2025ರ ಕನ್ನಡ ಚಿತ್ರರಂಗದ ಸಕ್ಸಸ್‌ ರೇಟ್‌ 0.78%-ಗೆದ್ದ ಕನ್ನಡ ಭಾಷೆಯ ಸಿನಿಮಾಗಳು ಎರಡೇ

Published : Dec 19, 2025, 01:38 PM IST
cinema

ಸಾರಾಂಶ

  ಒಂದು ವರ್ಷದಲ್ಲಿ ರಾಜ್ಯದಲ್ಲಿ ಬಿಡುಗಡೆಯಾದ ಒಟ್ಟು ಸಿನಿಮಾಗಳ ಸಂಖ್ಯೆ 282. ಅದರಲ್ಲಿ ಬರೀ ಕನ್ನಡ ಸಿನಿಮಾಗಳ ಸಂಖ್ಯೆ 256. ಡಿ.25ರಂದು ಬಿಡುಗಡೆಯಾಗುವ ಮಾರ್ಕ್‌ ಮತ್ತು 45 ಹೊರತುಪಡಿಸಿದರೆ ಈ ವರ್ಷ ಚಿತ್ರಮಂದಿರದಲ್ಲಿ ಗಳಿಕೆಯಲ್ಲಿ ಎದ್ದು ಕಾಣುವಂತೆ ಗೆದ್ದ ಕನ್ನಡ ಭಾಷೆಯ ಸಿನಿಮಾಗಳು ಎರಡೇ

 ಕನ್ನಡಕ್ಕೆ ಡಬ್ಬಿಂಗ್‌ ಆದ ಪರಭಾಷಾ ಸಿನಿಮಾಗಳ ಸಂಖ್ಯೆಯನ್ನೂ ಸೇರಿಸಿದರೆ ಈ ಒಂದು ವರ್ಷದಲ್ಲಿ ರಾಜ್ಯದಲ್ಲಿ ಬಿಡುಗಡೆಯಾದ ಒಟ್ಟು ಸಿನಿಮಾಗಳ ಸಂಖ್ಯೆ 282. ಅದರಲ್ಲಿ ಬರೀ ಕನ್ನಡ ಸಿನಿಮಾಗಳ ಸಂಖ್ಯೆ 256. ಡಿ.25ರಂದು ಬಿಡುಗಡೆಯಾಗುವ ಮಾರ್ಕ್‌ ಮತ್ತು 45 ಹೊರತುಪಡಿಸಿದರೆ ಈ ವರ್ಷ ಚಿತ್ರಮಂದಿರದಲ್ಲಿ ಗಳಿಕೆಯಲ್ಲಿ ಎದ್ದು ಕಾಣುವಂತೆ ಗೆದ್ದ ಕನ್ನಡ ಭಾಷೆಯ ಸಿನಿಮಾಗಳು ಎರಡೇ. ಕಾಂತಾರ 1 ಮತ್ತು ಸು ಫ್ರಂ ಸೋ. ಆ ಲೆಕ್ಕದಲ್ಲಿ ನೋಡಿದರೆ ಈ ವರ್ಷ ನಮ್ಮ ಚಿತ್ರರಂಗದ ಸಕ್ಸಸ್ ರೇಟ್ 0.78%.

ರೌಂಡ್- ಯಿಯರ್ ರೌಂಡಪ್‌

ಒಂದು ವರ್ಷ 282 ಸಿನಿಮಾಗಳು

ಡಿ.25ರಂದು ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅವನ್ನೂ ಸೇರಿಸಿದರೆ ಈ ವರ್ಷ ಬಿಡುಗಡೆಯಾದ ಒಟ್ಟು ಸಿನಿಮಾಗಳ ಸಂಖ್ಯೆ 282. ಅವುಗಳಲ್ಲಿ ಕನ್ನಡ, ತುಳು ಕೊಂಕಣಿ ಸೇರಿದಂತೆ ನೇರವಾಗಿ ಥಿಯೇಟರಲ್ಲಿ ಬಿಡುಗಡೆಯಾಗಿದ್ದು, ಓಟಿಟಿ ಮತ್ತು ಯೂಟ್ಯೂಬ್ ಸೇರಿದಂತೆ ಡಿಜಿಟಲ್‌ನಲ್ಲಿ ಬಿಡುಗಡೆಯಾದವು ಮತ್ತು ಡಬ್ಬಿಂಗ್‌ ಸಿನಿಮಾಗಲು ಸೇರಿವೆ. ಈ ಲೆಕ್ಕದಲ್ಲಿ 2025ನೇ ಇಸವಿ ಅತಿ ಹೆಚ್ಚು ಸಿನಿಮಾ ರಿಲೀಸ್ ಆದ ವರ್ಷ ಎಂಬ ದಾಖಲೆ ತನ್ನದಾಗಿಸಿಕೊಂಡಿದೆ.

ಥಿಯೇಟರ್‌ನಲ್ಲಿ ಬಿಡುಗಡೆ- 248

ಡಿಜಿಟಲ್‌ ಬಿಡುಗಡೆ- 8

ಇತರ ಭಾಷೆ- 7 (ತುಳು), 4 (ಕೊಂಕಣಿ)

ಕನ್ನಡಕ್ಕೆ ಡಬ್‌ ಆಗಿದ್ದು (ಚಿತ್ರಮಂದಿರದಲ್ಲಿ ರಿಲೀಸ್ ಆಗಿದ್ದು)- 15

ಒಟ್ಟು- 282

ಪ್ರತಿಭೆಯಿಂದ ಗಮನ ಸೆಳೆದ ಸಿನಿಮಾಗಳು

1. ಏಳುಮಲೆ

2. ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು

3. ಮಿಥ್ಯ

4. ನೋಡಿದವರು ಏನಂತಾರೆ

5. ಹೆಬ್ಬುಲಿ ಕಟ್‌

6. ಕೈಟ್ ಬ್ರದರ್ಸ್

7. ಎಕ್ಸ್ & ವೈ

ಮೆಚ್ಚುಗೆ ಗಳಿಸಿದವರು

1. ಮಾದೇವ

2. ಬ್ರ್ಯಾಟ್‌

3. ಎಕ್ಕ

4. ಜೈ (ಕನ್ನಡ ಮತ್ತು ತುಳು)

ಭರ್ಜರಿ ಕಾಸು ಬಾಚಿದವರು

1. ಕಾಂತಾರ 1

2. ಸು ಫ್ರಂ ಸೋ

ಈ ವರ್ಷ ದೊಡ್ಡದಾಗಿ ಕಾಸು ಬಾಚಿದ ಸಿನಿಮಾಗಳು ಎರಡೇ. 3+ ಕೋಟಿ ಬಜೆಟ್‌ನ ‘ಸು ಫ್ರಮ್‌ ಸೋ’ ಸಿನಿಮಾ ರು.121 ಕೋಟಿ ಗಳಿಸಿದರೆ, 125+ ಕೋಟಿ ಬಜೆಟ್‌ನ ‘ಕಾಂತಾರ 1’ ಚಿತ್ರ ಸುಮಾರು 880 ಕೋಟಿ ಗಳಿಸಿದೆ. ಇವೆರಡರ ಹೊರತಾಗಿ ಅಲ್ಲಿಂದಲ್ಲಿಗೆ ಗಳಿಕೆ ಮಾಡಿದ ಸಿನಿಮಾಗಳಿವೆ. ಆ ಗಳಿಕೆ ಸ್ಯಾಟಲೈಟ್‌, ಓಟಿಟಿ ಕಾರಣದಿಂದಾಗಿದೆಯೇ ಹೊರತು ಥಿಯೇಟರ್‌ ಗಳಿಕೆ ಅಲ್ಲ.

ಗಮನಾರ್ಹ ಕಲಾತ್ಮಕ ಚಿತ್ರಗಳು

1. ತಾಯಿ ಕಸ್ತೂರ್‌ ಗಾಂಧಿ (ನಿರ್ದೇಶನ: ಬರಗೂರು ರಾಮಚಂದ್ರಪ್ಪ)

2. ಅಮೃತಮತಿ (ನಿರ್ದೇಶನ: ಬರಗೂರು ರಾಮಚಂದ್ರಪ್ಪ)

3. ಪದ್ಮಗಂದಿ (ನಿರ್ದೇಶನ: ಸುಚೇಂದ್ರ ಪ್ರಸಾದ್‌)

ಮರಳಿ ಯತ್ನವ ಮಾಡಿದವರು

1. ಎಸ್‌. ನಾರಾಯಣ್‌ (ಮಾರುತ)

2. ಯೋಗರಾಜ್‌ ಭಟ್‌ (ಮನದ ಕಡಲು),

3. ಎಂ.ಡಿ. ಶ್ರೀಧರ್‌ (ಜಂಬೂ ಸರ್ಕಸ್‌)

4. ನಾಗಶೇಖರ್‌ (ಸಂಜು ವೆಡ್ಸ್‌ ಗೀತಾ 2)

ಮರು ಬಿಡುಗಡೆಯ ಮಹಿಮೆ

ಈ ವರ್ಷ ಕನ್ನಡದಲ್ಲಿ 6 ಚಿತ್ರಗಳ ಮರು ಬಿಡುಗಡೆ ಆಗಿವೆ. ಈ ಪೈಕಿ ಗಳಿಕೆಯಲ್ಲಿ ಸದ್ದು ಮಾಡಿದ್ದು ಪುನೀತ್‌ರಾಜ್‌ಕುಮಾರ್‌ ಅವರ ‘ಅಪ್ಪು’ ಚಿತ್ರ. ಆ ನಂತರ ದರ್ಶನ್‌ ಅವರ ‘ಚಿಂಗಾರಿ’ ಸಿನಿಮಾ. ಉಳಿದ ಚಿತ್ರಗಳು ಮರುಬಿಡುಗಡೆಯಾದ ಪಟ್ಟಿಗೆ ಸೇರಿಕೊಳ್ಳುವುದಕ್ಕೆ ಸೀಮಿತವಾದವು.

ಓಟಿಟಿಗಳಿಂದ ನೇರ ಖರೀದಿ ಭಾಗ್ಯ

ಓಟಿಟಿಗಳು ದುಡ್ಡು ಕೊಟ್ಟು ನೇರವಾಗಿ ಸಿನಿಮಾ ಖರೀದಿಸುವುದನ್ನು ಬಹಳ ಕಡಿಮೆ ಮಾಡಿವೆ. ಆ ದಾರಿ ಬಹುತೇಕ ಮುಚ್ಚಿದೆ. ಪೇ ಪರ್ ವ್ಯೂನಲ್ಲಿ ಹಾಕಬಹುದಾಗಿದೆ. ನೇರ ಖರೀದಿ ಭಾಗ್ಯ ಪಡೆದ ಸಿನಿಮಾಗಳು ಹೆಸರು ಇಲ್ಲಿದೆ.

ಅಮೆಜಾನ್ ಪ್ರೈಮ್- ಕಾಂತಾರ 1

ಜಿಯೋ ಹಾಟ್‌ಸ್ಟಾರ್‌- ಸು ಫ್ರಂ ಸೋ, ಮಾರ್ಕ್‌

ಜೀ5- 45, ಅಜ್ಞಾತವಾಸಿ, ಏಳುಮಲೆ, ಕೋಣ, ಜೈ

ವರ್ಷದ ಸೂಪರ್‌ ಹಿಟ್‌ ಹಾಡುಗಳು

1. ಬ್ಯಾಂಗಲ್‌ ಬಂಗಾರಿ (ಎಕ್ಕ)

2. ನಾನೇ ನೀನಂತೆ ನೀನಂತೆ (ಬ್ರ್ಯಾಟ್‌)

3. ಓ ಕೋಟೆ ಕೊತ್ತಲ (ಕಾಂತಾರ 1)

4. ಬಂದರೋ ಬಂದರು ಬಾವ ಬಂದರು (ಸು ಫ್ರಮ್ ಸೋ)

5. ಒಂದೇ ಒಂದು ಸಲ ಸೋತು ಬಿಡು ನೀ (ದಿ ಡೆವಿಲ್‌)

ರಂಗಕ್ಕಿಳಿಯದ ಸ್ಟಾರುಗಳು

1. ಯಶ್

2. ರಕ್ಷಿತ್‌ ಶೆಟ್ಟಿ

3. ಗೋಲ್ಡನ್‌ಸ್ಟಾರ್‌ ಗಣೇಶ್‌

4. ಧ್ರುವ ಸರ್ಜಾ

5. ಶ್ರೀಮುರಳಿ

6. ನೀನಾಸಂ ಸತೀಶ್

ಫೀಲ್ಟಿಗಿಳಿಯದ ಸ್ಟಾರ್ ನಿರ್ದೇಶಕರು

1. ತರುಣ್ ಸುಧೀರ್

2. ಸಂತೋಷ್‌ ಆನಂದ್‌ರಾಮ್‌

3. ಪ್ರಶಾಂತ್ ನೀಲ್

4. ದುನಿಯಾ ಸೂರಿ

5. ಪವನ್‌ ಕುಮಾರ್‌

ಡಬ್ಬಿಂಗ್‌ ಡಬ್ಬಾ ಝಣಝಣ

ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್‌ ಆದ ಸಿನಿಮಾಗಳು 11. ಈ ಪೈಕಿ ವರ್ಷದ ಮೊದಲ ಡಬ್ಬಿಂಗ್‌ ಚಿತ್ರವಾಗಿ ಬಂದ ರಾಮ್‌ಚರಣ್‌ ತೇಜ ನಟನೆಯ ‘ಗೇಮ್ ಚೇಂಜರ್’ ಚಿತ್ರ ಬಾಕ್ಸ್‌ ಅಫೀಸ್‌ನಲ್ಲಿ ಮಕಾಡೆ ಮಲಗಿತು. ಉಳಿದಂತೆ ‘ಮಹಾವತಾರ್ ನರಸಿಂಹ’ ಕಲೆಕ್ಷನ್‌ನಲ್ಲಿ ಮೊದಲ ಸ್ಥಾನದಲ್ಲಿ ನಿಂತರೆ, ತಮಿಳಿನ ‘ಕೂಲಿ’, ‘ಕುಬೇರ’ ಹಾಗೂ ತೆಲುಗಿನ ‘ಮಿರಾಯ್‌’ , ‘ಅಖಂಡ 2’ ಚಿತ್ರಗಳು ಗಳಿಕೆಯ ರೇಸಿನಲ್ಲಿ ಯಶಸ್ಸು ಕಂಡಿವೆ.

ಮರೆಯಾದ ಮಹನೀಯರು

1. ಬಿ. ಸರೋಜಾ ದೇವಿ

2. ಉಮೇಶ್‌

3. ರಾಕೇಶ್‌ ಪೂಜಾರಿ

4. ಬ್ಯಾಂಕ್‌ ಜನಾರ್ಧನ್‌

5. ದಿನೇಶ್‌ ಮಂಗ್ಳೂರು

6. ಸರಿಗಮ ವಿಜಿ

7. ಯಶವಂತ ಸರ್‌ದೇಶಪಾಂಡೆ

8. ರಾಜು ತಾಳಿಕೋಟೆ

9. ಚನ್ನೇಗೌಡ (ಗಡ್ಡಪ್ಪ)

10 . ಎ.ಟಿ. ರಘು (ನಿರ್ದೇಶಕರು)

11. ಎಸ್. ಮುರಳಿ ಮೋಹನ್ (ನಿರ್ದೇಶಕರು)

ಭರವಸೆಯ ನಿರ್ದೇಶಕರು

1.ಜೆ.ಪಿ. ತುಮಿನಾಡ್‌ (ಸು ಫ್ರಮ್ ಸೋ)

2. ಪುನೀತ್‌ ರಂಗಸ್ವಾಮಿ (ಏಳುಮಲೆ)

3. ಭೀಮ್‌ರಾವ್‌ (ಹೆಬ್ಬುಲಿ ಕಟ್)

4. ಕುಲದೀಪ್‌ ಕಾರ್ಯಪ್ಪ (ನೋಡಿದವರು ಏನಂತಾರೆ)

5. ವೀರೇನ್‌ ಸಾಗರ್‌ ಬಗಾಡೆ (ಕೈಟ್ ಬ್ರದರ್ಸ್)

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಸೆನ್ಸಾರ್‌ನಲ್ಲಿ ಇಯರ್‌ ಎಂಡ್‌ ರಶ್‌ - ಇಬ್ಬರು ಅಧಿಕಾರಿಗಳ ನಿಯೋಜನೆಗೆ ಮನವಿ
ನನಗೆ ಯಾರ ಜೊತೆಯೂ ಮನಸ್ತಾಪ ಇಲ್ಲ: ರಾಜ್ ಬಿ. ಶೆಟ್ಟಿ