ಕಳೆದ ಕೆಲವು ಸಮಯದಿಂದ ಭಾರತೀಯ ಸಿನಿಮಾರಂಗದ ನಾಯಕಿಯರು ಕೊಂಚ ಮೇಕಪ್ ಅಪ್ ಕಡಿಮೆ ಮಾಡ್ಕೊಂಡಿದ್ದಾರ ಅನ್ನುವ ಅನುಮಾನ ಹಲವರಿಗೆ ಬಂದಿರಬಹುದು. ಇದಕ್ಕೆ ಕಾರಣ ಕ್ಲೀನ್ ಗರ್ಲ್ ಮೇಕಪ್ ಟ್ರೆಂಡ್.
ಮೇಕಪ್ ಮಾಡ್ಕೊಳ್ಬೇಕು, ಆದರೆ ಮೇಕಪ್ ಮಾಡಿದ ಹಾಗಿರಬಾರದು ಅನ್ನುವುದು ಈ ಹೊಸ ಟ್ರೆಂಡಿನ ಧ್ಯೇಯ ವಾಕ್ಯ. ಇದನ್ನು ಪ್ರಾಮಾಣಿಕವಾಗಿ ಫಾಲೋ ಮಾಡುತ್ತಿರುವ ದೀಪಿಕಾ ಪಡುಕೋಣೆ, ಅಲಿಯಾ ಭಟ್ ಮೊದಲಾದವರು ಅಪ್ಪಿತಪ್ಪಿಯೂ ಢಾಳಾದ ಮೇಕಪ್‌ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ತೆರೆಯ ಹಿಂದೆ ಬಿಡಿ, ತೆರೆಯ ಮೇಲೂ ಮೇಕಪ್ ಹಚ್ಚಿಕೊಳ್ಳದೇ ಕಾಣಿಸಿಕೊಳ್ಳುವ ಸಾಯಿ ಪಲ್ಲವಿ ಅನ್ನುವ ಸಹಜ ಸುಂದರಿಯನ್ನು ಈ ಟ್ರೆಂಡಿಗೆ ಬ್ರಾಂಡ್ ಅಂಬಾಸಿಡರ್ ಅಂತ ಫ್ಯಾಶನ್ ಪ್ರಿಯರು ಜೋಕ್ ಮಾಡುತ್ತಿದ್ದಾರೆ.
ಕ್ಲೀನ್ ಗರ್ಲ್ ಮೇಕಪ್ ಟ್ರೆಂಡ್‌ನಲ್ಲಿ ಮಿನಿಮಮ್ ಬೇಸ್ ಮೇಕಪ್ ಇರುತ್ತದೆ. ತುಟಿಗೆ ನ್ಯೂಡ್ ಲಿಪ್‌ಸ್ಟಿಕ್ ಬಳಸುತ್ತಾರೆ. ಹೌದೋ ಅಲ್ಲವೋ ಅನ್ನುವಷ್ಟು ಕೆನ್ನೆಯ ಮೂಳೆಗೆ ಬ್ಲಶ್ ಸವರುತ್ತಾರೆ. ದಕ್ಷಿಣದಲ್ಲಿ ತಮನ್ನಾ ಭಾಟಿಯಾ ಬಹಳ ಸಲ ಈ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಎಥ್ನಿಕ್ ವೇರ್ ಮಾತ್ರವಲ್ಲ, ಮಾಡರ್ನ್ ಡ್ರೆಸ್‌ಗೂ ಬಹಳ ಮ್ಯಾಚ್ ಆಗುವ ಮೇಕಪ್ ಟ್ರೆಂಡ್ ಇದು. ಇದಕ್ಕೆ ಆ್ಯಕ್ಸೆಸರೀಸ್ ಕೊಂಚ ಮಜಬೂತಿದ್ದರೆ ಲುಕ್ ಮಾರ್ವಲೆಸ್ ಆಗಿರುತ್ತದೆ ಅನ್ನುವುದು ಸೌಂದರ್ಯ ಶಾಸ್ತ್ರಜ್ಞರ ಅಭಿಪ್ರಾಯ.