ಇಂದು ಹೈದರಾಬಾದ್‌ನಲ್ಲಿ ರಶ್ಮಿಕಾ - ವಿಜಯ್‌ ಆರತಕ್ಷತೆ

Published : Mar 04, 2026, 08:56 AM IST
Vijay Devarakonda - Rashmika

ಸಾರಾಂಶ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ರಿಸೆಪ್ಷನ್‌ ಇಂದು (ಮಾ.4) ಹೈದರಾಬಾದ್‌ನ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ.ಭದ್ರತೆಯ ಕಾರಣಕ್ಕೆ ಆಹ್ವಾನಿತರಿಗಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ

  ಸಿನಿವಾರ್ತೆ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ರಿಸೆಪ್ಷನ್‌ ಇಂದು (ಮಾ.4) ಹೈದರಾಬಾದ್‌ನ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ.

ಭದ್ರತೆಯ ಕಾರಣಕ್ಕೆ ಆಹ್ವಾನಿತರಿಗಷ್ಟೇ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವಿದ್ದು, ಆಹ್ವಾನಪತ್ರಿಕೆಯ ಜೊತೆಗೆ ಒನ್‌ಟೈಮ್‌ ಕ್ಯೂಆರ್‌ ಕೋಡ್‌ ಅನ್ನೂ ಕಳುಹಿಸಲಾಗಿದೆ. ಕ್ಯೂಆರ್‌ ಕೋಡ್ ಇದ್ದವರಿಗೆ ಮಾತ್ರ ಪ್ರವೇಶವಿರುತ್ತದೆ.

ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ದುಬೈನಿಂದ ಹೈ ಸೆಕ್ಯೂರಿಟಿಗಾಗಿ ವಿಶೇಷ ವ್ಯವಸ್ಥೆ ಮಾಡಿರುವುದೂ ವರದಿಯಾಗಿದೆ. ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಸೇರಿದಂತೆ ರಾಜಕೀಯ, ಸಿನಿಮಾ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ.

ಸರ್ಕಾರಿ ಶಾಲೆಗೆ ನೆರವು

ವಿವಾಹದ ಹಿನ್ನೆಲೆಯಲ್ಲಿ ತೆಲಂಗಾಣದ 44 ಸರ್ಕಾರಿ ಶಾಲೆಗಳ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ವಿಜಯ್‌ ಹಾಗೂ ರಶ್ಮಿಕಾ ಘೋಷಿಸಿದ್ದಾರೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.
Read more Articles on

Recommended Stories

ಧ್ರುವ ಸರ್ಜಾ ನಟನೆಯ ಮುಂದಿನ ಚಿತ್ರಕ್ಕೆ ಕಿರಣ್‌ ರಾಜ್‌ ನಿರ್ದೇಶನ
ರೊಮ್ಯಾಂಟಿಕ್‌ ಕಾಮಿಡಿ ಚಿತ್ರದಲ್ಲಿ ನಟ ಸುದೀಪ್‌-ಇದು ತೆಲುಗು ನಿರ್ದೇಶಕನ ಕನ್ನಡ ಸಿನಿಮಾ