ಮಿ. ನಟ್ವರ್ ಲಾಲ್
ನಿರ್ದೇಶನ: ಲವ ಕಗ್ಗೆರೆ
ರೇಟಿಂಗ್: 3- ಪ್ರಿಯಾ ಕೆರ್ವಾಶೆದಶಕಗಳ ಕೆಳಗೆ ನಮ್ಮ ಪಾರ್ಲಿಮೆಂಟ್, ತಾಜ್‌ಮಹಲ್‌ಗಳನ್ನೇ ಮಾರಲು ಹೊರಟಿದ್ದ ಕ್ರಿಮಿನಲ್ ಮಿಥಿಲೇಶ್ ಕುಮಾರ್ ಶ್ರೀವಾಸ್ತವ್ ನೆನಪು ಮಾಸುತ್ತಿರುವಾಗಲೇ ಆತನನ್ನು ಮತ್ತೊಮ್ಮೆ ನೆನಪಿಸಿದ ಸಿನಿಮಾ ‘ಮಿ. ನಟ್ವರ್‌ಲಾಲ್’. ಯಾವುದೋ ಘಟನೆ, ಮತ್ಯಾವುದೋ ಹುನ್ನಾರ ನಮ್ಮ ನಿಮ್ಮ ನಡುವೆ ಇರುವ ಸಾದಾ ಸೀದಾ ಹುಡುಗನನ್ನು ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಹೇಗೆ ಕ್ರಿಮಿನಲ್ ಮಾಡಬಹುದು ಅನ್ನೋದನ್ನು ಈ ಸಿನಿಮಾ ಹೇಳುತ್ತೆ.
ಇಂಟರ್‌ವಲ್ ನಂತರದ ಭಾಗ ವೇಗ ಪಡೆದುಕೊಳ್ಳುತ್ತದೆ. ದಶಕಗಳ ಹಿಂದಿನ ಕ್ರಿಮಿನಲ್ ‘ನಟ್ವರ್ ಲಾಲ್’ ತಂತ್ರಗಳನ್ನೇ ಅನುಸರಿಸುವ ಕ್ರಿಮಿನಲ್‌ನ ತೀಕ್ಷ್ಣ ಬುದ್ಧಿಮತ್ತೆ, ಕಾರ್ಯತಂತ್ರ ಕುರ್ಚಿ ತುದಿಯಲ್ಲಿ ಕೂರಿಸುತ್ತದೆ. ಗೇಮ್‌ನ ಹಿಂದೆ ಬೀಳುವ ಇನ್‌ವೆಸ್ಟಿಗೇಟಿವ್ ಆಫೀಸರ್ ಅಲೋಕ್ ಮೂಲಕ ಕಥೆಯ ಮತ್ತೊಂದು ಆಯಾಮ ತೆರೆದುಕೊಳ್ಳುತ್ತದೆ.
ಎಸಿಪಿ ಅಲೋಕ್ ಪಾತ್ರದಲ್ಲಿ ರಾಜೇಶ್ ನಟರಂಗ ಅವರದು ಪಳಗಿದ ಅಭಿನಯ. ನಾಯಕ ತನುಷ್ ಶಿವಣ್ಣ, ನಟ ನಾಗಭೂಷಣ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಹೊಸತನದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳದೇ ಹೋದರೆ ಕೊಟ್ಟ ಕಾಸಿಗೆ ಮೋಸ ಮಾಡದೇ ಮನರಂಜನೆ ನೀಡುವ ಚಿತ್ರ.