ನಿರ್ದೇಶಕರು ಅಪ್‌ಡೇಟ್‌ ಆಗಬೇಕು: ಎಂ.ಡಿ.ಶ್ರೀಧರ್‌

Published : Jul 30, 2026, 12:49 PM IST
Save Sandalwood

ಸಾರಾಂಶ

ಈಗ ಕನ್ನಡದಲ್ಲಿ ದೊಡ್ಡ ತಾರೆಗಳು ಎನಿಸಿಕೊಂಡವರು ಎಷ್ಟು ಮಂದಿ ಇದ್ದಾರೆ, ಅವರ ಪೈಕಿ ಎಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರ ಕೈಗೆಟುಕುತ್ತಾರೆ ಎಂಬುದನ್ನೂ ಕೂಡ ನೋಡಬೇಕಿದೆ. ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಏಳೆಂಟು ಹೊಸ ಪ್ರತಿಭಾವಂತ ನಟರು ಇದ್ದಾರೆ. ಅವರು ಮುಂದಿನ ಕನ್ನಡ ಚಿತ್ರರಂಗದ ಸ್ಟಾರ್‌ ಹೀರೋಗಳಾಗುತ್ತಾರೆ.

ಸೇವ್‌ ಸ್ಯಾಂಡಲ್‌ವುಡ್‌ 10

  ಸಿನಿವಾರ್ತೆ

- ನಾವು ಕ್ವಾಲಿಟಿ ಕಡೆಗೆ ಗಮನ ಕೊಟ್ಟು, ಕನ್ನಡ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಮನಸ್ಸಿನಲ್ಲಿರುವ ಭಾವನೆಗಳನ್ನು ಬದಲಾಯಿಸಬೇಕಿದೆ.

- ನಿರ್ಮಾಪಕರು ಸ್ಟಾರ್‌ ಹೀರೋಗಳ ಹಿಂದೆ ಹೋಗೋದನ್ನು ಮೊದಲು ಬಿಡಬೇಕು. ನಿರ್ಮಾಪಕರೇ ಸ್ಟಾರ್‌ಗಳನ್ನು ಹುಟ್ಟು ಹಾಕಬೇಕು.

- ಈಗ ಕನ್ನಡದಲ್ಲಿ ದೊಡ್ಡ ತಾರೆಗಳು ಎನಿಸಿಕೊಂಡವರು ಎಷ್ಟು ಮಂದಿ ಇದ್ದಾರೆ, ಅವರ ಪೈಕಿ ಎಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರ ಕೈಗೆಟುಕುತ್ತಾರೆ ಎಂಬುದನ್ನೂ ಕೂಡ ನೋಡಬೇಕಿದೆ. ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಏಳೆಂಟು ಹೊಸ ಪ್ರತಿಭಾವಂತ ನಟರು ಇದ್ದಾರೆ. ಅವರು ಮುಂದಿನ ಕನ್ನಡ ಚಿತ್ರರಂಗದ ಸ್ಟಾರ್‌ ಹೀರೋಗಳಾಗುತ್ತಾರೆ. ಆದರೆ, ಅವರ ಜೊತೆಗೆ ಈಗ ಸಿನಿಮಾ ಮಾಡಲು ಯಾರು ರೆಡಿ ಇದ್ದಾರೆ?

- ದೊಡ್ಡ ತಾರೆಗಳು ಬದಲಾಯಿಸಿಕೊಳ್ಳಬೇಕಿರುವುದು ಪೇಮೆಂಟ್‌ಗಿಂತ ಕತೆಗೆ ಮಹತ್ವ ಕೊಡೋದನ್ನು. ಚಿತ್ರದ ಪ್ರತಿ ಪಾತ್ರದ ಕತೆ, ಸಂಭಾಷಣೆಯನ್ನು ಕೇಳಿಸಿಕೊಳ್ಳಬೇಕು. ಶೂಟಿಂಗ್‌, ಬಜೆಟ್‌ನಲ್ಲಿ ಮಧ್ಯ ಪ್ರವೇಶಿಸುವ ಬದಲು ಸ್ಕ್ರಿಪ್ಟ್‌ನಲ್ಲಿ ಭಾಗಿಯಾಗಬೇಕು. ದರ್ಶನ್‌ ಅವರು ಹೀಗೆ ಮಾಡುತ್ತಿದ್ದರು. ಕತೆಯನ್ನು ಸಂಪೂರ್ಣವಾಗಿ ಕೇಳುತ್ತಿದ್ದರು. ಏನೇ ಬದಲಾವಣೆ, ಸಲಹೆ, ಪ್ರಶ್ನೆ ಇದ್ದರೆ ಶೂಟಿಂಗ್‌ ಮೊದಲೇ ಕೇಳುತ್ತಿದ್ದರು.

- ನಾವು ಈಗ ಸ್ಪರ್ಧಿಸಬೇಕಿರುವುದು ಮೊಬೈಲ್‌ ಜೊತೆಗೆ ಹೊರತು ಬೇರೆ ಭಾಷೆಯ ಸಿನಿಮಾಗಳ ಜೊತೆಗೆ ಅಲ್ಲ. ನಿರ್ದೇಶಕರು ಅಪ್‌ಡೇಟ್‌ ಆಗಿ ಚಿತ್ರಮಂದಿರಗಳನ್ನು ಉಳಿಸುವಂತಹ ಸಿನಿಮಾಗಳನ್ನು ಮಾಡಬೇಕಿದೆ.

- ಚಿತ್ರದ ಪ್ರತಿಯೊಂದು ವಿಭಾಗವೂ ಕತೆಗೆ ಶರಣಾಗಬೇಕು. ಕತೆಗಿಂತ ಬಜೆಟ್‌ ದೊಡ್ಡದು, ಕತೆಗಿಂತ ನಾನೇ ದೊಡ್ಡವನು ಅಂತ ಹೋದರೆ ಹೆಸರಿಗೊಂದು ಪ್ಯಾನ್‌ ಇಂಡಿಯಾ ಸಿನಿಮಾ ಆಗುತ್ತದೆ ಅಷ್ಟೇ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಬ್ಯಾಂಕ್‌ ಆಫ್ ಬರೋಡಾ ಸಿಸ್ಟಂ ಹ್ಯಾಕ್‌ : 1 ಟಿಬಿ ಡೇಟಾ ಲೀಕ್‌!
ರಾಮಾಯಣ ಪ್ರಚಾರಕ್ಕೆ 375 ಕೋಟಿ ರು. ಖರ್ಚು