ಮೇಘನಾ ಗಾಂವ್ಕರ್ ಈಗ ಡಾ.ಮೇಘನಾ : ತಂದೆಯ ಕನಸು ಈಡೇರಿಸಿದ ಹೆಮ್ಮೆ

Published : Jan 21, 2026, 12:38 PM IST
Meghana Gaonkar

ಸಾರಾಂಶ

ಮೇಘನಾ ಗಾಂವ್ಕರ್‌ ಈಗ ‘ಡಾಕ್ಟರ್‌ ಮೇಘನಾ ಗಾಂವ್ಕರ್‌’. ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯದ ಮೇಲೆ ಪಿಎಚ್‌ಡಿ ಪ್ರಬಂಧ ಮಂಡಿಸಿ, ಮುಂಬೈ ಯುನಿವರ್ಸಿಟಿಯಿಂದ ಡಾಕ್ಟರೇಟ್‌ ಪಡೆದುಕೊಂಡಿರುವ ಮೇಘನಾ ಮಾತುಗಳು ಇಲ್ಲಿವೆ.

 ಮೇಘನಾ ಗಾಂವ್ಕರ್‌ ಈಗ ‘ಡಾಕ್ಟರ್‌ ಮೇಘನಾ ಗಾಂವ್ಕರ್‌’. ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯದ ಮೇಲೆ ಪಿಎಚ್‌ಡಿ ಪ್ರಬಂಧ ಮಂಡಿಸಿ, ಮುಂಬೈ ಯುನಿವರ್ಸಿಟಿಯಿಂದ ಡಾಕ್ಟರೇಟ್‌ ಪಡೆದುಕೊಂಡಿರುವ ಮೇಘನಾ ಮಾತುಗಳು ಇಲ್ಲಿವೆ.

ಆರ್‌. ಕೇಶವಮೂರ್ತಿ

ಡಾಕ್ಟರೇಟ್‌ ಮಾಡಬೇಕು ಅನಿಸಿದ್ದು ಯಾಕೆ?

ಹತ್ತು ವರ್ಷಗಳ ಹಿಂದೆಯೇ ಹೀಗೊಂದು ಕನಸು ಇತ್ತು. ಆ ಕನಸಿನ ಬೆನ್ನು ಹತ್ತಿದೆ. 2019ರಲ್ಲಿ ಪಿಎಚ್‌ಡಿಗೆ ಅಡ್ಮಿಷನ್‌ ಮಾಡಿಸಿಕೊಂಡೆ. ಪ್ರೀ ಪಿಎಚ್‌ಡಿಗಾಗಿಯೇ 2 ವರ್ಷ ಟೈಮ್‌ ಕೊಟ್ಟೆ. ಕೋವಿಡ್‌ ಬಂತು. 2025ರಲ್ಲಿ ಪದವಿ ಅನೌನ್ಸ್‌ ಆಯಿತು. ಮೊನ್ನೆ ನಡೆದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರಮಾಣ ಮಾಡಿದರು.

ನೀವು ಆಯ್ಕೆ ಮಾಡಿಕೊಂಡಿದ್ದ ವಿಷಯ ಯಾವುದು?

ನಾನು ಇಂಗ್ಲಿಷ್‌ನಲ್ಲಿ ಥೀಸಿಸ್‌ ಮಂಡಿಸಿರುವುದು. ಆಯ್ಕೆ ಮಾಡಿಕೊಂಡಿದ್ದ ವಿಷಯ ‘The Metamorphosis of Literature into Cinema: A Study in Adaptation’ ಎಂಬುದು. ನಾನು ಆಯ್ಕೆ ಮಾಡಿಕೊಳ್ಳುವ ವಿಷಯ ನನಗೆ ಓದುವ, ಬರೆಯುವ ಮತ್ತು ಅಧ್ಯಯನ ಮಾಡುವ ಆಸಕ್ತಿ ಇರುವ ಕ್ಷೇತ್ರವೇ ಆಗಬೇಕಿತ್ತು. ಹೀಗಾಗಿ ಸಿನಿಮಾ ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದೇನೆ.

ನಿಮ್ಮ ಪಿಎಚ್‌ಡಿ ಥೀಸಿಸ್‌ನಲ್ಲಿ ಏನೆಲ್ಲ ವಿಷಯಗಳಿವೆ?

ಕಾದಂಬರಿ ಆಧಾರಿತವಾಗಿ ನಿರ್ಮಾಣವಾಗಿರುವ, ಆಸ್ಕರ್‌ ನಾಮನಿರ್ದೇಶನದ 6 ಇಂಗ್ಲಿಷ್‌ ಸಿನಿಮಾಗಳ ಅಧ್ಯಯನ- ವಿಶ್ಲೇಷಣೆ, ಸಿನಿಮಾ ಬಿಸಿನೆಸ್‌, ಕಾದಂಬರಿಗಳು ಸಿನಿಮಾಗಳಾಗಿ ರೂಪಾಂತರ ಆಗುವ ಹಿಂದಿನ ವಿಜ್ಞಾನ, ಸೌತ್‌ ಇಂಡಿಯನ್ ಸಿನಿಮಾ ಬೆಳವಣಿಗೆ, ಸರ್ಕಾರದ ಪ್ರೋತ್ಸಾಹ, ಸಂಭಾವನೆ ತಾರತಮ್ಯ ಹೀಗೆ ಸಾಕಷ್ಟು ವಿಷಯಗಳು ಒಳಗೊಂಡಿದೆ.

ನಿಮ್ಮ ಈ ಥೀಸಿಸ್‌ ಚಿತ್ರರಂಗಕ್ಕೆ ಯಾವ ರೀತಿ ಪ್ರಾಕ್ಟಿಕಲ್ಲಾಗಿ ಉಪಯೋಗ ಆಗಹುದು?

‘ಇದೊಂದು ಅತ್ಯುತ್ತಮ ಪಿಎಚ್‌ಡಿ ಥೀಸಿಸ್‌ ಆಗಿದೆ. ಪುಸ್ತಕ ಮಾಡಿ ಫಿಲಮ್‌ ಸ್ಕೂಲ್ಸ್‌ಗೆ ಕಳುಹಿಸಿ’ ಅಂತ ನನ್ನ ಮಾರ್ಗದರ್ಶಕರು ಹೇಳಿದ್ದಾರೆ. ಸಿನಿಮಾ ಬಿಸಿನೆಸ್‌ ಪಾರ್ಟ್‌ ಇದೆ. ಅದು ತುಂಬಾ ಮಹತ್ವ ಅನಿಸಿದೆ. ಯಾರಾದರೂ ಸಹಾಯ ಮಾಡಿದರೆ ಕನ್ನಡಕ್ಕೂ ಅನುವಾದ ಮಾಡುವ ಯೋಚನೆ ಇದೆ.

ಡಾಕ್ಟರೇಟ್‌ ಪದವಿ ಸ್ವೀಕರಿಸಿದಾಗ ಏನನಿಸಿತು?

ಡಾಕ್ಟರೇಟ್‌ ಪ್ರದಾನ ಕಾರ್ಯಕ್ರಮಕ್ಕೆ ನನ್ನ ತಂದೆ, ತಾಯಿ ಕೂಡ ಬಂದಿದ್ದರು. ಅವರ ಮುಖದಲ್ಲಿ ಸಂತೋಷ ನೋಡಿ ನನಗೂ ಖುಷಿ ಆಯಿತು. ಡಾಕ್ಟರೇಟ್‌ ಮಾಡಬೇಕು ಎಂಬುದು ನನ್ನ ತಂದೆಯ ಕನಸು. ಅವರ ಕನಸು ಈಡೇರಿಸಿದ್ದೇನೆಂಬ ಹೆಮ್ಮೆ ಮೂಡಿತು.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

35 ಹಾಡುಗಳ ರವಿಚಂದ್ರನ್‌ ಹೊಸ ಸಿನಿಮಾ ಐ ಆ್ಯಮ್‌ ಗಾಡ್‌
ತವರಿನಲ್ಲಿ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟಗೆ ಅದ್ಧೂರಿ ಸ್ವಾಗತ