ಒನ್‌ ಆ್ಯಂಡ್‌ ಹಾಫ್‌ ನನಗೆ ವಿಶೇಷ ಸಿನಿಮಾ: ನನ್ನ ಗಾಢ್ ಫಾದರ್ ಹೆಸರು ಕೂಡ ಸೂರಿ - ಮಾನ್ವಿತಾ ಹರೀಶ್

ಸಾರಾಂಶ

‘ಈ ಚಿತ್ರದ ನಾಯಕನ ತಂದೆಯ ನಿಜವಾದ ಹೆಸರು ಸೂರಿ. ಚಿತ್ರರಂಗದಲ್ಲಿ ನನ್ನ ಗಾಢ್ ಫಾದರ್ ಹೆಸರು ಕೂಡ ಸೂರಿ. ಹೀಗಾಗಿ ನನಗೆ ಇದು ವಿಶೇಷ ಸಿನಿಮಾ’.

ಸಿನಿವಾರ್ತೆ 

‘ಈ ಚಿತ್ರದ ನಾಯಕನ ತಂದೆಯ ನಿಜವಾದ ಹೆಸರು ಸೂರಿ. ಚಿತ್ರರಂಗದಲ್ಲಿ ನನ್ನ ಗಾಢ್ ಫಾದರ್ ಹೆಸರು ಕೂಡ ಸೂರಿ. ಹೀಗಾಗಿ ನನಗೆ ಇದು ವಿಶೇಷ ಸಿನಿಮಾ’.

- ಹೀಗೆ ಹೇಳಿದ್ದು ಮಾನ್ವಿತಾ ಹರೀಶ್. ‘ಒನ್‌ ಆ್ಯಂಡ್‌ ಹಾಫ್‌’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು. ಶ್ರೇಯಸ್ ಸೂರಿ ನಟನೆ-ನಿರ್ದೇಶನದ, ಮಾನ್ವಿತಾ ಹರೀಶ್ ನಾಯಕಿಯಾಗಿ ನಟಿಸಿರುವ ‘ಒನ್‌ ಆ್ಯಂಡ್‌ ಹಾಫ್‌’ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ. ಈ ಹಾಡಿಗೆ ಎಂ ಸಿ ಬಿಜ್ಜು ಹಾಗೂ ಯಶಸ್‌ ನಾಗ್‌ ಸಾಹಿತ್ಯ ಬರೆದಿದ್ದು, ನಾಯಕ ಶ್ರೇಯಸ್‌ ಸೂರಿ, ಅನಂತ್‌ ಹಾಗೂ ಎಂ ಸಿ ಬಿಜ್ಜು ಧ್ವನಿಯಾಗಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ.

ಆರ್ ಚರಣ್‌, ಬಿ ಇಂಪನಾ ಪ್ರಸಾದ್‌, ಅರ್ಪಿತ್‌ ನಾರಾಯಣ್‌, ಸಂತೋಷ್‌ ನಾಗೇನಹಳ್ಳಿ ಚಿತ್ರದ ನಿರ್ಮಾಪಕರು.

Share this article