ಗಾಯಕಿ ವಾರಿಜಾಶ್ರೀ ವರಿಸಲಿದ್ದಾರೆ ಸಂಗೀತ ನಿರ್ದೇಶಕ ರಘು ದೀಕ್ಷಿತ್‌

Published : Oct 16, 2025, 12:58 PM IST
Varijashree Venugopal Raghu Dixit

ಸಾರಾಂಶ

ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಅವರು ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ ಅವರನ್ನು ವಿವಾಹ ಆಗಲಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಮನೆಯವರ ಒಪ್ಪಿಗೆ ಮೇರೆಗೆ ವಿವಾಹ ಬಂಧನಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಈ ತಿಂಗಳ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ.

  ಸಿನಿವಾರ್ತೆ

ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಅವರು ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ ಅವರನ್ನು ವಿವಾಹ ಆಗಲಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಮನೆಯವರ ಒಪ್ಪಿಗೆ ಮೇರೆಗೆ ವಿವಾಹ ಬಂಧನಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಈ ತಿಂಗಳ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ.

ತಮ್ಮ ಮದುವೆ ಬಗ್ಗೆ ಸ್ವತಃ ರಘು ದೀಕ್ಷಿತ್‌ ಅವರೇ ಹೇಳಿಕೊಂಡಿದ್ದು, ‘ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದಲ್ಲಿ ನಾನು ನಿರೀಕ್ಷೆ ಮಾಡಿರದ ಆಕಸ್ಮಿಕ ತಿರುವು ಇದು. ನನ್ನ ಮತ್ತು ವಾರಿಜಾಶ್ರೀ ಅವರ ಪ್ರೀತಿಗೆ ವಾರಿಜಾಶ್ರೀ ಅವರ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಈಗ ನಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಹೊರಟಿದ್ದೇನೆ’ ಎಂದಿದ್ದಾರೆ.

ವಾರಿಜಾಶ್ರೀ ಹಾಗೂ ರಘು ದೀಕ್ಷಿತ್‌ ಇಬ್ಬರು ‘ಸಾಕು ಇನ್ನೂ ಸಾಕು’ ಎನ್ನುವ ಆಲ್ಬಂಗೆ ಕೆಲಸ ಮಾಡುವ ಮೂಲಕ ಪರಸ್ಪರ ಪರಿಚಯಗೊಂಡವರು. ಮುಂದೆ ಇಬ್ಬರು ಸ್ನೇಹಿತರಾಗಿ ಸಾಕಷ್ಟು ವಿಡಿಯೋ ಸಾಂಗ್‌ ಆಲ್ಬಂಗಳಿಗೆ ಕೆಲಸ ಮಾಡಿದ್ದಾರೆ. ಕೋವಿಡ್‌ ಸಮಯದಲ್ಲಿ ಇವರ ಸಾರಥ್ಯದಲ್ಲಿ ಮೂಡಿ ಬಂದಿದ್ದ ‘ಭರವಸೆಯ ಬದುಕು’ ವಿಡಿಯೋ ಸಾಂಗ್‌ಗೆ ಸಾಕಷ್ಟು ಮೆಚ್ಚುಗೆ ಹರಿದುಬಂದಿತ್ತು.

ರಘು ದೀಕ್ಷಿತ್‌ ಅವರು ಈ ಮೊದಲು ನೃತ್ಯ ಕಲಾವಿದೆ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. ಕೆಲವು ವರ್ಷಗಳ ಹಿಂದೆ ಮಯೂರಿ ಅವರೊಂದಿಗೆ ವಿಚ್ಛೇದನ ಮಾಡಿಕೊಂಡಿದ್ದ ರಘು ದೀಕ್ಷಿತ್‌ ಅವರು ಈಗ ವಾರಿಜಾಶ್ರೀ ಅವರ ಕೈ ಹಿಡಿಯುತ್ತಿದ್ದಾರೆ.

 

PREV
Read more Articles on

Recommended Stories

ಐಎಂಡಿಬಿ ಲಿಸ್ಟ್‌ನಲ್ಲಿ ನಂ.1, 2 ಸ್ಥಾನದಲ್ಲಿ ರಿಷಬ್‌ ಶೆಟ್ಟಿ, ರುಕ್ಮಿಣಿ ವಸಂತ್
ಯಶಸ್ಸನ್ನು ಅಲ್ಲಲ್ಲೇ ಬಿಟ್ಟು ನಡೆಯಬೇಕು : ರಾಜ್‌ ಬಿ ಶೆಟ್ಟಿ