ಸಿನಿವಾರ್ತೆ

ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ಟೀಸರ್‌ 5 ಭಾಷೆಗಳಲ್ಲಿ ಕೆವಿಎನ್ ಪ್ರೊಡಕ್ಷನ್ಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ನಂ.1 ಟ್ರೆಂಡ್‌ ಆಗಿದೆ. 3 ಬಗೆಯ ಲುಕ್‌ನಲ್ಲಿ ಯಶ್‌ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಯುವಕನ ಲುಕ್‌ ಕುತೂಹಲ ಕೆರಳಿಸಿದೆ. ಇದರಲ್ಲಿ ರಾಯ ಹಾಗೂ ಅವನ ಮಗನ ಕಥೆ ಇರಬಹುದು ಎಂಬ ಊಹೆ ಹರಿದಾಡುತ್ತಿದೆ. ‘ಐ ಆಮ್ ಹೋಮ್ ಡ್ಯಾಡಿ’ ಎಂಬ ಯುವಕನ ಮಾತೂ ಇದಕ್ಕೆ ಪುಷ್ಠಿ ನೀಡುತ್ತದೆ.

‘ಇಟ್ಸ್ ಓವರ್, ವೆನ್ ಐ ಸೇ ಇಟ್ಸ್ ಓವರ್!

ಈ ಹಿಂದೆ ಯಶ್‌ ಅವರ ‘ನಾನ್‌ ಬರೋವರ್ಗೂ ಬೇರೆಯವ್ರ ಹವಾ, ನಾನ್‌ ಬಂದ್ಮೇಲೆ ನಂದೇ ಹವಾ’ ಎಂಬ ಡೈಲಾಗ್‌, ಕೆಜಿಎಫ್‌ನ ‘ವೈಲೆನ್ಸ್‌’ ಡೈಲಾಗ್‌ ಸಿಕ್ಕಾಪಟ್ಟೆ ಫೇಮಸ್‌ ಆಗಿತ್ತು. ‘ಟಾಕ್ಸಿಕ್‌’ ಟೀಸರ್‌ನಲ್ಲಿರುವ, ‘ಇಟ್ಸ್ ಓವರ್, ವೆನ್ ಐ ಸೇ ಇಟ್ಸ್ ಓವರ್!’ ಅನ್ನುವ ಪವರ್‌ಫುಲ್‌ ಡೈಲಾಗ್‌ ಇದರ ಮುಂದುವರಿಕೆಯಂತಿದೆ. ಇದೇ ದಿನ ರಿಲೀಸ್‌ ಆಗುವ ‘ಧುರಂಧರ್‌’ ಸಿನಿಮಾಕ್ಕೆ ಟಾಂಗ್‌ ನೀಡುವ ರೀತಿಯಲ್ಲೂ ಈ ಡೈಲಾಗ್‌ ಬಳಕೆಯಾಗುತ್ತಿರುವುದು ವಿಶೇಷ.

ಈ ಟೀಸರ್‌ನಲ್ಲಿ ಯಶ್‌ ಅವರೇ ಹೈಲೈಟ್‌ ಆಗಿದ್ದು, ನಾಯಕಿಯರನ್ನು ತೋರಿಸಿಲ್ಲ. ಕೆಲವೆಡೆ ಅಸ್ಪಷ್ಟ ಚಹರೆಯಷ್ಟೇ ಇದೆ. ಟೀಸರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಿವಿಧ ಭಾಷೆಗಳಲ್ಲಿ 1 ಕೋಟಿ ವೀಕ್ಷಣೆ ದಾಖಲಾಗಿದೆ.