ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೊಡಮಾಡುವ 2020 ಮತ್ತು 2021ನೇ ಸಾಲಿನ ಡಾ. ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಮತ್ತು ಡಾ.ವಿಷ್ಣುವರ್ಧನ್‌ ಪ್ರಶಸ್ತಿ ಪ್ರಕಟಿಸಲಾಗಿದೆ.

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೊಡಮಾಡುವ 2020 ಮತ್ತು 2021ನೇ ಸಾಲಿನ ಡಾ. ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಮತ್ತು ಡಾ.ವಿಷ್ಣುವರ್ಧನ್‌ ಪ್ರಶಸ್ತಿ ಪ್ರಕಟಿಸಲಾಗಿದೆ.

2020ನೇ ಸಾಲಿನ ಡಾ.ರಾಜ್‌ಕುಮಾರ್‌ ಪ್ರಶಸ್ತಿಯನ್ನು ಚಲನಚಿತ್ರ ನಿರ್ಮಾಪರಾದ ಡಾ.ಜಯಮಾಲ ಮತ್ತು 2021ನೇ ಸಾಲಿನ ಪ್ರಶಸ್ತಿಯನ್ನು ಸಾ.ರಾ.ಗೋವಿಂದು ಅವರಿಗೆ ನೀಡುವುದಾಗಿ ಘೋಷಿಸಲಾಗಿದೆ. ಜತೆಗೆ 2020ನೇ ಸಾಲಿನ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಯನ್ನು ಹಿರಿಯ ನಿರ್ದೇಶಕರಾದ ಎಂ.ಎಸ್‌.ಸತ್ಯು ಮತ್ತು 2021ನೇ ಸಾಲಿನ ಪ್ರಶಸ್ತಿಯನ್ನು ಕೆ. ಶಿವರುದ್ರಯ್ಯ ಅವರಿಗೆ, 2020ನೇ ಸಾಲಿನ ಡಾ.ವಿಷ್ಣುವರ್ಧನ್‌ ಪ್ರಶಸ್ತಿಯನ್ನು ಹಿರಿಯ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥನಾರಾಯಣ ಮತ್ತು 2021ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ನಟ ಎಂ.ಕೆ.ಸುಂದರ್‌ರಾಜ್‌ ಅವರಿಗೆ ನೀಡುವ ಕುರಿತು ಪ್ರಕಟಿಸಲಾಗಿದೆ.

ಪ್ರಶಸ್ತಿ ಪುರಸ್ಕೃತರಿಗೆ ತಲಾ 5 ಲಕ್ಷ ರು. ನಗದು ಮತ್ತು 50 ಗ್ರಾಂ. ಚಿನ್ನದ ಪದಕ ನೀಡಲಾಗುತ್ತಿದೆ.

ವಾರ್ತಾ ಇಲಾಖೆ ನೀಡುವ 2020-21ನೇ ಸಾಲಿನ ಪ್ರಶಸ್ತಿ ಯಾರ್‍ಯಾರಿಗೆ ಪ್ರಶಸ್ತಿ?

ಡಾ.ರಾಜ್‌ಕುಮಾರ್‌ ಪ್ರಶಸ್ತಿ

- ಡಾ.ಜಯಮಾಲಾ(2020)

- ಸಾ.ರಾ.ಗೋವಿಂದು(2021) 

ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ-

- ಎಂ.ಎಸ್‌.ಸತ್ಯು(2020)

- ಕೆ. ಶಿವರುದ್ರಯ್ಯ(2021)

ಡಾ.ವಿಷ್ಣುವರ್ಧನ್‌ ಪ್ರಶಸ್ತಿ

-ಪ್ರಗತಿ ಅಶ್ವತ್ಥನಾರಾಯಣ(2020)

- ಎಂ.ಕೆ.ಸುಂದರ್‌ರಾಜ್‌ (2021)-