ನಾನು ತಪ್ಪು ಮಾಡಿಲ್ಲ, ಮಾಡಿದ್ದರೆ ಕಾಲಿಗೆ ಬಿದ್ದು ಕ್ಷಮೆ ಕೇಳಲೂ ರೆಡಿ: ರಚಿತಾ ರಾಮ್‌

Published : Jun 21, 2025, 11:16 AM IST
Rachitha ram

ಸಾರಾಂಶ

ನಟಿ ರಚಿತಾ ರಾಮ್‌ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿಲ್ಲ ಎಂದು ‘ಸಂಜುವೆಡ್ಸ್‌ ಗೀತಾ 2’ ಚಿತ್ರತಂಡ ಆರೋಪ ಮಾಡಿತ್ತು. ಇನ್ನೊಂದೆಡೆ ‘ಉಪ್ಪಿ ರುಪೀ’ ಚಿತ್ರದ ನಿರ್ಮಾಪಕಿಯೂ ರಚಿತಾ ತನ್ನಿಂದ ಹಣ ತೆಗೆದುಕೊಂಡು ಶೂಟಿಂಗ್‌ಗೆ ಬರಲಿಲ್ಲ ಎಂದು ದೂರು ನೀಡಿದ್ದರು.

 ಸಿನಿವಾರ್ತೆ

ನಟಿ ರಚಿತಾ ರಾಮ್‌ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿಲ್ಲ ಎಂದು ‘ಸಂಜುವೆಡ್ಸ್‌ ಗೀತಾ 2’ ಚಿತ್ರತಂಡ ಆರೋಪ ಮಾಡಿತ್ತು. ಇನ್ನೊಂದೆಡೆ ‘ಉಪ್ಪಿ ರುಪೀ’ ಚಿತ್ರದ ನಿರ್ಮಾಪಕಿಯೂ ರಚಿತಾ ತನ್ನಿಂದ ಹಣ ತೆಗೆದುಕೊಂಡು ಶೂಟಿಂಗ್‌ಗೆ ಬರಲಿಲ್ಲ ಎಂದು ದೂರು ನೀಡಿದ್ದರು. ಈ ಎರಡೂ ವಿಚಾರಗಳ ಬಗ್ಗೆ ರಚಿತಾ ರಾಮ್‌ ನೀಡಿರುವ ಸ್ಪಷ್ಟನೆ ಇಲ್ಲಿದೆ.

- ನಾನು ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಚಿಕ್ಕ ಮಕ್ಕಳ ಕಾಲಿಗೆ ಬಿದ್ದು ಕ್ಷಮೆ ಕೇಳಲೂ ಸಿದ್ಧಳಿದ್ದೇನೆ. ತಪ್ಪೇ ಮಾಡಿಲ್ಲ ಅಂದ ಮೇಲೆ ಆ ದೇವರೇ ಬಂದರೂ ನಾನು ಕಾಲಿಗೆ ಬೀಳಲ್ಲ.

- ‘ಸಂಜು ವೆಡ್ಸ್‌ ಗೀತಾ 2’ ಚಿತ್ರತಂಡ ಹಲವು ಪ್ರೆಸ್‌ಮೀಟ್‌ಗಳಲ್ಲಿ, ಸಂದರ್ಶನಗಳಲ್ಲಿ ನನ್ನ ಬಗ್ಗೆ ಆಡಿರುವ ಮಾತುಗಳು, ಕೊಟ್ಟಿರುವ ಹೇಳಿಕೆಗಳು ನನಗೆ ತುಂಬಾ ನೋವುಂಟು ಮಾಡಿವೆ. ಈ ಸಿನಿಮಾಕ್ಕಾಗಿ ನಾನು ಒಂದೂ ಮುಕ್ಕಾಲು ವರ್ಷ ಕೆಲಸ ಮಾಡಿದ್ದೇನೆ. ಚಿತ್ರದ ಪ್ರಚಾರದ ಕಾರ್ಯಕ್ರಮಗಳಲ್ಲಿ ನನ್ನ ಕೆಲಸ, ಬದ್ಧತೆ ಬಗ್ಗೆ ಹೊಗಳಿದ್ದಾರೆ. ಈಗ ಅದೇ ಚಿತ್ರತಂಡ ನನ್ನನ್ನು ಸುಳ್ಳುಗಾರ್ತಿ, ನಾಟಕ ಆಡೋಳು ಅಂತಿದ್ದಾರೆ.

- ‘ಸಂಜು ವೆಡ್ಸ್‌ ಗೀತಾ 2’ ಚಿತ್ರದ ಶೂಟಿಂಗ್‌ ನಡೆಯುವ ಹೊತ್ತಿಗೆ ನನ್ನ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿತ್ತು. ಇಡೀ ಚಿತ್ರತಂಡ ರಿಲೀಸ್‌ ಪ್ರಚಾರದಲ್ಲಿತ್ತು. ಆ ಚಿತ್ರದ ನಿರ್ಮಾಪಕರು, ನಿರ್ದೇಶಕರು ನನ್ನ ಒಂದು ದಿನ ಪ್ರಚಾರಕ್ಕೆ ಬನ್ನಿ ಅಂತ ಕೇಳಿಕೊಂಡರು. ಆ ಚಿತ್ರದ ಪ್ರಮೋಷನ್‌ಗೆ ಹೋಗಲು ಒಂದು ದಿನದ ಅವಕಾಶವನ್ನೂ ಇವರು ಕೊಡಲಿಲ್ಲ. ಈಗ ನನ್ನ ಹೊಸ ಸಿನಿಮಾ ತಂಡದವರು ಈ ಸಿನಿಮಾ ಪ್ರಚಾರಕ್ಕೆ ಬಿಟ್ಟುಕೊಡುತ್ತಿಲ್ಲ, ಅಷ್ಟೇ. ಅಷ್ಟಾಗಿಯೂ ನಾನು ‘ಸಂಜು ವೆಡ್ಸ್‌ ಗೀತಾ 2’ ಚಿತ್ರಕ್ಕೆ ಏನು ಕೆಲಸ ಮಾಡಬೇಕೋ ಅದನ್ನ ಮಾಡಿದ್ದೇನೆ.

- ದುಡ್ಡು ತಗೊಂಡು ಸಿನಿಮಾ ಶೂಟಿಂಗ್‌ಗೆ ಡೇಟ್ಸ್‌ ಕೊಟ್ಟಿಲ್ಲ ಅನ್ನೋ ದೂರಿನ ಬಗ್ಗೆ ಹಿರಿಯರಾದ ಸಾ ರಾ ಗೋವಿಂದು ವಿಚಾರಣೆ ಮಾಡುತ್ತಿದ್ದಾರೆ. ಅವರು ಈ ಬಗ್ಗೆ ಮಾತನಾಡುವ ತನಕ ನಾನು ಎಲ್ಲೂ ಮಾತನಾಡಬಾರದು ಅಂತ ಸೂಚನೆ ಕೊಟ್ಟಿದ್ದಾರೆ. ಅವರ ಮಾತನ್ನು ಗೌರವಿಸುತ್ತೇನೆ.

ನಾನು ಕ್ಷಮೆ ಕೇಳಬೇಕು ಅಂದರೆ ನನ್ನ ಅಭಿಮಾನಿಗಳಿಗೆ ಮಾತ್ರ. ಈ ಬೆಳವಣಿಗೆಗಳಿಂದ ನಿಮಗೆ ಬೇಸರ ಆಗಿದ್ದರೆ, ಅಭಿಮಾನಿಗಳೇ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಆಸ್ಕರ್‌ ರೇಸ್‌ನಿಂದ ಭಾರತದ ಹೋಮ್‌ಬೌಂಡ್‌ ಔಟ್‌
ಮೇಘನಾ ಗಾಂವ್ಕರ್ ಈಗ ಡಾ.ಮೇಘನಾ : ತಂದೆಯ ಕನಸು ಈಡೇರಿಸಿದ ಹೆಮ್ಮೆ