ರಾನಿ ಸಿನಿಮಾ ಪಕ್ಕಾ ಕಮರ್ಷಿಯಲ್‌ ಎಂಟರ್‌ಟೇನರ್‌. ಆ್ಯಕ್ಷನ್‌, ಲವ್‌, ಫ್ಯಾಮಿಲಿ ಸೆಂಟಿಮೆಂಟ್‌ : ಗುರುತೇಜ್‌ ಶೆಟ್ಟಿ

KannadaprabhaNewsNetwork |  
Published : Sep 12, 2024, 01:52 AM ISTUpdated : Sep 12, 2024, 05:26 AM IST
ರಾನಿ  | Kannada Prabha

ಸಾರಾಂಶ

ಕನ್ನಡತಿ’ ಧಾರಾವಾಹಿಯ ಹರ್ಷ ಪಾತ್ರದಲ್ಲಿ ಗಮನ ಸೆಳೆದ ನಟ ಕಿರಣ್‌ರಾಜ್‌, ಇದೀಗ ‘ರಾನಿ’ಯಾಗಿ ಹಿರಿತೆರೆ ಮೇಲೆ ಅಬ್ಬರಿಸಲು ಹೊರಟಿದ್ದಾರೆ. ಚಂದ್ರಕಾಂತ್‌ ಪೂಜಾರಿ ಮತ್ತು ಉಮೇಶ್‌ ಹೆಗ್ಡೆ ನಿರ್ಮಾಣ ಮಾಡಿರುವ ಈ ಸಿನಿಮಾ ಬಗ್ಗೆ ನಿರ್ದೇಶಕ ಗುರುತೇಜ್‌ ಮಾತನಾಡಿದ್ದಾರೆ.

- ಪ್ರಿಯಾ ಕೆರ್ವಾಶೆ

- ರಾನಿ ಸಿನಿಮಾ ಪಕ್ಕಾ ಕಮರ್ಷಿಯಲ್‌ ಎಂಟರ್‌ಟೇನರ್‌. ಆ್ಯಕ್ಷನ್‌, ಲವ್‌, ಫ್ಯಾಮಿಲಿ ಸೆಂಟಿಮೆಂಟ್‌ ಇದೆ. ಕಿರಣ್‌ ರಾಜ್‌ ಅವರ ಫ್ಯಾಮಿಲಿ ಆಡಿಯನ್ಸ್‌ನ ಮನಸ್ಸಲ್ಲಿಟ್ಟುಕೊಂಡೇ ನಾವು ಸ್ಕ್ರಿಪ್ಟ್‌ ಮಾಡಿದ್ದೇವೆ.

- ಗ್ಯಾಂಗ್‌ಸ್ಟರ್‌ ಸಿನಿಮಾ ಅಂದಾಕ್ಷಣ ಇದು ಹೊಡಿ ಬಡಿ ಸಿನಿಮಾ ಅಲ್ಲ. ಪಕ್ಕಾ ಫ್ಯಾಮಿಲಿ ಆ್ಯಕ್ಷನ್‌ ಜಾನರ್‌. ಸೌಂಡ್‌ ಡಿಸೈನ್‌, ಸೆಟ್‌, ಎಲಿವೇಶನ್ಸ್‌ ಸೊಗಸಾಗಿರುವ ಕಾರಣ ಥಿಯೇಟರಲ್ಲೇ ನೋಡಬೇಕು.

- ಗ್ಯಾಂಗ್‌ಸ್ಟರ್‌ ಸಿನಿಮಾ ಅಂದಾಕ್ಷಣ ಹೀರೋ ಮಚ್ಚು ಹಿಡೀತಾನೆ. ಮಚ್ಚು ಹಿಡಿಯಲು ಕಾರಣ ಅವನ ಲವ್ವು ಅಥವಾ ಅಮ್ಮ, ತಂಗಿ, ಹಣ ಇತ್ಯಾದಿ ಕಾರಣ ಇರುತ್ತೆ. ಆದರೆ ನಮ್ಮ ಸಿನಿಮಾದಲ್ಲಿ ವಿಭಿನ್ನ ಕಾರಣಕ್ಕೆ ಹೀರೋ ಕೈಗೆ ಲಾಂಗ್‌ ಬರುತ್ತೆ. ಆ ಕಾರಣವೇ ಇಂಟರೆಸ್ಟಿಂಗ್‌. ಈ ಅಂಶದ ಮೂಲಕ ಇದು ಕಲ್ಟ್‌ ಕ್ಲಾಸ್‌ ಸಿನಿಮಾವಾಗಿದೆ.

- ಕಿರಣ್‌ರಾಜ್ ಈಗಲೂ ಕನ್ನಡತಿಯ ಹರ್ಷ. ಜನರ ಮನಸ್ಸಿನಲ್ಲಿ ಬೇರೂರಿರುವ ಈ ಹರ್ಷ ಕಳೆದುಹೋಗಬಾರದು, ಜೊತೆಗೆ ಒಂದು ಆ್ಯಕ್ಷನ್‌ ಕಮರ್ಷಿಯಲ್‌ ಹೀರೋ ಆಗಿಯೂ ಕಾಣಿಸಬೇಕು ಎಂಬುದನ್ನು ಮನಸ್ಸಲ್ಲಿಟ್ಟುಕೊಂಡು ಮಾಡಿದ ಸಿನಿಮಾವಿದು.

- ಎರಡೂವರೆ ವರ್ಷ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದೇವೆ. ಗುಣಮಟ್ಟ, ಸ್ಕ್ರಿಪ್ಟ್‌, ನಿರೂಪಣೆ, ಪ್ರಮೋಶನ್‌ನಲ್ಲಿ ಎಲ್ಲೂ ಸಣ್ಣ ಸಮಸ್ಯೆಯೂ ಆಗಬಾರದು ಅಂತ ಶ್ರಮಿಸಿದ್ದೇವೆ. ಈ ಸಿನಿಮಾದಲ್ಲಿ ನಾಯಕ ಕಿರಣ್‌ರಾಜ್‌, ನಿರ್ದೇಶಕ ಗುರುತೇಜ್‌ ಹಾಗೂ ಇಡೀ ಟೀಮ್‌ನ ಭವಿಷ್ಯ ಇದೆ. ಸಿನಿಮಾ ಗೆದ್ದರೆ ಇವರ ಭವಿಷ್ಯ ಬೆಳಗುತ್ತದೆ.

- ನಾನು ಸಿನಿಮಾ ಕ್ಷೇತ್ರಕ್ಕೆ ಬಂದು 16 ವರ್ಷಗಳಾದವು. ಬರಹಗಾರನಾಗಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು. ‘ರುದ್ರತಾಂಡವ’ ಡೈಲಾಗ್‌ ಬರೆದ ಕೊನೆಯ ಸಿನಿಮಾ. ಆಮೇಲೆ ‘5ಜಿ’ ಮತ್ತು ‘ಬಡ್ಡೀಸ್’ ಸಿನಿಮಾ ಮಾಡಿದೆ. ‘ಬಡ್ಡೀಸ್‌’ಗೆ ಕಿರಣ್‌ರಾಜ್‌ ಅವರೇ ನಾಯಕ. ಇಲ್ಲಿಂದ ನಮ್ಮಿಬ್ಬರ ಒಡನಾಟ ಶುರುವಾಯ್ತು. ಅವರು ಎಲ್ಲರಿಗೂ ಕ್ಯೂಟ್‌ ಬಾಯ್‌ ಥರ ಕಂಡರೆ ನನಗೆ ಮಾಸ್‌ ಆಗಿ ಕಂಡರು.

- ಇದು ಪ್ರತಿಯೊಬ್ಬರ ಬದುಕಿನ ಕಥೆ. ಬದುಕಿನ ಬಗ್ಗೆ ನಮಗೆ ನಮ್ಮದೇ ಆದ ಪ್ಲಾನಿಂಗ್, ಕನಸು ಇರುತ್ತೆ. ಆದರೆ ಈ ಎಲ್ಲವನ್ನೂ ಮೀರಿ ಮೇಲೊಬ್ಬನ ಪ್ಲಾನ್‌ ಬೇರೆ ಇರುತ್ತೆ. ಆತನ ಸ್ಕ್ರಿಪ್ಟ್‌ ಪ್ರಕಾರ ನಮ್ಮ ಲೈಫ್‌ ಹೋಗ್ತಾ ಇರುತ್ತೆ. ಈ ಹಿನ್ನೆಲೆಯಲ್ಲಿ ಎಲ್ಲರ ಬದುಕಿನ ಸತ್ಯಕ್ಕೆ ಸಾಕ್ಷಿಯಾಗಿರುವವನು ರಾನಿ.

ಬಾಕ್ಸ್‌

ನಾನು ಚೇತರಿಸಿಕೊಳ್ಳುತ್ತಿದ್ದೇನೆ, ಗಾಬರಿ ಬೇಡ : ಕಿರಣ್‌ರಾಜ್‌

‘ರಾನಿ’ ಸಿನಿಮಾದ ನಾಯಕ ಕಿರಣ್‌ರಾಜ್‌ ಅವರು ಕಾರು ಅಪಘಾತದಿಂದ ಆಸ್ಪತ್ರೆ ಸೇರಿದ್ದಾರೆ. ಈ ಕುರಿತು ಆಸ್ಪತ್ರೆಯಿಂದಲೇ ಮಾತನಾಡಿರುವ ಕಿರಣ್‌ರಾಜ್‌, ‘ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಗಾಬರಿ ಬೇಡ’ ಎಂದು ತಿಳಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಬೋಲ್ಡ್‌ ಹೆಜ್ಜೆ ಇಟ್ಟ ಯಶ್‌ ಹಾಲಿವುಡ್‌ಗೆ ಗುರಿ ಇಟ್ಟ ಟಾಕ್ಸಿಕ್‌
ನಟಿ ಜಯಮಾಲ, ಸಾ.ರಾಗೆ ಡಾ। ರಾಜ್‌ ಪ್ರಶಸ್ತಿ