- ‘ಕೋಟಿ’ ಶೀರ್ಷಿಕೆ ಮೂರ್ನಾಲ್ಕು ಲೇಯರ್‌ಗಳಲ್ಲಿ ಸಿನಿಮಾದ ಕಥೆಗೆ ಕನೆಕ್ಟ್ ಆಗುತ್ತದೆ. ಕೋಟಿ ಎಂದರೆ ಒಂದರ ಮುಂದೆ ಏಳು ಸೊನ್ನೆ. ಈ ಅಂಕಿಯ ಜೊತೆ ಚಿತ್ರಕ್ಕೆ ಕನೆಕ್ಷನ್ ಇದೆ. ಕೋಟಿ ಅನ್ನುವುದು ಹೀರೋನ ಹೆಸರು. ಕೋಟಿ ಅಂದರೆ ದುಡ್ಡಿನ ಇಮೇಜ್ ಕಣ್ಮುಂದೆ ಬರುತ್ತೆ. ಗಳಿಕೆಯ ವಿಚಾರ. ಇದೂ ಕಥೆಗೆ ಸಂಬಂಧಿಸಿದ್ದೇ.
- ಇದು ಮಹಾನಗರವೊಂದರ ಸಾಮಾನ್ಯನ ಬದುಕಿನ ಕಥೆ. ಸದ್ಯ ಚಿತ್ರದ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆ ಕಷ್ಟದ ಹಾದಿಯನ್ನು ಮುಗಿಸಿಯೇ ಸಿನಿಮಾ ಅನೌನ್ಸ್ ಮಾಡಿದ್ದೇನೆ.
- ಮೊದಲಿಂದಲೂ ನನಗೆ ಕತೆ ಹೇಳುವ ಹುಚ್ಚು. ಈವರೆಗೆ ಕಿರುತೆರೆಯಲ್ಲಿ ಕಥೆ ಹೇಳಿದ್ದೆ. ಈಗ ಹೊಸ ಮಾಧ್ಯಮ ಸಿಕ್ಕಿದೆ. ಕತ್ತಲಲ್ಲಿ, ಅನ್‌ಡಿವೈಡೆಡ್ ಅಟೆನ್ಶನ್‌ನಲ್ಲಿ ದೊಡ್ಡ ಪರದೆಯ ಮೇಲೆ ಕಥೆ ಹೇಳುವುದು ಎಷ್ಟು ಚಂದ! ಈ ಕನಸಿನೊಂದಿಗೆ ಸಿನಿಮಾ ರಂಗಕ್ಕೆ ಬಂದಿದ್ದೇನೆ.- ಗೊತ್ತಿಲ್ಲದ ಜಗತ್ತಿಗೆ ಬಂದು ಹೊಸ ಸವಾಲನ್ನು ಸ್ವೀಕರಿಸಲು ಹೋದಾಗ ಅನೇಕ ಸವಾಲುಗಳು ಬರುತ್ತದೆ. ಹಿಂದಿದ್ದ ಸ್ಥಾನಮಾನ, ಸುತ್ತ ಜನ, ಹೆಸರು, ಹುದ್ದೆ, ಈ ಎಲ್ಲದರ ಭ್ರಮೆ ಕಳಚಿ ಬದಿಗಿಟ್ಟು ಹೊಸತಾಗಿ ಎಲ್ಲವನ್ನೂ ಆರಂಭಿಸುವುದು ಸಣ್ಣ ಸವಾಲಲ್ಲ. ಮತ್ತೆ ವಿದ್ಯಾರ್ಥಿಯಾಗುವ, ವಿನಯ, ಕಷ್ಟದ ಜೊತೆ ಹೋಗಬೇಕಾದ ಚಾಲೆಂಜ್ ಅದು. ಇದೆಲ್ಲವನ್ನೂ ರೂಢಿಸಿಕೊಳ್ಳಲು ಕೆಲವು ತಿಂಗಳು ಬೇಕಾಯಿತು.