ಎಂದರು. ನಾಯಕಿ ವಂದಿತಾ ಹಾಗೂ ತಾರಾ ಅಭಿನಯಕ್ಕೂ ಮೆಚ್ಚುಗೆ ಸೂಚಿಸಿದರು.

ಶಿವಣ್ಣನ ಮಾತುಗಳಿಗೆ ಭಾವುಕರಾದ ಚಿಕ್ಕಣ್ಣ, ‘ಅಣ್ಣಾವ್ರ ಮಗನ ಬಾಯಲ್ಲಿ ಇಂತಹ ಮಾತು ಕೇಳಿರುವುದು ನಮ್ಮ ತಂದೆ-ತಾಯಿ ಮಾಡಿದ ಪುಣ್ಯ. ಈ ಮಾತು ಕೇಳಿದಾಗಲೇ ನಾನು ಸೂಪರ್‌ ಸ್ಟಾರ್‌ ಆದಷ್ಟೇ ಖುಷಿಯಾಯಿತು. ಇದು ಕೇವಲ ಕಾಮಿಡಿ ಅಥವಾ ಕಮರ್ಷಿಯಲ್‌ ಸಿನಿಮಾವಲ್ಲ. ಪ್ರತಿಯೊಬ್ಬ ಮಧ್ಯಮ ವರ್ಗದ ಹುಡುಗನ ಬದುಕಿನ ನೈಜ ಘಟನೆಗಳ ಕಥೆ’ ಎಂದರು.

ಪ್ರಶಾಂತ್‌ ರಾಜಪ್ಪ ಮತ್ತು ವಿಜಯ್‌ ಈಶ್ವರ್‌ ಸಂಭಾಷಣೆ ಬರೆದಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ವಂದಿತಾ, ತಾರಾ, ಮಿತ್ರ, ಶಿವರಾಜ್‌ ಕೆ.ಆರ್‌. ಪೇಟೆ, ಧರ್ಮಣ್ಣ, ಕುರಿ ಪ್ರತಾಪ್‌ ನಟಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ತಮ್ಮಿಬ್ಬರ ಮಕ್ಕಳ ಚಿತ್ರದಲ್ಲಿ ಹೀರೋ ಆದ ನಟ ಜಗ್ಗೇಶ್‌
15 ವರ್ಷಗಳ ಸಿನಿ ಪಯಣದ ಮಹಾ ನಿರೀಕ್ಷೆ ಶಂಕರಾಭರಣ : ಶೈನ್ ಶೆಟ್ಟಿ