- ನಿಶಾಂತ್ ಕಮ್ಮರಡಿ
ದೀಪಾವಳಿ ಬಂದೇ ಬಿಟ್ಟಿದೆ!
ಈ ದೊಡ್ಡ ಹಬ್ಬ ಬಂದರೆ ಬಿ ಟೌನ್ ಹುಡುಗಿಯರ ಲುಕ್, ಗೆಟಪ್ ನೋಡಿ ನೋಡಿ ಕಣ್ಣುಗಳೇ ಸುಸ್ತಾಗುತ್ತವೆ. ಅಷ್ಟು ವೆರೈಟಿಗಳು, ಸ್ಟೈಲ್‌ಗಳು. ಬಿ ಟೌನ್‌ನ ಜೆನ್ ಜೀ ಹುಡುಗಿಯರಾದ ಖುಷಿ ಕಪೂರ್, ಅನನ್ಯಾ ಪಾಂಡೆ, ಸುಹಾನಾ ಖಾನ್, ಶನಾಯ ಮೊದಲಾದವರು ಹಬ್ಬಕ್ಕೆಂದು ಧರಿಸಿದ ದೇಸಿ ಟಚ್ ಬೋಲ್ಡ್ ಲುಕ್‌ನ ಉಡುಗೆಗಳು ಸಖತ್ ಟ್ರೆಂಡಿಂಗ್ ಆಗಿವೆ. ಈ ಹುಡುಗಿಯರ ಡ್ರೆಸ್‌ಗಳನ್ನೆಲ್ಲ ಡಿಸೈನ್ ಮಾಡಿರೋದು ಬಾಲಿವುಡ್‌ನ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರ.
ಅನನ್ಯಾ ಪಾಂಡೆ ಗೋಲ್ಡನ್ ಲೆಹೆಂಗಾ ಚೋಲಿ ಸೆಟ್ ಬಂಗಾರದ ಬಣ್ಣದಲ್ಲಿದ್ದು, ಆಕೆಯ ಮೈ ಬಣ್ಣದೊಂದಿಗೆ ಸ್ಪರ್ಧೆಗೆ ಬಿದ್ದಂತಿದೆ. ಮುತ್ತು, ಮಣಿ, ಹರಳುಗಳ ದೆಸೆಯಿಂದ ಈ ಡ್ರೆಸ್, ಅದನ್ನು ತೊಟ್ಟ ಸುಂದರಿ; ಆಕಾಶದ ತಾರೆಯರ ಜೊತೆಗೇ ಕಾಂಪಿಟೀಶನ್‌ಗೆ ಬಿದ್ದಂತಿದೆ.
ಬಾಲಿವುಡ್ ದಂತಕತೆ ಶ್ರೀದೇವಿ ಮಗಳು ಖುಷಿ ಕಪೂರ್ ಉಟ್ಟ ನಸು ಗುಲಾಬಿ ಬಣ್ಣದ ಸೀರೆಯ ತುಂಬೆಲ್ಲ ಸಾವಿರಾರು ಮುತ್ತು ರತ್ನಗಳ ವಿನ್ಯಾಸವಿದೆ. ಎಡ್ಜೀ ಎಸಿಮೆಟ್ರಿಕ್ ಹೆಮ್ ಬ್ಲೌಸ್ ಟ್ರೆಂಡಿ ಅನಿಸಿದ್ರೆ, ಕಿವಿಗೆ ಸ್ಟಡ್ಸ್ ಬಿಟ್ಟು ಮತ್ಯಾವ ಆಭರಣಗಳನ್ನೂ ಧರಿಸದೇ ಈ ಸುಂದರಿ ಉಡುಗೆಯಿಂದಲೇ ಗಮನಸೆಳೆಯುತ್ತಾರೆ.
ಶನಾಯ ಕಪೂರ್ ಥರಿಸಿದ ಎನ್ಸೆಬಲ್‌ನಲ್ಲೂ ಮುತ್ತು ಮತ್ತು ಹರಳಿನ ವಿನ್ಯಾಸವಿದೆ.
ಚಂದಿರ ಮಕ್ಕಳ ಹಾಗೋ, ಆಕಾಶದ ನಕ್ಷತ್ರಗಳ ಹಾಗೋ ಹೊಳೆಯುತ್ತಿರುವ ಈ ಮುಗುದೆಯ ಚೆಲುವನ್ನು ಉಡುಗೆಗಳು ಮತ್ತಷ್ಟು ಪ್ರಖರವಾಗಿಸಿ ನೋಡುಗನ ಕಣ್ಣು, ಹೃದಯ ಕಂಗಾಲಾಗುವಂತೆ ಮಾಡಿದ್ದು ಸುಳ್ಳಲ್ಲ.