ಸಿನಿವಾರ್ತೆ
ಅನೀಶ್ ತೇಜೇಶ್ಬರ್ ನಟನೆ, ನಿರ್ದೇಶನದ ‘ಲವ್ ಒಟಿಪಿ’ ಚಿತ್ರವು ನವೆಂಬರ್ 14 ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ತಂದೆ, ಮಗನ ಸಂಬಂಧ ಜೊತೆಗೆ ಪ್ರೀತಿ, ಪ್ರೇಮ ವಿಚಾರಗಳನ್ನು ಒಳಗೊಂಡ ಈ ಚಿತ್ರವನ್ನು ವಿಜಯ್ ರೆಡ್ಡಿ ನಿರ್ಮಿಸಿದ್ದಾರೆ. ‘ನಾನು ಮೊದಲ ಬಾರಿಗೆ ಈ ಚಿತ್ರದ ಮೂಲಕ ತೆಲುಗಿಗೂ ಪ್ರವೇಶಿಸುತ್ತಿದ್ದೇನೆ. ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ಗುಣಮಟ್ಟದ ಕತೆಯೊಂದಿಗೆ ಅದ್ದೂರಿಯಾಗಿ ಮೇಕಿಂಗ್ ಮಾಡಲಾಗಿದೆ.
ತೆಲುಗಿನ ಬೇಡಿಕೆಯ ಪೋಷಕ ಕಲಾವಿದ ರಾಜೀವ್ ಕನಕಾಲ ಅವರು ಕೂಡ ಈ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುವ ಜೊತೆಗೆ ತಮ್ಮ ಪಾತ್ರಕ್ಕೆ ಅವರೇ ಕನ್ನಡದಲ್ಲೂ ಡಬ್ ಮಾಡಿದ್ದಾರೆ’ ಎಂದರು ಅನೀಶ್ ತೇಜಶ್ವರ್.
ರಾಜೀವ್ ಕನಕಾಲ, ‘ನನ್ನ ಕಿರುತೆರೆಯಿಂದ ಹಿರಿತೆರೆಗೆ ಕರೆತಂದಿದ್ದು ನಿರ್ದೇಶಕ ರಾಜಮೌಳಿ ಅವರು. ಈಗ ಕನ್ನಡ ಚಿತ್ರರಂಗಕ್ಕೆ ಬಂದಿದ್ದೇನೆ. ಇದಕ್ಕೆ ಕಾರಣ ಅನೀಶ್ ಅವರು. ಇದು ನನ್ನ ಜೀವನದಲ್ಲಿ ದೊಡ್ಡ ತಿರುವು’ ಎಂದರು. ನಿರ್ಮಾಪಕ ವಿಜಯ್ ರೆಡ್ಡಿ, ನಾಯಕಿ ಜಾನ್ವಿಕಾ ಚಿತ್ರದ, ರವಿ ಭಟ್, ನಾಟ್ಯರಂಗ, ಪ್ರಮೋದಿನಿ ಮುಂತಾದವರು ಹಾಜರಿದ್ದು ಚಿತ್ರದ ಕುರಿತು ಹೇಳಿಕೊಂಡರು.
ನಿರ್ಮಾಪಕ ವಿಜಯ್ ರೆಡ್ಡಿ ಮಾತನಾಡಿ ಅನೀಶ್ ಜೊತೆ ಸಿನಿಮಾ ಮಾಡಲು ದೊಡ್ಡ ಕಥೆ ಇದೆ. 16 ವರ್ಷದಲ್ಲಿ ನಾವಿಬ್ಬರೂ ಸ್ನೇಹಿತರು, ಚಾಮುಂಡಿ ದೇವಿ ದರ್ಶನಕ್ಕೆ ಹೋದಾಗ ಕಥೆ ಕೇಳಿ ಇಷ್ಡವಾಗಿ ಸಿನಿಮಾ ಮಾಡಿದ್ದೇವೆ. ಭಾವಪ್ರೀತ ಎಂದರೆ ಭ್ರಮಾಂಡದಿಂದ ಪ್ರೀತಿಸಲ್ಪಟ್ಟವರು ಎಂದರ್ಥ ಹಾಗಾಗಿ ಸಿನಿಮಾ ಸಂಸ್ಥೆ ಹೆಸರಲ್ಲಿ ಚಿತ್ರ ಮಾಡಿದ್ದೇವೆ. ಕಥೆ ಸೃಷ್ಟಿ ಆದಾಗ ಸಿನಿಮಾಗೆ ಬೇಕಾದ ಪಾತ್ರವನ್ನು ಆಯ್ಕೆ ಮಾಡಿಕೊಂಡಿದೆ ಎಂದರು