ಟಾಕ್ಸಿಕ್‌ ನಾಡಿಯಾ ಪಾತ್ರಕ್ಕೆ ಕಿಯಾರಾ ಆಯ್ಕೆಯಾದದ್ದು ಹೇಗೆ?

Published : Mar 30, 2026, 01:25 PM IST
Yash Kiara Advani

ಸಾರಾಂಶ

ಯಶ್‌, ಕಿಯಾರಾ ಅಡ್ವಾಣಿ ಮುಖ್ಯಪಾತ್ರದಲ್ಲಿರುವ ‘ಟಾಕ್ಸಿಕ್‌’ ಸಿನಿಮಾ ಜೂ.4ರಂದು ಬಿಡುಗಡೆಯಾಗುತ್ತಿದೆ. ಈ ಬಿಗ್‌ ಬಜೆಟ್‌ ವರ್ಲ್ಡ್‌ ಕ್ಲಾಸ್‌ ಸಿನಿಮಾಕ್ಕೆ ನಾಯಕಿಯಾಗಿ ಕಿಯಾರಾ ಆಯ್ಕೆಯಾಗಿದ್ದು ಹೇಗೆ ಎಂದು ಮೂರು ಕಾರಣದೊಂದಿಗೆ ನಿರ್ದೇಶಕಿ ಗೀತು ಮೋಹನ್‌ ದಾಸ್‌ ವಿವರಿಸಿದ್ದಾರೆ.

  ಸಿನಿವಾರ್ತೆ

ಯಶ್‌, ಕಿಯಾರಾ ಅಡ್ವಾಣಿ ಮುಖ್ಯಪಾತ್ರದಲ್ಲಿರುವ ‘ಟಾಕ್ಸಿಕ್‌’ ಸಿನಿಮಾ ಜೂ.4ರಂದು ಬಿಡುಗಡೆಯಾಗುತ್ತಿದೆ. ಈ ಬಿಗ್‌ ಬಜೆಟ್‌ ವರ್ಲ್ಡ್‌ ಕ್ಲಾಸ್‌ ಸಿನಿಮಾಕ್ಕೆ ನಾಯಕಿಯಾಗಿ ಕಿಯಾರಾ ಆಯ್ಕೆಯಾಗಿದ್ದು ಹೇಗೆ ಎಂದು ಮೂರು ಕಾರಣದೊಂದಿಗೆ ನಿರ್ದೇಶಕಿ ಗೀತು ಮೋಹನ್‌ ದಾಸ್‌ ವಿವರಿಸಿದ್ದಾರೆ.

ನಾಡಿಯಾ ಪಾತ್ರಕ್ಕೆ ಮೃದುತ್ವವೂ ಆವೇಶವೂ ಇದೆ.

1. ನಾಡಿಯಾ ಪಾತ್ರಕ್ಕೆ ಮೃದುತ್ವವೂ ಆವೇಶವೂ ಇದೆ. ಕಿಯಾರಾ ನಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ನನಗೆ ಈ ಪಾತ್ರಕ್ಕೆ ಅವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಅನಿಸಿತ್ತು. ಸಿನಿಮಾದಲ್ಲಿ ತರ್ಕ ವರ್ಕೌಟ್‌ ಆಗುವುದಿಲ್ಲ. ಇಲ್ಲಿ ಎಮೋಶನ್‌ ಅಥವಾ ಭಾವನೆಯೇ ಪ್ರಬಲ ಮಾಧ್ಯಮ. ತರ್ಕಕ್ಕೂ ಮೀರಿ ಭಾವನಾತ್ಮಕವಾಗಿ ಕಿಯಾರಾ ಅವರನ್ನು ಆಯ್ಕೆ ಮಾಡಿದೆ.

2. ಕಿಯಾರಾ ಪಾತ್ರವನ್ನು ಜೀವಿಸುವ ಬಗೆ ಅದ್ಭುತ. ಆಕೆ ತೆರೆ ಮೇಲಿದ್ದರೆ ನಟಿಸುತ್ತಿದ್ದಾಳೆ ಅನಿಸಲ್ಲ, ಪಾತ್ರವೇ ನಮ್ಮೆದುರು ನಿಂತಂತೆ ಭಾಸವಾಗುತ್ತದೆ. ಅಬ್ಬರಕ್ಕಿಂತ ಗಾಢವಾಗಿ ತಟ್ಟುವ ಹುಡುಗಿಯವಳು. ಮೌನವಾಗಿರುತ್ತಾಳೆ, ಮನಸ್ಸಲ್ಲೇ ಪಾತ್ರದ ಬಗ್ಗೆ ಆಲೋಚಿಸುತ್ತಿರುತ್ತಾಳೆ. ಕೆಲವೊಮ್ಮೆ ಪಾತ್ರದ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಾಳೆ. ನಿರ್ದೇಶಕರ ಚಿಂತನೆಯನ್ನು ಗ್ರಹಿಸಿ ಪಾತ್ರಕ್ಕಿಳಿಸುವ ಕಲೆ ಈಕೆಗಿದೆ.

3. ಈ ಹುಡುಗಿಯ ಶಿಸ್ತು, ಪ್ರಾಮಾಣಿಕತೆ, ತಾನಾಯ್ತು ತನ್ನ ಕೆಲಸ ಆಯ್ತು ಎಂಬ ಪ್ರವೃತ್ತಿ ನನಗೆ ಇಷ್ಟವಾದ ಮತ್ತೊಂದು ಅಂಶ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಒಂದ್ಸಲ ಟಚ್‌ ಮಾಡಲು ಬಿಡ್ತೀಯಾ ಅಂತ ಕೇಳಿದ್ದ : ರಣವೀರ್‌ ಸಿಂಗ್‌
ಲವ್‌ ಮಾಕ್‌ಟೇಲ್‌ 3 ಕೃತಿಚೌರ್ಯ ವಿವಾದ ಸುಖಾಂತ್ಯ