ಸಿನಿವಾರ್ತೆ
ಎರಡನೇ ವಾರವೂ ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ದಾಖಲೆಯ ಗಳಿಕೆ ಮಾಡಿದೆ. ವಿಶ್ವಾದ್ಯಂತ ಅಂದಾಜು 600 ಕೋಟಿ ರು. ಕಲೆಕ್ಷನ್ ಮಾಡಿದೆ. ಭಾರತದಲ್ಲೇ ಸಿನಿಮಾದ ಕಲೆಕ್ಷನ್ 450 ಕೋಟಿ ರು. ದಾಟಿದೆ ಎನ್ನಲಾಗಿದೆ. ಜೊತೆಗೆ ಈ ಸಿನಿಮಾ ಆನ್‌ಲೈನ್‌ನಲ್ಲೇ 1 ಕೋಟಿ ಟಿಕೆಟ್ ಮಾರಾಟ ಕಂಡಿದೆ. ಇದನ್ನು ಬುಕ್ ಮೈ ಶೋ ಅಧಿಕೃತವಾಗಿ ಪ್ರಕಟಿಸಿದೆ.
ಸಿನಿಮಾ ಮುಂದಿನ ವಾರಾಂತ್ಯದ ಹೊತ್ತಿಗೆ 800 ಕೋಟಿ ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇನ್ನೊಂದೆಡೆ ಮುಂಬೈಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ತಂಡಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಥೇಟರ್‌ಗಳಲ್ಲಿ ಜನ ಕಿಕ್ಕಿರಿದು ನೆರೆದು ಸಿನಿಮಾವನ್ನು ಸಂಭ್ರಮಿಸಿದ್ದಾರೆ.