ಹೊಸತು

KannadaprabhaNewsNetwork |  
Published : Dec 19, 2023, 01:45 AM IST

ಸಾರಾಂಶ

ಹೊಸ ಉತ್ಪನ್ನಗಳ ಪರಿಚಯ, ವಾಣಿಜ್ಯ ಕಿರು ಸುದ್ದಿಗಳು

ಗೋದ್ರೇಜ್ ಫ್ಯಾಬ್‌ ಲಿಕ್ವಿಡ್‌ ಡಿಟರ್ಜೆಂಟ್‌ಫ್ಯಾಬ್ ಎಂಬ ಲಿಕ್ವಿಡ್‌ ಡಿಟರ್ಜೆಂಟ್‌ ಅನ್ನು ಗೋದ್ರೇಜ್‌ ಬಿಡುಗಡೆ ಮಾಡಿದೆ. ಒಂದು ಲೀಟರ್‌ ಬಾಟಲ್‌ಗೆ 99 ರು. ಮುಖಬೆಲೆ. ಬಕೆಟ್ ವಾಶ್, ಮಷೀನ್ ವಾಶ್‌ಗೆ ಇದು ಉತ್ತಮ ಎಂದು ಕಂಪನಿ ಹೇಳಿದೆ.

ನೋಕಿಯಾ ಬೇಸಿಕ್‌ ಮೊಬೈಲಲ್ಲಿ ಯೂಟ್ಯೂಬ್‌ ಶಾರ್ಟ್ಸ್‌ಹೆಚ್‌ಎಂಡಿ ತನ್ನ ನೋಕಿಯಾ 106 4ಜಿ ಹಾಗೂ ನೋಕಿಯಾ 110 4ಜಿ ಮೊಬೈಲ್‌ಗಳ ಸಾಫ್ಟ್‌ವೇರ್‌ ಅಪ್‌ಡೇಟ್‌ ಪ್ರಕಟಿಸಿದೆ. ಈ ಬೇಸಿಕ್‌ ಮೊಬೈಲ್‌ಗಳಲ್ಲಿ ಯೂಟ್ಯೂಬ್‌ ಶಾರ್ಟ್ಸ್‌ ನೋಡುವ ಅವಕಾಶವನ್ನು ಕಂಪನಿ ಒದಗಿಸಿದೆ. ಈಗಾಗಲೇ ಈ ಫೋನ್‌ ಬಳಸುವವರು ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳಬಹುದಾಗಿದೆ. ಹರ್ಬಲ್‌ ಸ್ಟ್ರಟೆಜಿಯ ಸೊಳ್ಳೆ, ಜಿರಳೆ ನಿವಾರಕ

ಆಯುರ್ವೇದ ವೈದ್ಯ ಪದ್ಧತಿ ಮೂಲಕ ತಯಾರಿಸಲಾದ ಪರಿಸರ ಸ್ನೇಹಿ ಕೀಟ ಹಾಗೂ ಜಿರಳೆ ನಿವಾರಕವನ್ನು ಹರ್ಬಲ್ ಸ್ಟ್ರಟೆಜಿ ಬಿಡುಗಡೆ ಮಾಡಿದೆ. ರಾಸಾಯನಿಕ ಮುಕ್ತವಾದ ಈ ಉತ್ಪನ್ನವನ್ನು ಮಕ್ಕಳು, ಸಾಕುಪ್ರಾಣಿಗಳಿರುವ ಕಡೆಯೂ ಬಳಸಬಹುದು, ದೀರ್ಘ ಕಾಲ ಪರಿಣಾಮಕಾರಿ ಎಂದು ಕಂಪನಿ ತಿಳಿಸಿದೆ.

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ಗೆ ಎಎ+ ರೇಟಿಂಗ್ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರೀಸರ್ಚ್‌ ಸಂಸ್ಥೆ ಇದೀಗ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ಗೆ ಸಾಲ ಸೌಲಭ್ಯ ವಿಭಾಗದಲ್ಲಿ ಎಎ+ ರೇಟಿಂಗ್‌ ನೀಡಿದೆ. ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಈ ರೇಟಿಂಗ್‌ ಪೂರಕವಾಗಿದೆ ಎಂದು ಫಸ್ಟ್ ಬ್ಯಾಂಕ್ ಸಂತಸ ವ್ಯಕ್ತಪಡಿಸಿದೆ. ಟಿಟಿಕೆ ಪ್ರೆಸ್ಟೀಜ್‌ನ ಎಂಡ್ಯೂರಾ ಪ್ರೊ ಮಿಕ್ಸರ್‌ ಗ್ರೈಂಡರ್‌ವೆಟ್‌ ಗ್ರೈಡಿಂಗ್‌, ಡ್ರೈ ಗ್ರೈಂಡಿಂಗ್‌, ಚಟ್ನಿ, ಜ್ಯೂಸ್‌ ಮೇಕರ್‌, ಮಿಕ್ಸರ್‌, ಕಟರ್, ಹಿಟ್ಟು ನಾದುವ ಸಾಧನ ಸೇರಿ ಒಟ್ಟು 14 ಅಡುಗೆ ಕೆಲಸಗಳನ್ನು ಮಾಡುವ ಮಿಕ್ಸರ್‌ ಗ್ರೈಂಡರ್‌ ಪ್ರೆಸ್ಟೀಜ್‌ ಎಂಡ್ಯೂರಾ ಪ್ರೋ ಅನ್ನು ಟಿಟಿಕೆ ಪ್ರೆಸ್ಟೀಜ್‌ ಬಿಡುಗಡೆ ಮಾಡಿದೆ. ರಿಯಾಯಿತಿ ದರ: ರು. 9,795ಬಿಸ್ಕ್‌ ಫಾರ್ಮ್‌ಗೆ ರಶ್ಮಿಕಾ ಮಂದಣ್ಣ ರಾಯಭಾರಿಬಿಸ್ಕೆಟ್‌, ಬೇಕರಿ ಉತ್ಪನ್ನ ತಯಾರಕ ಬಿಸ್ಕ್‌ ಫಾರ್ಮ್‌ಗೆ ನಟಿ ರಶ್ಮಿಕಾ ಮಂದಣ್ಣ ಪ್ರಚಾರ ರಾಯಭಾರಿಯಾಗಿದ್ದಾರೆ. ಕಂಪನಿಯ ‘ರಸ್ಕಿಟ್‌ ಬ್ರ್ಯಾಂಡ್‌’ನ ವಿವಿಧ ಬೇಕಿಂಗ್‌ ಉತ್ಪನ್ನಗಳ ಪರ ಅವರು ಪ್ರಚಾರ ಅಭಿಯಾನ ಕೈಗೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಸ್ಟವ್‌ಕ್ರಾಫ್ಟ್‌ನ ಪಿಜನ್‌ ಎಲೆಕ್ಟ್ರಿಕ್‌ ಚಾಪರ್‌ಸ್ಟವ್‌ಕ್ರಾಫ್ಟ್‌ ಇದೀಗ ಅಲ್ಟ್ರಾ ಫಾಸ್ಟ್‌ ಎಲೆಕ್ಟ್ರಿಕ್‌ ಚಾಪರ್‌ ಅನ್ನು ಬಿಡುಗಡೆ ಮಾಡಿದೆ. ತರಕಾರಿ, ಸೊಪ್ಪು ಇತ್ಯಾದಿಗಳನ್ನು ಬೇಕಾದ ವಿನ್ಯಾಸದಲ್ಲಿ, ಅತಿವೇಗವಾಗಿ ಕಟ್‌ ಮಾಡುವ ಈ ಮೆಷಿನ್ 300 ವ್ಯಾಟ್‌ನ ಮೋಟಾರು ಹೊಂದಿದೆ. ಗ್ರಾಹಕ ಸ್ನೇಹಿ ಒನ್ ಟಚ್ ಬಟನ್ ಮೂಲಕ ಈ ಉತ್ಪನ್ನ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ತಿಳಿಸಿದೆ.ಬೆಂಗಳೂರಿನಲ್ಲಿ ಸೋಚ್‌ನ 45ನೇ ಮಳಿಗೆಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಸೋಚ್‌ನ 45ನೆ ಮಳಿಗೆ ಆರಂಭಗೊಂಡಿದೆ. ಈ ಮಳಿಗೆಯಲ್ಲಿ ಸೋಚ್‌ ಬ್ರಾಂಡ್‌ನ ಭಾರತೀಯ ಸಾಂಪ್ರದಾಯಿಕ ಹಾಗೂ ಕಂಟೆಂಪರರಿ ಉಡುಗೆಗಳಾದ ಸೀರೆ, ಚೂಡಿದಾರ್‌, ಡ್ರೆಸ್‌, ಕುರ್ತಾ, ಲೆಹಂಗಾ, ಫ್ಯೂಜನ್‌ ವೇರ್‌ಗಳು ಲಭ್ಯವಿರುತ್ತವೆ ಎಂದು ಕಂಪನಿ ತಿಳಿಸಿದೆ. ಪೆಪ್ಸ್‌ ವಿವಾಹ್‌ ಸ್ಪ್ರಿಂಗ್‌ ಮ್ಯಾಟ್ರೆಸ್‌ನವ ವಿವಾಹಿತರಿಗಾಗಿ ಪೆಪ್ಸ್‌ ಇಂಡಿಯಾ ‘ವಿವಾಹ್‌’ ಎಂಬ ಸ್ಪ್ರಿಂಗ್‌ ಮ್ಯಾಟ್ರೆಸ್‌ ಬಿಡುಗಡೆ ಮಾಡಿದೆ. ದೇಹದ ಶಾಖ ಹೀರಿಕೊಳ್ಳುವ ಗುಣ ಈ ಹಾಸಿಗೆಗಿದೆ ಎಂದು ಕಂಪನಿ ತಿಳಿಸಿದೆ.

ಬೆಲೆ: 47,603 ರು.ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಲೆಕ್ಕೊ ಕುಚಿನಾ ಶೋರೂಮ್‌ ಆರಂಭಇಟಾಲಿಯನ್‌ ವಿನ್ಯಾಸದ ಮನೆ, ಅಡುಗೆ ಮನೆ ಪೀಠೋಪಕರಣಗಳ ಮಳಿಗೆ ಲೆಕ್ಕೊ ಕುಚಿನಾ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟಿನಲ್ಲಿ ಆರಂಭಗೊಂಡಿದೆ. ಲೆಕ್ಕೊ ಕುಚಿನಾದ ಬ್ಯುಸಿನೆಸ್‌ ಹೆಡ್‌ ತ್ರಿಶೂಲ್ ದೇವಾಂಗ ಹೊಸ ಮಳಿಗೆಗೆ ಚಾಲನೆ ನೀಡಿದರು.ಟಾಟಾ ಮೋಟಾರ್ಸ್‌ನ ಪರಿಸರ ಸ್ನೇಹಿ ವಾಹನಗಳ ಅನಾವರಣ

ಎಕ್ಸ್‌ಕಾನ್‌ 2023ರಲ್ಲಿ ಟಾಟಾ ಮೋಟಾರ್ಸ್‌ನ ಪರಿಸರ ಸ್ನೇಹಿ ವಾಣಿಜ್ಯ ವಾಹನಗಳ ಬಿಡುಗಡೆ ಹಾಗೂ ಪ್ರದರ್ಶನ ನಡೆಯಿತು. ನಿರ್ಮಾಣ ಕ್ಷೇತ್ರದ ಕೆಲಸಗಳಿಗಾಗಿ ವಿನ್ಯಾಸ ಮಾಡಲಾದ ಟಾಟಾ ಪ್ರೈಮಾ ಇ28ಕೆ ಎಂಬ ಎಲೆಕ್ಟ್ರಿಕ್‌ ವಾಹನವನ್ನು ಈ ವೇಳೆ ಬಿಡುಗಡೆ ಮಾಡಲಾಯಿತು.

ಜೆಕೆ ಟೈರ್‌ನಿಂದ ಹೊಸ ಟೈರ್‌ ಬಿಡುಗಡೆಜೆಕೆ ಟೈರ್ ಇದೀಗ 11 ಮಾದರಿಯ ಆಫ್‌ ದಿ ರೋಡ್‌ ಟೈರ್‌ಗಳನ್ನು ಬಿಡುಗಡೆ ಮಾಡಿದೆ. ‘ಎಕ್ಸ್‌ಕಾನ್‌ 2023’ರಲ್ಲಿ ಹೊಸ ವಿನ್ಯಾಸದ ಟೈರ್‌ಗಳು ಅನಾವರಣಗೊಂಡಿವೆ. ಬೃಹತ್‌ ಕಂಟೇನರ್‌ಗಳನ್ನು ನಿಭಾಯಿಸುವ ಉಪಕರಣ- ರೀಚ್‌ ಸ್ಟ್ಯಾಕರ್‌ಗಳಿಗಾಗಿ ಈ ಟೈರ್‌ಗಳನ್ನು ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.ಅಕ್ಷಯ ಕಲ್ಪ ಆರ್ಗ್ಯಾನಿಕ್ಸ್‌ನ ಸಾವಯವ ದಿನಸಿ ಉತ್ಪನ್ನಬೇಳೆಕಾಳು, ಹಿಟ್ಟು, ಒಣಹಣ್ಣು, ಮಸಾಲೆ ಪದಾರ್ಥಗಳ ಹೊಸ ಸಾವಯವ ಶ್ರೇಣಿಯನ್ನು ಅಕ್ಷಯಕಲ್ಪ ಆರ್ಗ್ಯಾನಿಕ್ ಬಿಡುಗಡೆ ಮಾಡಿದೆ. ಇವು ರಾಸಾಯನಿಕ, ಕೃತಕ ರಸಗೊಬ್ಬರಗಳು ಮತ್ತು ಕೀಟನಾಟಕಗಳಿಂದ ಮುಕ್ತವಾಗಿವೆ ಎಂದು ಕಂಪನಿ ತಿಳಿಸಿದೆ.

ಕ್ರಿಸ್‌ಮಸ್‌ಗೆ ವೆಸ್ಟ್‌ಸೈಡ್‌ನಿಂದ ಗಿಫ್ಟ್ ಐಟಂಗಳುಕ್ರಿಸ್‌ಮಸ್‌ ಹಬ್ಬಕ್ಕೆ ಉಡುಗೊರೆ ನೀಡುವಂಥಾ ಉತ್ಪನ್ನಗಳನ್ನು ವೆಸ್ಟ್‌ಸೈಡ್‌ ಕಂಪನಿ ಬಿಡುಗಡೆ ಮಾಡಿದೆ. ಕ್ರಿಸ್‌ಮಸ್‌ ಸ್ಟಾರ್‌ ವಿನ್ಯಾಸದ ಲೈಟ್‌ ಹೋಲ್ಡರ್‌ (ಬೆಲೆ ರು.799), ನಾಲ್ಕು ಕ್ಯಾಂಡಲ್‌ಗಳ ಸೆಟ್‌ (ಬೆಲೆ: ರು.299), ಮೆಟಲ್‌ ಕ್ರಿಸ್‌ಮಸ್‌ ಸ್ಟಾರ್‌ (ಬೆಲೆ: ರು.899) ಇತ್ಯಾದಿ ಉತ್ಪನ್ನಗಳು ಬಿಡುಗಡೆಯಾಗಿವೆ.

ಆದಿತ್ಯ ಬಿರ್ಲಾ ಸನ್‌ ಲೈಫ್‌ ಇನ್ಶೂರೆನ್ಸ್‌ನ ಹೊಸ ಪ್ಲಾನ್‌

ಆದಿತ್ಯ ಬಿರ್ಲಾ ಸನ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿ ಉದ್ಯೋಗಿಗಳಿಗೆ ಸ್ಯಾಲರೀಡ್ ಟರ್ಮ್ ಪ್ಲಾನ್ ಎಂಬ ಹೊಸ ವಿಮಾ ಯೋಜನೆ ಘೋಷಿಸಿದೆ. ಇದರಲ್ಲಿ ತುರ್ತು ಸಂದರ್ಭಗಳಲ್ಲಿ ಈ ಯೋಜನೆಯ ಅನುಕೂಲ ಪಡೆಯುವ ಜೊತೆಗೆ ಕೊನೆಯಲ್ಲಿ ಕಟ್ಟಿದ ಪ್ರೀಮಿಯಂ ಮೊತ್ತ ವಾಪಾಸ್ ಪಡೆಯುವ ಸೌಲಭ್ಯವೂ ಇದೆ ಎಂದು ಕಂಪನಿ ತಿಳಿಸಿದೆ.ಏಥರ್‌ನಿಂದ ಏಥರ್‌ ಡಿಸೆಂಬರ್‌ ಆಫರ್‌‘ಎಥರ್‌ ಎಲೆಕ್ಟ್ರಿಕ್‌ ಡಿಸೆಂಬರ್‌’ ಎಂಬ ಕಾನ್ಸೆಪ್ಟ್‌ನಡಿ ಡಿ.31ರವರೆಗೆ ಏಥರ್‌ 450 ಎಕ್ಸ್‌ ಹಾಗೂ 450 ಎಸ್‌ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ರಿಯಾಯಿತಿ ಘೋಷಿಸಲಾಗಿದೆ. ಈ ಬಗ್ಗೆ ಕಂಪನಿ, ಸ್ಕೂಟರ್‌ಗಳ ದರದಲ್ಲಿ 24,000ವರೆಗಿನ ರಿಯಾಯಿತಿ ದೊರೆಯಲಿದೆ, ಇಎಂಐ ಬಡ್ಡಿದರ ಇಳಿಸಲಾಗಿದೆ ಎಂದು ತಿಳಿಸಿದೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?
ರಾಕಿಂಗ್‌ ಸ್ಟಾರ್‌ ಮುಂದಿನ ನಿರ್ದೇಶಕರಿಗೆ ಗೀತು ಮೋಹನ್‌ದಾಸ್‌ ಕಿವಿಮಾತು