ಸಿನಿವಾರ್ತೆ
ದರ್ಶನ್ ನಟನೆಯ ‘ದಿ ಡೆವಿಲ್’ ಚಿತ್ರದ ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಹಾಡು ಆ. 24ರಂದು ಬಿಡುಗಡೆ ಆಗುತ್ತಿದೆ. ಆ.15ಕ್ಕೆ ಈ ಹಾಡು ಬಿಡುಗಡೆ ಆಗಬೇಕಿತ್ತು. ಆದರೆ ದರ್ಶನ್ ಮರಳಿ ಜೈಲು ಸೇರಿದ್ದರಿಂದ ಹಾಡಿನ ಬಿಡುಗಡೆ ಮುಂದೂಡಲಾಗಿತ್ತು. ಈಗ ಮತ್ತೆ ಹಾಡಿನ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.
ಆ.24ರಂದು ಬೆಳಗ್ಗೆ 10.5ಕ್ಕೆ ಸರಿಗಮ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗುತ್ತಿರುವುದಾಗಿ ವಿಜಯಲಕ್ಷ್ಮೀ ದರ್ಶನ್ ತಮ್ಮ ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ. ಮಿಲನ ಪ್ರಕಾಶ್ ನಿರ್ದೇಶನ, ನಿರ್ಮಾಣದ ಚಿತ್ರ ಇದಾಗಿದೆ.