ನಿರ್ದೇಶಕ ಹಾಗೂ ನಟ ಓಂಪ್ರಕಾಶ್ ರಾವ್ ಅವರ ಪುತ್ರ ಗುರು ಪಿ ರಾವ್ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಸಿನಿಮಾ ಹೆಸರು ‘ಎನ್‌ಹೆಚ್ 41’. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಓಂಪ್ರಕಾಶ್ ರಾವ್.
ಒಂದು ರಾತ್ರಿಯಲ್ಲಿ ಹೆದ್ದಾರಿಯಲ್ಲಿ ನಡೆಯುವ ಕಾಮಿಡಿ ಹಾಗೂ ಲವ್ ಟ್ರ್ಯಾಕ್ ಕತೆಯನ್ನು ಒಳಗೊಂಡ ಚಿತ್ರದ ಮೂಲಕ ಹೀರೋ ಆಗುತ್ತಿರುವ ಗುರು ಪಿ ರಾವ್, ‘ನಾನು ಎಂಬಿಎ ಓದಿದ್ದೇನೆ. ನಟನೆ ಕೋರ್ಸ್ ಮಾಡಿಕೊಂಡು ಚಿತ್ರರಂಗಕ್ಕೆ ಬಂದಿದ್ದೇನೆ. ಮೊದಲು ಒಂದಿಷ್ಟು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುವ ಮೂಲಕ ಪ್ರಾಕ್ಟಿಕಲ್ ಆಗಿಯೂ ಕಲಿಯಬೇಕು ಎನ್ನುವ ಅಪ್ಪನ ಮಾತಿನಂತೆ ಈಗ ಶೂಟಿಂಗ್ ನಡೆಯುತ್ತಿರುವ ಫೀನಿಕ್ಸ್ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ.
‘ನನಗೂ ನಟನೆ ಬಗ್ಗೆ ಆಸಕ್ತಿ ಇತ್ತು. ಚಿಕ್ಕಂದಿನಿಂದಲೂ ಸಿನಿಮಾ ವಾತಾವರಣದಲ್ಲೇ ಬೆಳೆದಿದ್ದೇನೆ. ಸಹಜವಾಗಿ ಸಿನಿಮಾ ಮತ್ತು ನಟನೆ ಬಗ್ಗೆ ಕುತೂಹಲ ಇತ್ತು. ಅದೇ ನನ್ನ ಕ್ಯಾಮೆರಾ ಮುಂದೆ ನಿಲ್ಲಿಸಿದೆ’ ಎನ್ನುತ್ತಾರೆ ಗುರು ಪಿ ರಾವ್.