;Resize=(412,232))
ಸಿನಿವಾರ್ತೆ
‘ನಾನೀಗ ನಟಿಯಾಗಿ ಮಾಗಿದ್ದೇನೆ. ಈ ಹಂತದಲ್ಲಿ ಸಿನಿಮಾ 100 ಕೋಟಿಯದ್ದಾ, 500- 600 ಕೋಟಿ ರು. ಬಜೆಟ್‌ನದ್ದಾ ಅನ್ನೋದು ಮುಖ್ಯವಾಗೋದಿಲ್ಲ. ಬದಲಿಗೆ ಈ ಸಿನಿಮಾ ಸತ್ಯಕ್ಕೆ ಎಷ್ಟು ಹತ್ತಿರವಾಗಿದೆ ಅನ್ನುವುದು ಮುಖ್ಯವಾಗುತ್ತದೆ. ಫೇಕ್ ಸಿನಿಮಾಗಳು ಎಷ್ಟು ಅದ್ದೂರಿಯಾಗಿದ್ದರೂ ಕುತೂಹಲ ಮೂಡಿಸುವುದಿಲ್ಲ’.
- ಇದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮನದಾಳದ ಮಾತು. ಈ ಮೂಲಕ ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ದೀಪಿಕಾ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
‘ಕೆಲವೊಬ್ಬರು ವಿಪರೀತ ಹಣ ಸುರಿದು ಸಿನಿಮಾ ಮಾಡುತ್ತಾರೆ. ಸಿನಿಮಾಕ್ಕೆ ಅಷ್ಟೇ ಸಾಕು ಅಂದುಕೊಳ್ಳುತ್ತಾರೆ. ಆದರೆ ಅದು ಸತ್ಯವಲ್ಲ. ಸಿನಿಮಾ ಮೊದಲು ನಾವು ನಂಬುವಂತಿರಬೇಕು. ನಂತರ ಜನರನ್ನು ನಂಬಿಸುವ ಪ್ರಯತ್ನ ಮಾಡಬೇಕು’ ಎಂದೂ ಹೇಳಿದ್ದಾರೆ.