ಸಿನಿವಾರ್ತೆ
ವಿಜಯ್ ರಾಘವೇಂದ್ರ ನಟನೆಯ ‘ಮಹಾನ್’ ಚಿತ್ರದ ಮೂಲಕ ನಟಿ ವರ್ಷ ಬೊಳ್ಳಮ್ಮ ಕನ್ನಡಕ್ಕೆ ಬರುತ್ತಿದ್ದಾರೆ. ತಮಿಳಿನ ‘ಬಿಗಿಲ್’ ಹಾಗೂ ‘96’ ಚಿತ್ರಗಳ ಮೂಲಕ ಜನಪ್ರಿಯತೆ ಪಡೆದುಕೊಂಡ ವರ್ಷ ಬೊಳ್ಳಮ್ಮ ಮೂಲತಃ ಕನ್ನಡದವರು. ‘ನನ್ನ ಮಾತೃಭಾಷೆಯ ಸಿನಿಮಾ, ರೈತರ ಕುರಿತಾದ ಚಿತ್ರ.
ರೈತರ ಬದುಕಿನ ಬವಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ. ಸಾಮಾಜಿಕ ಕಳಕಳಿ ಇರುವ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ’ ಎಂಬುದು ವರ್ಷ ಬೊಳ್ಳಮ್ಮ ಅವರ ಮಾತು.
ರಾಧಿಕಾ ನಾರಾಯಣ್, ಮಿತ್ರ, ನಮ್ರತ ಗೌಡ ಮುಂತಾದವರು ‘ಮಹಾನ್’ ಚಿತ್ರದಲ್ಲಿದ್ದಾರೆ. ಪ್ರಕಾಶ್ ಬುದ್ದೂರು ನಿರ್ಮಾಣದ ಈ ಚಿತ್ರವನ್ನು ಪಿ ಸಿ ಶೇಖರ್ ನಿರ್ದೇಶಿಸುತ್ತಿದ್ದಾರೆ.