ಕಾಟೇರ ಚಿತ್ರ ನಾನು ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವಲ್ಲ ಎಂದ ಕಿಚ್ಚ ಸುದೀಪ್

KannadaprabhaNewsNetwork |  
Published : Jan 18, 2024, 02:00 AM ISTUpdated : Jan 18, 2024, 09:11 AM IST
Kiccha Sudeep BJP

ಸಾರಾಂಶ

ಕಿಚ್ಚ ಸುದೀಪ್‌ಗೆ ದರ್ಶನ್ ನಟನೆಯ ‘ಕಾಟೇರ’ ಚಲನಚಿತ್ರವನ್ನು ನೋಡಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಖುದ್ದು ಸುದೀಪ್ ಉತ್ತರ ನೀಡಿದ್ದಾರೆ.

ಕನ್ನಡಪ್ರಭ ಸಿನಿವಾರ್ತೆ

ದರ್ಶನ್ ನಟನೆಯ ‘ಕಾಟೇರ’ ಚಲನಚಿತ್ರವು ಬಿಡುಗಡೆಯಾಗಿದ್ದು, ಹೆಚ್ಚು ಸದ್ದು ಮಾಡುತ್ತಿದೆ. ಅಭಿಮಾನಿಗಳು ದರ್ಶನ್‌ ನಟನೆಗೆ ಬಹುಪರಾಕ್‌ ಎಂದಿದ್ದಾರೆ.

ಅಲ್ಲದೆ,  ಅನೇಕ ಅಭಿಮಾನಿಗಳು ಕಿಚ್ಚ ಸುದೀಪ್‌ಗೆ ಕಾಟೇರ ಚಲನಚಿತ್ರದ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ. ಅದು ದರ್ಶನ್ ನಟನೆಯ ‘ಕಾಟೇರ’ ಸಿನಿಮಾವನ್ನು ಸುದೀಪ್ ನೋಡಿದ್ದಾರೆಯೇ? ಎಂದು.

ಈ ಪ್ರಶ್ನೆಗೆ ಖುದ್ದು ಸುದೀಪ್ ಉತ್ತರ ನೀಡಿದ್ದಾರೆ. ‘ನಾನು ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವಲ್ಲ’ ಎಂದು ಹೇಳಿದ್ದಾರೆ. ‌

ಆ ಮೂಲಕ ತಾನು ಕಾಟೇರ ಸಿನಿಮಾ ನೋಡಿದ್ದೇನೆ ಎಂಬ ಸಂದೇಶ ತಿಳಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ.

ಸುದೀಪ್‌ ಎಕ್ಸ್‌ (ಟ್ವಿಟರ್‌) ನಲ್ಲಿ ಅಭಿಮಾನಿಗಳ ಜೊಸೆ ಸಂವಾದ ನಡೆಸಿದ ವೇಳೆ ‘ಕಾಟೇರ ಯಾವಾಗ ನೋಡ್ತೀರ ಸರ್‌?’ ಎಂಬ ಪ್ರಶ್ನೆ ಎದುರಾಯಿತು. 

ಅದಕ್ಕೆ ಸುದೀಪ್‌, ‘Hasn’t Anyone Told You I Haven’t Already’ ಎಂದು ಗೊಂದಲದ ಹೇಳಿಕೆ ನೀಡಿದರು.

‘ನಾನು ಕಾಟೇರ ನೋಡಿಲ್ಲ ಅಂತ ನಿಮಗ್ಯಾರೂ ಹೇಳಿಲ್ಲವಲ್ಲ’ ಎಂದು ಸುದೀಪ್ ಹೇಳಿದ್ದಾರೆ ಎಂದು ಬಹುತೇಕರು ಅರ್ಥೈಸಿಕೊಂಡಿದ್ದಾರೆ. 

ಇನ್ನೂ ಕೆಲವರು, ‘ಸುದೀಪ್‌ ಬೇಕೆಂದೇ ಜನರ ತಲೆಗೆ ಹುಳ ಬಿಟ್ಟಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸಂವಾದದಲ್ಲಿ ಸುದೀಪ್ ‘ಮ್ಯಾಕ್ಸ್‌’ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣ ಪೂರ್ಣಗೊಂಡ ಮೇಲೆ ಆ ಸಿನಿಮಾ ಕುರಿತು ಮಾತನಾಡುವುದಾಗಿ ತಿಳಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಟಾಕ್ಸಿಕ್ ಚಿತ್ರದ ಕಾರ್‌ ಸೀನ್‌ನಲ್ಲಿರೋ ನಟೇಲಿ ಬರ್ನ್‌ ಯಾರು?
ರಾಕಿಂಗ್‌ ಸ್ಟಾರ್‌ ಮುಂದಿನ ನಿರ್ದೇಶಕರಿಗೆ ಗೀತು ಮೋಹನ್‌ದಾಸ್‌ ಕಿವಿಮಾತು