ಬಿಡದಿಯಲ್ಲಿ ವಿನೂತನಾ ಮನರಂಜನಾ ತಾಣ ಜಾಲಿವುಡ್

KannadaprabhaNewsNetwork |  
Published : Oct 10, 2023, 01:00 AM IST

ಸಾರಾಂಶ

ಈ ಹಿಂದೆ ಇದ್ದ ಇನ್ನೋವೇಟಿವ್ ಫಿಲ್ಮ್ ಸಿಟಿ ಇದೀಗ ಜಾಲಿವುಡ್ ಎಂಬ ಹೆಸರಿನಲ್ಲಿ ಬದಲಾಗಿದೆ.

ಬಿಡದಿ ಸಮೀಪ ಇದ್ದ ಇನ್ನೋವೇಟಿವ್ ಫಿಲ್ಮ್ ಸಿಟಿ ಇದೀಗ ಹೊಸತಾಗಿದೆ ಮತ್ತು ಹೆಸರು ಕೂಡ ಬದಲಾಗಿದೆ. ಈ ಜಾಗದ ವಿನೂತನ ಹೆಸರು ‘ಜಾಲಿವುಡ್’. ಉದ್ಯಮಿ ಐಸಿರಿ ಗಣೇಶ್ ಇನ್ನೋವೇಟಿವ್ ಫಿಲ್ಮ್ ಸಿಟಿಯನ್ನು ತಾವು ವಹಿಸಿಕೊಂಡು ಅದಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಚಿತ್ರತಂಡಗಳು ಸುಲಭವಾಗಿ ಚಿತ್ರೀಕರಣ ಮಾಡುವಂತೆ ವಿಶೇಷವಾಗಿ ವಿನ್ಯಾಸ ಮಾಡಿದ್ದಾರೆ. ಬಿಡುವಿನ ಸಮಯ ಕಳೆಯಲು ಬಯಸುವವರಿಗೂ ಈ ಜಾಗ ಸೂಕ್ತವಾಗಿದೆ. ಆಟ, ಮನಂಜನೆ ಲಭ್ಯವಿದೆ. ಜಾಲಿವುಡ್‌ಗೆ ವಯಸ್ಕರಿಗೆ ರೂ.999, ಮಕ್ಕಳಿಗೆ ರೂ.699 ಹಾಗು ಹಿರಿಯ ನಾಗರಿಕರಿಗೆ ರೂ.599 ಪ್ರವೇಶ ದರ ನಿಗದಿ ಮಾಡಲಾಗಿದೆ. ಅ.15ರ ತನಕ ಊಟ ಉಚಿತ. ಇತ್ತೀಚೆಗೆ ನಡೆದ ಜಾಲಿವುಡ್ ಉದ್ಘಾಟನಾ ಸಂಭ್ರಮಾಚರಣೆ ಸಂದರ್ಭದಲ್ಲಿ ಚಂದನ್‌ ಶೆಟ್ಟಿ, ನಿವೇದಿತಾ ಗೌಡ, ಜನರಲ್ ಮ್ಯಾನೇಜರ್ ಬಷೀರ್, ಜಾಲಿವುಡ್ ಕಮರ್ಷಿಯಲ್ ಪಾರ್ಟ್‌ನರ್‌ ನವರಸನ್ ಇದ್ದರು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಮೊದಲು ದಕ್ಷಿಣ ಭಾರತದಲ್ಲಿ, ವಾರ ಬಿಟ್ಟು ಹಿಂದಿಯಲ್ಲಿ ಬರಲಿದೆ 45
75ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್‌