ಸ್ಪಾರ್ಕ್ಲೀ ಡೆನಿಮ್‌ನಲ್ಲಿ ಬಾಲಿವುಡ್‌ ಸುಂದರಿಯರು : ಆಲಿಯಾ ಭಟ್‌ಗೆ ಫೇವರೆಟ್‌,

Published : Sep 22, 2025, 10:51 AM IST
Aliya

ಸಾರಾಂಶ

ಡೆನಿಮ್ ಅಂದರೆ ಕ್ಯಾಶುವಲ್‌ ಡ್ರೆಸ್‌, ಅದನ್ನು ದೂರ ಪ್ರಯಾಣಕ್ಕೋ, ಶಾಪಿಂಗ್‌ಗೋ ಬಳಸಬಹುದು ಅನ್ನೋದು ಹಲವರ ತಲೆಯಲ್ಲಿದೆ

  ಸಿನಿವಾರ್ತೆ

ಡೆನಿಮ್ ಅಂದರೆ ಕ್ಯಾಶುವಲ್‌ ಡ್ರೆಸ್‌, ಅದನ್ನು ದೂರ ಪ್ರಯಾಣಕ್ಕೋ, ಶಾಪಿಂಗ್‌ಗೋ ಬಳಸಬಹುದು ಅನ್ನೋದು ಹಲವರ ತಲೆಯಲ್ಲಿದೆ. ಈಗ ಬಾಲಿವುಡ್‌ನ ಒಂದಿಷ್ಟು ತಾರೆಯರು ಸ್ಪಾರ್ಕ್ಲೀ ಡೆನಿಮ್‌ ಸೆಲೆಬ್ರೇಶನ್‌ಗೂ, ನಿತ್ಯ ಬಳಕೆಗೂ ಎರಡಕ್ಕೂ ಸೂಪರ್ಬ್‌ ಅಂತ ತೋರಿಸಿ ಕೊಟ್ಟಿದ್ದಾರೆ.

ಮೊನ್ನೆ ಮೊನ್ನೆ ಖ್ಯಾತ ಡೆನಿಮ್‌ ಕಂಪನಿಯ ಲೇಟೆಸ್ಟ್ ಡಿಸೈನ್‌ಗೆ ಅಲಿಯಾ ಭಟ್ ರೂಪದರ್ಶಿ ಆಗಿದ್ದರು. ಆ ವೇಳೆ ಅವರು ರೆಟ್ರೋ ಸ್ಟೈಲಿನ ಸ್ಪಾರ್ಕ್ಲೀ ಡೆನಿಮ್‌ನಲ್ಲಿ ಕಾಣಿಸಿಕೊಂಡು ಬಾಲಿವುಡ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದರು. ಅನನ್ಯಾ ಪಾಂಡೆ, ಅನುಷ್ಕಾ ಶರ್ಮಾ ಇದನ್ನು ಶ್ರದ್ಧೆಯಿಂದ ಅನುಸರಿಸಿದರು. ಬಾಲಿವುಡ್, ಟಾಲಿವುಡ್‌ ಸಿನಿಮಾಗಳಲ್ಲಿ ಪಕ್ಕದ್ಮನೆ ಹುಡುಗಿ ಲುಕ್‌ನಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ ಸಹ ಈ ಸ್ಟೈಲಿನಲ್ಲಿ ಹಿಂದೆ ಬೀಳಲಿಲ್ಲ.

ಸ್ಪಾರ್ಕ್ಲೀ ಡೆನಿಮ್‌ ಟ್ರೆಂಡ್‌ ಅನ್ನು ಸಲೆಬ್ರಿಟಿಗಳ ಜೊತೆಗೆ ಕಾಲೇಜ್ ಹುಡುಗೀರು, ಉದ್ಯೋಗಿಗಳು ಫಾಲೋ ಮಾಡ್ತಿದ್ದಾರೆ. ಇದರ ವಿಶೇಷ ಅಂದರೆ ಸ್ಪೆಷಲ್ ಇವೆಂಟ್‌ಗೂ ಹಾಕ್ಕೊಳ್ಳಬಹುದು, ಶಾಪಿಂಗ್‌, ಜರ್ನಿ ವೇಳೆಗೂ ಧರಿಸಬಹುದು. ಇದು ತೊಡಲು ಕಂಫರ್ಟ್‌, ಕಣ್ಣಿಗೆ ಹಬ್ಬ. ಈ ಉಡುಗೆಯೇ ಅಂದವಾಗಿಯೂ ಅದ್ದೂರಿಯಾಗಿಯೂ ಇರುವ ಕಾರಣ ಆಕ್ಸೆಸರೀಸ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

PREV
Read more Articles on

Recommended Stories

ನಿರ್ದೇಶಕರು ತಮ್ಮೂರಿನ ಕತೆ ಹೇಳಿದ್ದಾರೆ : ಮಾರ್ನಮಿ ಚಿತ್ರದ ಬಗ್ಗೆ ಕಿಚ್ಚ ಸುದೀಪ್‌
ನನ್ನ ಹೀರೋಗಳಲ್ಲಿ ತಿಮ್ಮಕ್ಕ ಒಬ್ಬರು : ರಾಜೀವ್‌ ಚಂದ್ರಶೇಖರ್‌