ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬಳಿಯೂ ಒಂದು ನಿಗೂಢ ಪ್ರೇಮಕಥೆಯಿತ್ತು. ಅದೂ, ಬಾಲಿವುಡ್ ಜನಪ್ರಿಯ ನಟಿ ಶ್ರೀದೇವಿಯೊಂದಿಗೆ. ಆದರೆ ಅಲೌಕಿಕ ನಂಬಿಕೆಯೊಂದು ಶ್ರೀದೇವಿ ಬಳಿ ರಜನಿಕಾಂತ್ ಪ್ರೇಮ ನಿವೇದನೆ ಮಾಡುವುದನ್ನು ತಡೆದು ಸಂಬಂಧ ಕುದುರದಂತೆ ಮಾಡಿತ್ತು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ನವದೆಹಲಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬಳಿಯೂ ಒಂದು ನಿಗೂಢ ಪ್ರೇಮಕಥೆಯಿತ್ತು. ಅದೂ, ಬಾಲಿವುಡ್ ಜನಪ್ರಿಯ ನಟಿ ಶ್ರೀದೇವಿಯೊಂದಿಗೆ. ಆದರೆ ಅಲೌಕಿಕ ನಂಬಿಕೆಯೊಂದು ಶ್ರೀದೇವಿ ಬಳಿ ರಜನಿಕಾಂತ್ ಪ್ರೇಮ ನಿವೇದನೆ ಮಾಡುವುದನ್ನು ತಡೆದು ಸಂಬಂಧ ಕುದುರದಂತೆ ಮಾಡಿತ್ತು ಎಂಬ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ಕೆಲ ಸಮಯದ ಹಿಂದೆ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಬಹಿರಂಗಪಡಿಸಿದ್ದ ಈ ಸುದ್ದಿ ಇದೀಗ ಮತ್ತೆ ಸುದ್ದಿಯಾಗಿದೆ.
ದಶಕಗಳ ಹಿಂದೆ ರಜನಿ ಮತ್ತು ಶ್ರೀದೇವಿ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಈ ವೇಳೆ ಶ್ರೀದೇವಿ ಮೇಲೆ ರಜನಿಗೆ ಪ್ರೇಮಾಂಕುರವಾಗಿತ್ತು. ಆದರೆ ಹೇಳಲು ಅವರಿಗೆ ಧೈರ್ಯ ಸಾಕಾಗಿರಲಿಲ್ಲ. ಕೊನೆಗೊಂದು ದಿನ ಈ ವಿಷಯ ಹೇಳಲು ರಜನಿ ನಿರ್ಧರಿಸಿದ್ದರು. ಶ್ರೀದೇವಿ ಮನೆ ಗೃಹಪ್ರವೇಶದ ದಿನವೇ ತಮ್ಮ ಪ್ರೇಮ ನಿವೇದನೆಗೆ ರಜನಿ ನಿರ್ಧರಿಸಿದ್ದರು. ಅದಕ್ಕೆ ತಯಾರಾಗಿ ನಟಿಯ ಮನೆಗೆ ಹೋದಾಗ ಇದ್ದಕ್ಕಿದ್ದಂತೆ ಅಲ್ಲಿ ಕರೆಂಟ್ ಹೋಗಿ ಇಡೀ ಮನೆಯಲ್ಲಿ ಕತ್ತಲು ಆವರಿಸಿತು. ಇಂತ ಅಲೌಕಿಕ ಬೆಳವಣಿಗೆ ಬಗ್ಗೆ ನಂಬಿಕೆ ಹೊಂದಿದ್ದ ರಜನಿ ಅಂದು ಪ್ರೇಮ ನಿವೇದನೆ ಮಾಡದೇ ಮನೆಗೆ ಮರಳಿದರು. ಮುಂದೆಂದೂ ಅವರು ಈ ವಿಷಯ ಪ್ರಸ್ತಾಪಿಸಿಲ್ಲ. ಅದು ಅವರ ಮನಸ್ಸಿನಲ್ಲಿ ಹಾಗೆಯೇ ಉಳಿಯಿತು.
ಮುಂದೆ ಶ್ರೀದೇವಿ ಬೋನಿ ಕಪೂರ್ ಅವರನ್ನು ಮದುವೆ ಆದರು. ರಜನಿ ಲತಾರನ್ನು ವರಿಸಿದರು. 1980ರ ದಶಕದಲ್ಲಿ ರಜನಿ ರಾಣಾ ಚಿತ್ರದ ಶೂಟಿಂಗ್ ವೇಳೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ ಶ್ರೀದೇವಿ ಗುಟ್ಟಾಗಿ 7 ದಿನ ಉಪವಾಸ ಮಾಡಿ ರಜನಿ ಆರೋಗ್ಯಕ್ಕೆ ಪ್ರಾರ್ಥನೆ ಸಲ್ಲಿಸಿದ್ದರೂ ಎಂದು ಬಾಲಚಂದರ್ ನೆನಪಿಸಿಕೊಂಡಿದ್ದರು ಎಂದು ವರದಿಯೊಂದು ತಿಳಿಸಿದೆ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.