ಸಿನಿಮಾ ಟ್ರಾಫಿಕ್‌ನಿಂದ ಒಳ್ಳೆಯ ಚಿತ್ರಗಳಿಗೂ ಗೆಲುವು ಸಿಗುತ್ತಿಲ್ಲ : ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರ ನಿರ್ದೇಶಕ

Published : Mar 03, 2025, 12:07 PM IST
Shenoys multiplex theatre

ಸಾರಾಂಶ

ಅಂಜನ್ ನಾಗೇಂದ್ರ, ವೆನ್ಯ ರೈ ಜೋಡಿಯಾಗಿ ನಟಿಸಿರುವ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಭರವಸೆಯ ಚಿತ್ರವಾಗಿ ಮುನ್ನುಗುತ್ತಿದೆ. ನೋಡುಗರಿಂದ ಸೂಪರ್‌ ಎನಿಸಿಕೊಳ್ಳುತ್ತಿರುವ ಈ ಚಿತ್ರದ ನಿರ್ದೇಶಕ ಹಯವದನ ಇಲ್ಲಿ ಮಾತನಾಡಿದ್ದಾರೆ.

ಸಿನಿವಾರ್ತೆ

ಅಂಜನ್ ನಾಗೇಂದ್ರ, ವೆನ್ಯ ರೈ ಜೋಡಿಯಾಗಿ ನಟಿಸಿರುವ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಭರವಸೆಯ ಚಿತ್ರವಾಗಿ ಮುನ್ನುಗುತ್ತಿದೆ. ನೋಡುಗರಿಂದ ಸೂಪರ್‌ ಎನಿಸಿಕೊಳ್ಳುತ್ತಿರುವ ಈ ಚಿತ್ರದ ನಿರ್ದೇಶಕ ಹಯವದನ ಇಲ್ಲಿ ಮಾತನಾಡಿದ್ದಾರೆ.

 1. ಸಿನಿಮಾ ಮಾಡುವಾಗ ನಾವು ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಮಾಡಿದ್ವಿ. ಆ ನಿರೀಕ್ಷೆಗಳಿಗೆ ನಾವು ಮೋಸ ಮಾಡಿಲ್ಲ. ಯಾಕೆಂದರೆ ಸಿನಿಮಾ ನೋಡಿದ ಪ್ರೇಕ್ಷಕರು ಸೂಪರ್‌ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ನಿರ್ದೇಶಕನಾಗಿ ನನಗೆ ಸಿಕ್ಕಿರುವ ಮೊದಲ ಗೆಲುವು ಇದು ಎಂದೇ ಭಾವಿಸುತ್ತೇನೆ. ಸಿನಿಮಾ ಮತ್ತಷ್ಟು ಪ್ರೇಕ್ಷಕರಿಗೆ ತಲುಪುತ್ತದೆ ಎನ್ನುವ ಭರವಸೆ ಇದೆ.

2. ಸಿನಿಮಾ ಬಿಡುಗಡೆ ಆಗಿರುವ ಕೇಂದ್ರಗಳ ಪೈಕಿ ಬೆಂಗಳೂರು, ಹುಬ್ಬಳ್ಳಿ, ಹಾಸನ ಹಾಗೂ ಬಾಗಲಕೋಟೆಯಲ್ಲಿ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಂದಿನ ವಾರದಿಂದ ಮತ್ತಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಆಗಲಿದೆ. 3. ಎಲ್ಲಾ ಹೊಸಬರ ಚಿತ್ರಗಳಂತೆ ನಮ್ಮ ಚಿತ್ರಕ್ಕೂ ಒಂದಿಷ್ಟು ಸವಾಲುಗಳು ಎದುರಾಗಿವೆ. ಸ್ಕ್ರೀನ್‌ಗಳು ಸಿಗದೆ ಇರುವುದು ಇತ್ಯಾದಿ ಸಮಸ್ಯೆಗಳನ್ನು ದಾಟಿಕೊಳ್ಳುತ್ತಿದ್ದೇವೆ.

4. ಪ್ರತಿವಾರ 12, 10, 8, 7 ಹೀಗೆ ಸಿನಿಮಾಗಳು ತೆರೆಗೆ ಬರುತ್ತಿವೆ. ಎಲ್ಲರೂ ಎಲ್ಲಾ ಸಿನಿಮಾಗಳನ್ನು ಚೆನ್ನಾಗಿವೆ ಎಂದು ಹೇಳುತ್ತಿದ್ದಾರೆ. ಆದರೆ, ಪ್ರೇಕ್ಷಕ ಯಾವುದು ಒಳ್ಳೆಯ ಚಿತ್ರ ಎಂದು ಗೊಂದಲಕ್ಕೆ ಒಳಗಾಗಿದ್ದಾನೆ. ಪ್ರತೀ ವಾರ ನಿರೀಕ್ಷೆಗೂ ಮೀರಿ ತೆರೆಗೆ ಬರುತ್ತಿರುವ ಸಿನಿಮಾಗಳಿಂದ ಯಾರು ರ್‍ಯಾಂಕ್ ಸ್ಟೂಡೆಂಟ್‌, ಯಾರು ಆವರೇಜ್‌ ಸ್ಟೂಡೆಂಟ್‌ ಎಂಬುದು ಗೊತ್ತಾಗುತ್ತಿಲ್ಲ. ಸಿನಿಮಾ ಟ್ರಾಫಿಕ್ ಕಂಟ್ರೋಲ್‌ ಆದರೆ ಎಲ್ಲಾ ಸಿನಿಮಾಗಳಿಗೆ ನ್ಯಾಯ ಸಿಗುತ್ತದೆ. ಇಲ್ಲದೆ ಹೋದರೆ ಗುಂಪಲ್ಲಿ ಗೋವಿಂದ ಎನ್ನುವ ಸ್ಥಿತಿ ಎಲ್ಲಾ ಚಿತ್ರಗಳಿಗೂ ಒದಗಿ ಬರುತ್ತದೆ. 

5. ನಮ್ಮದು ಜರ್ನಿ ಸಿನಿಮಾ. ಜತೆಗೆ ಲವ್‌ ಟ್ರ್ಯಾಕ್‌ ಇದೆ. ಎಮೋಷನ್‌ ಇದೆ. ಒಬ್ಬೊಬ್ಬರಿಗೆ ಒಂದೊಂದು ಪಾಯಿಂಟ್‌ ಇಷ್ಟವಾಗುತ್ತಿದೆ. ಕೆಲವರು ತಮ್ಮ ವೈಯಕ್ತಿಕ ಜೀವನಕ್ಕೆ ಚಿತ್ರವನ್ನು ಕನೆಕ್ಟ್‌ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಗಟ್ಟಿಯಾದ ಕತೆ ಇದೆ ಎಂಬುದಕ್ಕೆ ಇದೇ ಸಾಕ್ಷಿ.

PREV

Recommended Stories

ತಾಯಿ ಆಗುತ್ತಿರುವ ಸಂಭ್ರಮದಲ್ಲಿರುವ ನಟಿ ಭಾವನಾ ಸೀಮಂತ ಶಾಸ್ತ್ರ
ನಟ ಸಂತೋಷ್‌ಗೆ ಜಾಂಡೀಸ್‌: ಆರೋಗ್ಯ ಸ್ಥಿತಿ ಗಂಭೀರ, ಚಿಕಿತ್ಸೆ