ಆಪರೇಷನ್‌ ಸಿಂದೂರ್‌ ಸಿನಿಮಾ ಟೈಟಲ್‌ ಪಡೆಯಲು ಮುಂದಾದ ನಿರ್ಮಾಣ ಸಂಸ್ಥೆಗಳು

Follow Us

ಸಾರಾಂಶ

ಆಪರೇಷನ್‌ ಸಿಂದೂರ್‌ ಸಿನಿಮಾ ಟೈಟಲ್‌ ಪಡೆಯಲು ಮುಂದಾದ ನಿರ್ಮಾಣ ಸಂಸ್ಥೆಗಳು

ಕನ್ನಡದಲ್ಲಿ ಶೀರ್ಷಿಕೆ ರಿಜಿಸ್ಟರ್‌ ಮಾಡಿಸಿದ ಸಾ.ರಾ. ಗೋವಿಂದು

 ಸದ್ಯ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ‘ಆಪರೇಷನ್‌ ಸಿಂದೂರ್‌’ ಟೈಟಲ್‌ ರಿಜಿಸ್ಟ್ರೇಶನ್‌ಗೆ ರಾಷ್ಟ್ರಾದ್ಯಂತ ಸಿನಿಮಾ ನಿರ್ಮಾಣ ಸಂಸ್ಥೆಗಳು ಮುಗಿಬಿದ್ದಿವೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮಹಾವೀರ್‌ ಜೈನ್‌ ಕಂಪನಿ, ಟಿ ಸೀರೀಸ್‌, ಝೀ ಸ್ಟುಡಿಯೋಸ್‌, ನಿರ್ದೇಶಕರಾದ ಮಧುರ್‌ ಭಂಡಾರ್ಕರ್‌, ಅಶೋಕ್‌ ಪಂಡಿತ್‌ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ನಿರ್ಮಾಣ ಸಂಸ್ಥೆಗಳು ಟೈಟಲ್‌ ರಿಜಿಸ್ಟ್ರೇಶನ್‌ಗೆ ಅರ್ಜಿ ಸಲ್ಲಿಸಿವೆ.

ಈ ಬಗ್ಗೆ ಮಾತನಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಬಾಲಿವುಡ್‌ ನಿರ್ದೇಶಕ ಅಶೋಕ್‌ ಪಂಡಿತ್‌, ‘ರಾಷ್ಟ್ರದಲ್ಲಿ ಸಂಚಲನ ಸೃಷ್ಟಿಸುವ ಇಂಥಾ ಘಟನೆಗಳಾದಾಗ ಸಿನಿಮಾದ ನಿರ್ಮಾಣ ಸಂಸ್ಥೆಗಳು ಟೈಟಲ್‌ಗೆ ಮುಗಿಬೀಳುವುದು ಸಹಜ ಪ್ರಕ್ರಿಯೆ. ಈ ವಿಚಾರವಾಗಿ ಸಿನಿಮಾ ಮಾಡುವ ಯೋಚನೆ ಇಲ್ಲದಿದ್ದರೂ ಸೆನ್ಸೇಶನಲ್‌ ಆಗಿರುವ ಟೈಟಲ್‌ ಸಿಕ್ಕಾಗ ರಿಜಿಸ್ಟ್ರೇಶನ್‌ ಮಾಡಿಸಿಕೊಂಡು ಬಿಡುತ್ತಾರೆ. ನಾನೂ ಆಪರೇಶನ್‌ ಸಿಂದೂರ್‌ ಟೈಟಲ್‌ಗೆ ಅರ್ಜಿ ಸಲ್ಲಿಸಿದ್ದೇನೆ’ ಎಂದಿದ್ದಾರೆ.

ಕನ್ನಡದಲ್ಲಿ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಆಪರೇಷನ್‌ ಸಿಂದೂರ್‌’ ಟೈಟಲ್‌ಗೆ ಅರ್ಜಿ ಸಲ್ಲಿಸಿ ರಿಜಿಸ್ಟ್ರೇಶನ್‌ ಮಾಡಿಸಿಕೊಂಡಿದ್ದಾರೆ.