ಹೆಣ್ಣು ಮಗುವಿನ ತಾಯಿಯಾದ ಹರ್ಷಿಕಾ ಪೂಣಚ್ಚ : ನವರಾತ್ರಿ ಹಬ್ಬದ ಮೊದಲ ದಿನ ಹುಟ್ಟಿದ ಮಗಳು

ಸಾರಾಂಶ

ತಾರಾ ಜೋಡಿ ಭುವನ್‌ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರಿಗೆ ಹೆಣ್ಣು ಮಗು ಜನಿಸಿದೆ. ನವರಾತ್ರಿ ಹಬ್ಬದ ಮೊದಲ ದಿನ ಹುಟ್ಟಿದ ಮಗಳು ಜನಿಸಿರುವ ಸಂತೋಷವನ್ನು ದಂಪತಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಿನಿವಾರ್ತೆ

ತಾರಾ ಜೋಡಿ ಭುವನ್‌ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಅವರಿಗೆ ಹೆಣ್ಣು ಮಗು ಜನಿಸಿದೆ. ನವರಾತ್ರಿ ಹಬ್ಬದ ಮೊದಲ ದಿನ ಹುಟ್ಟಿದ ಮಗಳು ಜನಿಸಿರುವ ಸಂತೋಷವನ್ನು ದಂಪತಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಭುವನ್‌, ‘ನಮ್ಮ ಬದುಕಿಗೆ ಮಗಳ ಆಗಮನವನ್ನು ತಿಳಿಸಲು ಸಂತೋಷ ಪಡುತ್ತಿದ್ದೇವೆ. ಹರ್ಷಿ ಮತ್ತು ಮಗಳು ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಹರ್ಷಿಕಾಳಂತೆ ಇದ್ದರೆ, ಅವಳ ಪ್ರಕಾರ ಮಗು ನನ್ನ ಪಡಿಯಚ್ಚಂತೆ’ ಎಂದು ತಿಳಿಸಿದ್ದಾರೆ.

Share this article