ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ತನ್ನ ಜನ್ಮದಿನದ ಆಚರಣೆಯಲ್ಲೇ ಕಣ್ಣೀರು ಹಾಕಿದ್ದಾರೆ. ಅವರು ಅಮ್ಮನನ್ನು ತಬ್ಬಿಕೊಂಡು ಕಣ್ಣುತುಂಬಿಕೊಂಡ ವೀಡಿಯೋ ಸೋಷಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಸಿನಿವಾರ್ತೆ : ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ತನ್ನ ಜನ್ಮದಿನದ ಆಚರಣೆಯಲ್ಲೇ ಕಣ್ಣೀರು ಹಾಕಿದ್ದಾರೆ. ಅವರು ಅಮ್ಮನನ್ನು ತಬ್ಬಿಕೊಂಡು ಕಣ್ಣುತುಂಬಿಕೊಂಡ ವೀಡಿಯೋ ಸೋಷಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮದುವೆಯ ಬಗ್ಗೆ ಮಾತನಾಡಿದ ರಾಗಿಣಿ, ‘ನಾನು ಸಿಂಗಲ್ಲಾಗೇ ಚೆನ್ನಾಗಿದ್ದೀನಿ. ಸಿನಿಮಾಗಳಲ್ಲಿ ಬ್ಯುಸಿ ಇದ್ದೀನಿ. ಸರಿಯಾದ ವ್ಯಕ್ತಿ, ಸರಿಯಾದ ಸಮಯ ಬಂದಾಗ ಮದುವೆ ಆಗ್ತೀನಿ. ಸದ್ಯಕ್ಕೆ ಸಿನಿಮಾಗಳಿಗೆ ನನ್ನ ಪ್ರಯಾರಿಟಿ. ಮದುವೆ ಸದ್ಯಕ್ಕಿಲ್ಲ. ಜಾವಾದಲ್ಲಿ ಸೂಪರ್‌ಸ್ಟಾರ್ ಆರ್ ಕ್ವೀನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದರು.
ನಾಯಕ ರಾಜವರ್ಧನ್, ‘ರಾಗಿಣಿ ಮದುವೆ ಏನಿದ್ರೂ ಮುಂದಿನ ವರ್ಷ ಇಟ್ಟುಕೊಳ್ಳಲಿ, ಮೊದಲು ನಮ್ಮ ಸಿನಿಮಾಕ್ಕೆ ಡೇಟ್ಸ್ ಕೊಡಲಿ. ವಾರಕ್ಕೆ ಇವರ ನಟನೆಯ ಮೂರು ಸಿನಿಮಾ ಮುಹೂರ್ತ ನಡೀತಿದೆ. ನಮ್ಮ ಸಿನಿಮಾದಲ್ಲಿ ದುರಹಂಕಾರಕ್ಕೆ ಬ್ರಾಂಡ್ ಅಂಬಾಸಿಡರ್‌ನಂಥ ಸೂಪರ್‌ಸ್ಟಾರ್ ಪಾತ್ರ. ರಜನಿಕಾಂತ್ ಪಡೆಯಪ್ಪ ಸಿನಿಮಾದಲ್ಲಿ ರಮ್ಯಕೃಷ್ಣ ಮಾಡಿದ ಬಗೆಯ ಪಾತ್ರ’ ಎಂದರು.
ಈ ವೇಳೆ ಪೌರ ಕಾರ್ಮಿಕರು ‘ಜಾವಾ’ ಚಿತ್ರದ ರಾಗಿಣಿ ಫಸ್ಟ್ ಲುಕ್ ಬಿಡುಗಡೆ ಮಾಡಿದರು.