;Resize=(412,232))
ಆರ್. ಕೇಶವಮೂರ್ತಿ
1. ಓಟಿಟಿಗಳು ಕನ್ನಡ ಚಿತ್ರಗಳನ್ನು ನಿರ್ಲಕ್ಷಿಸುತ್ತಿದೆ, ಕನ್ನಡ ಸಬ್‌ಸ್ಕ್ರೈಬರ್‌ಗಳು ಬೇಕು, ಕನ್ನಡ ಚಿತ್ರಗಳು ಬೇಡವೇ ಎನ್ನುವ ಪ್ರಶ್ನೆಯಲ್ಲಿ ವಾಸ್ತವಾಂಶ ಇಲ್ಲ. ಅಮೆಜಾನ್ ಪ್ರೈಮ್‌ನಲ್ಲಿ ನಾಲ್ಕು ವಿಭಾಗಗಳಲ್ಲಿ ಕನ್ನಡ ಸಿನಿಮಾಗಳ ಮಾರಾಟ, ಪ್ರದರ್ಶನಕ್ಕೆ ಈಗಲೂ ಅವಕಾಶ ಇದೆ.
2. ಈಗ ಇರುವ ಪ್ರತಿಷ್ಠಿತ ಓಟಿಟಿಗಳನ್ನು ತೆಗೆದು ನೋಡಿದರೆ ಬೇರೆ ಓಟಿಟಿಗಳಿಗಿಂತ ಅಮೆಜಾನ್ ಪ್ರೈಮ್‌ನಲ್ಲೇ ಹೆಚ್ಚು ಕನ್ನಡ ಸಿನಿಮಾಗಳು ಇವೆ. ಇತ್ತೀಚಿನ ವರ್ಷಗಳ ಲೆಕ್ಕ ಕೊಡುವುದಾದರೆ 2022ರಲ್ಲಿ 18, 2023ರಲ್ಲಿ 20 ರಿಂದ 25 ಹಾಗೂ ಈ ವರ್ಷ 2024ರಲ್ಲಿ ಈಗಾಗಲೇ 10 ಸಿನಿಮಾಗಳನ್ನು ಕೊಳ್ಳಲಾಗಿದೆ.3. ಎರಡ್ಮೂರು ವರ್ಷಗಳಿಂದ ಅಮೆಜಾನ್ ಪ್ರೈಮ್‌ಗೆ ನಷ್ಟ ಆಗುತ್ತಿದೆ. ಇತ್ತೀಚೆಗೆ ಕೇವಲ 5 ಚಿತ್ರಗಳ ಮೇಲೆ 60 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ಅಮೆಜಾನ್ ಪ್ರೈಮ್ ಸಂಸ್ಥೆ ಒಂದೇ ಕನ್ನಡ ಚಿತ್ರರಂಗದಲ್ಲಿ ಹೂಡಿಕೆ ಮಾಡಿರುವುದು.4. ಮೊದಲಿನಂತೆ ಈಗ ಒಂದೇ ಸಲ ಮುಂಗಡ ಹಣ ಕೊಟ್ಟ ಪೂರ್ಣಪ್ರಮಾಣದಲ್ಲಿ ಚಿತ್ರಗಳನ್ನು ಕೊಳ್ಳುತ್ತಿಲ್ಲ. ಯಾಕೆಂದರೆ ಈಗಾಗಲೇ ಕೋಟಿ ಕೋಟಿ ಸುರಿದು ಕೊಂಡುಕೊಂಡ ಚಿತ್ರಗಳಿಂದ ಅಮೆಜಾನ್ ಪ್ರೈಮ್‌ಗೆ ಯಾವುದೇ ಲಾಭ ಆಗಿಲ್ಲ. ಲಾಭ ಇಲ್ಲದೆ ಯಾರು ಯಾವ ಬಿಸಿನೆಸ್ ಮಾಡಲ್ಲ. ಹೀಗಾಗಿ ವ್ಯಾಪಾರದ ದಾರಿಗಳನ್ನು ಬದಲಾಯಿಸಿಕೊಂಡಿದ್ದಾರೆ ಅಷ್ಟೇ.
6. ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ 2’ ಚಿತ್ರದ ಶೂಟಿಂಗ್‌ಗೂ ಮೊದಲೇ ಅಮೆಜಾನ್ ಪ್ರೈಮ್ ಬುಕ್ ಮಾಡಿಕೊಂಡಿದೆ. ಇದೇ ನಂಬಿಕೆ ಮತ್ತು ಕ್ವಾಲಿಟಿ ಕತೆ, ಚಿತ್ರಗಳನ್ನು ಬೇರೆಯವರು ಕೊಟ್ಟರೂ ಅಮೆಜಾನ್ ಪ್ರೈಮ್ ತೆಗೆದುಕೊಳ್ಳುತ್ತದೆ. ‘ಕಾಂತಾರ 2’ ಚಿತ್ರಕ್ಕೆ ಕೊಟ್ಟ ಗೌರವವನ್ನು ಬೇರೆ ಚಿತ್ರಗಳಿಗೂ ಕೊಡುತ್ತಾರೆ.
8. ಸಿನಿಮಾಗಳಿಗೆ ಬರುವ ಹೊಗಳಿಕೆ ಮಾತುಗಳಿಂದ ನಾವೇ ಅದ್ಭುತ ಸಿನಿಮಾ ಮಾಡಿದ್ದೇವೆ, ನೀವು ತೆಗೆದುಕೊಳ್ಳುತ್ತಿಲ್ಲ ಎಂದು ಓಟಿಟಿ ವಿರುದ್ಧ ಸಿಟ್ಟು ಮಾಡಿಕೊಂಡರೆ ಪ್ರಯೋಜನ ಇಲ್ಲ. ಹೊಗಳಿಕೆ ಮಾತುಗಳನ್ನು ಸೆಲೆಬ್ರೇಟ್ ಮಾಡುವುದನ್ನು ನಿಲ್ಲಿಸುವ ಅಗತ್ಯ ಇದೆ.
10. ಪ್ರೇಕ್ಷಕರು ಬುದ್ಧಿವಂತರಾಗಿದ್ದಾರೆ. ಅವರಿಗೆ ಒಳ್ಳೆಯ ಕತೆ ಬೇಕಿದೆ. ಕತೆ ಹುಡುಕಿ, ಕ್ವಾಲಿಟಿ ಸಿನಿಮಾ ಮಾಡಿದರೆ, ಅಮೆಜಾನ್ ಪ್ರೈಮ್‌ನಂತಹ ಓಟಿಟಿಗಳು ಅಂಥ ಸಿನಿಮಾಗಳನ್ನು ಹುಡುಕಿಕೊಂಡು ಬರುತ್ತವೆ.