ರಿಷಬ್‌ ಶೆಟ್ಟಿಗೆ ಮತ್ತೊಮ್ಮೆ ನ್ಯಾಷಲ್‌ ಅವಾರ್ಡ್‌ ಬರಬೇಕು: ನಿರ್ದೇಶಕ ಅಟ್ಲೀ

Published : Oct 13, 2025, 09:50 AM IST
Atlee Kumar Rishab Shetty

ಸಾರಾಂಶ

‘ಇಂಥ ಚಿತ್ರಗಳನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ಆದರೆ, ರಿಷಬ್‌ ಶೆಟ್ಟಿ ನಿರ್ದೇಶಕ ಮತ್ತು ನಟರಾಗಿ ‘ಕಾಂತಾರ 1’ ಚಿತ್ರವನ್ನು ರೂಪಿಸಿದ್ದು, ಅವರ ಪ್ರತಿಭೆಗೆ ನ್ಯಾಷಲ್‌ ಅವಾರ್ಡ್‌ ಬರಬೇಕು. ರಿಷಬ್‌ ಶೆಟ್ಟಿ ಎಲ್ಲಾ ಸಿನಿಮಾ ಮೇಕರ್‌ಗಳಿಗೂ ಸ್ಫೂರ್ತಿ’.

 ಸಿನಿವಾರ್ತೆ 

‘ಇಂಥ ಚಿತ್ರಗಳನ್ನು ನಿಭಾಯಿಸುವುದು ಅಷ್ಟು ಸುಲಭ ಅಲ್ಲ. ಆದರೆ, ರಿಷಬ್‌ ಶೆಟ್ಟಿ ನಿರ್ದೇಶಕ ಮತ್ತು ನಟರಾಗಿ ‘ಕಾಂತಾರ 1’ ಚಿತ್ರವನ್ನು ರೂಪಿಸಿದ್ದು, ಅವರ ಪ್ರತಿಭೆಗೆ ನ್ಯಾಷಲ್‌ ಅವಾರ್ಡ್‌ ಬರಬೇಕು. ರಿಷಬ್‌ ಶೆಟ್ಟಿ ಎಲ್ಲಾ ಸಿನಿಮಾ ಮೇಕರ್‌ಗಳಿಗೂ ಸ್ಫೂರ್ತಿ’.

- ಈ ಮಾತುಗಳು ನಿರ್ದೇಶಕ ಅಟ್ಲೀ ಅವರದ್ದು. ‘ಜವಾನ್‌’, ‘ಮೆರ್ಸಲ್‌’, ‘ಬಿಗಿಲ್‌’, ‘ತೇರಿ’ ಹಾಗೂ ‘ರಾಜಾ ರಾಣಿ’ ಚಿತ್ರಗಳ ನಿರ್ದೇಶಕ ಅಟ್ಲೀ ಅವರು ‘ಕಾಂತಾರ 1’ ಚಿತ್ರವನ್ನು ನೋಡಿ ಮೆಚ್ಚಿ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದ ಬೆಂಗಳೂರು ಒಪನ್ 2025 ವರ್ಲ್ಡ್ ಪಿಕಲ್‌ ಬಾಲ್ ಲೀಗ್‌ ಪಂದ್ಯಾವಳಿಯ ಉದ್ಘಾಟನೆಗೆ ನಿರ್ದೇಶಕ ಅಟ್ಲೀ ಬೆಂಗಳೂರಿಗೆ ಬಂದಿದ್ದರು. ಬಂದಿದ್ದರು. ಅಟ್ಲೀ ಬೆಂಗಳೂರು ಜವಾನ್ಸ್ ತಂಡದ ಮಾಲೀಕ ಕೂಡ. ಉದ್ಘಾಟನೆ ಕಾರ್ಯಕ್ರಮದ ನಂತರ ‘ಕಾಂತಾರ 1’ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

‘ಕಾಂತಾರ 1 ಚಿತ್ರ ಬಿಡುಗಡೆ ಆದ ದಿನ ನಾನು ವಿದೇಶದಲ್ಲಿದ್ದೆ. ಚಿತ್ರ ಬಿಡುಗಡೆಯಾದ ದಿನವೇ ನೋಡಬೇಕು ಎಂದುಕೊಂಡು ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಎರಡುವರೆ ಗಂಟೆ ಕಾಲ ಪ್ರಯಾಣ ಮಾಡಿಕೊಂಡು ಹೋಗಿ ‘ಕಾಂತಾರ1’ ಚಿತ್ರ ನೋಡಿದೆ. ರಿಷಬ್‌ ಶೆಟ್ಟಿ ಅವರ ಪ್ರತಿಭೆಗೆ ಹ್ಯಾಟ್ಸ್‌ ಅಪ್‌. ಸಿನಿಮಾ ನೋಡಿದ ಕೂಡಲೇ ನಾನು ರಿಷಬ್‌ ಶೆಟ್ಟಿ ಅವರಿಗೆ ಕರೆ ಮಾಡಿ ಮಾತನಾಡಿದೆ. ಅವರು ನನ್ನ ಒಳ್ಳೆಯ ಸ್ನೇಹಿತ ಹಾಗೂ ನಾನು ತುಂಬಾ ಗೌರವಿಸುವ ವ್ಯಕ್ತಿ ಕೂಡ. ನಿರ್ದೇಶಕರಾಗಿ ಇಂಥ ಚಿತ್ರವನ್ನು ನಿಭಾಯಿಸೋದು ಕಷ್ಟ. ಆದರೆ, ನಿರ್ದೇಶನದ ಜೊತೆಗೆ ನಟರಾಗಿಯೂ ಕಾಣಿಸಿಕೊಂಡು ರಿಷಬ್‌ ಗೆದ್ದಿದ್ದಾರೆ. ಚಿತ್ರದಲ್ಲಿನ ಅಭಿನಯಕ್ಕಾಗಿ ರಿಷಬ್‌ ಅವರ ಪ್ರತಿಭೆಗೆ ಮತ್ತೊಮ್ಮೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು’ ಎಂದು ನಿರ್ದೇಶಕ ಅಟ್ಲೀ ಅಭಿಪ್ರಾಯಪಟ್ಟಿದ್ದಾರೆ.

PREV
Read more Articles on

Recommended Stories

ಬಾಹುಬಲಿ ಪಾರ್ಟ್‌ 3 ಬರೋದು ಪಕ್ಕಾ: ನಿರ್ಮಾಪಕ ಶೋಭು ಯರ್ಲಗಡ್ಡ
ಕಲ್ಕಿ 2 ಚಿತ್ರಕ್ಕೆ ಬರಲಿರುವ ಅಲಿಯಾ ಭಟ್‌