;Resize=(412,232))
‘ಟಾಕ್ಸಿಕ್‌ನಂಥಾ ಇನ್ನೊಂದು ಸಿನಿಮಾ ಕನ್ನಡದಲ್ಲಾಗಲಿ, ಭಾರತೀಯ ಭಾಷೆಗಳಲ್ಲಾಗಲೀ ಈವರೆಗೆ ಬಂದಿಲ್ಲ. ಹಸಿಹಸಿ ಅಂಶಗಳಿರುವ, ಅನೇಕ ಲೇಯರ್‌ಗಳಿರುವ, ಪ್ರತಿಯೊಂದು ಸಂಗತಿಯೂ ಪರಸ್ಪರ ಕನೆಕ್ಟ್ ಆಗುವ ಪವರ್‌ಫುಲ್ ಚಿತ್ರವಿದು.’
ಇಲ್ಲಿಯವರೆಗೆ ‘ಟಾಕ್ಸಿಕ್’ನಲ್ಲಿ ನಟಿಸುತ್ತಿರುವುದನ್ನಷ್ಟೇ ಒಪ್ಪಿಕೊಂಡಿದ್ದ ನಟಿ ಇದೀಗ ಮೊದಲ ಬಾರಿಗೆ ಸಿನಿಮಾ ಬಗ್ಗೆ ಬಾಯ್ಬಿಟ್ಟಿದ್ದಾರೆ. ಯಶ್ ಬಗ್ಗೆ ಏನೂ ಹೇಳದೇ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಸೂಕ್ಷ್ಮತೆಯನ್ನು ಹೊಗಳಿದ್ದಾರೆ.
‘ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ವಿಷನ್ ದಿಟ್ಟವಾದುದು. ಅವರು ಬೋಲ್ಡ್ ಅಂಶಗಳನ್ನೂ ಮಾನವೀಯ ನೆಲೆಯಲ್ಲಿ ನಿರೂಪಿಸಿರುವುದು ವಿಶೇಷವೆನಿಸುತ್ತದೆ’ ಎಂದೂ ಹೇಳಿದ್ದಾರೆ.