ಕಾಂತಾರ ಅಧ್ಯಾಯ 1 ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿ

Published : Jul 24, 2025, 01:04 PM ISTUpdated : Jul 24, 2025, 01:06 PM IST
rukmini vasanth

ಸಾರಾಂಶ

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಅಧ್ಯಾಯ 1’ ಚಿತ್ರದಲ್ಲಿ ಖ್ಯಾತ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ.

  ಸಿನಿವಾರ್ತೆ

ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಅಧ್ಯಾಯ 1’ ಚಿತ್ರದಲ್ಲಿ ಖ್ಯಾತ ನಟಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ. ಚಿತ್ರತಂಡ ಇದುವರೆಗೂ ಈ ವಿಚಾರವನ್ನು ಗುಪ್ತವಾಗಿಟ್ಟಿದ್ದು, ಇನ್ನೂ ಅಧಿಕೃತವಾಗಿ ಈ ವಿಚಾರವನ್ನು ಬಹಿರಂಗ ಪಡಿಸಿಲ್ಲ.

ಇತ್ತೀಚೆಗೆ ಬಿಡುಗಡೆಯಾಗಿರುವ ಮೇಕಿಂಗ್‌ ವಿಡಿಯೋದಲ್ಲಿಯೂ ಒಂದು ಶಾಟ್‌ನಲ್ಲಿ ರುಕ್ಮಿಣಿ ವಸಂತ್‌ ಕಾಣಿಸಿಕೊಂಡಿದ್ದಾರೆ ಎಂದು ಚರ್ಚೆಗಳು ನಡೆಯುತ್ತಿವೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಟನೆ ಬಳಿಕ ರಿಷಬ್‌ ಶೆಟ್ಟಿಯವರ ಆಡಿಷನ್‌ನಲ್ಲಿ ಭಾಗವಹಿಸಿದ್ದ ರುಕ್ಮಿಣಿ ವಸಂತ್‌ ‘ಕಾಂತಾರ’ ಜಗತ್ತಿನ ಭಾಗವಾಗಲು ಆಯ್ಕೆಯಾಗಿದ್ದರು ಎನ್ನಲಾಗಿದೆ.

ಸದ್ಯಕ್ಕೆ ರಿಷಬ್ ಶೆಟ್ಟಿಯವರ ಜೊತೆ ಮಲಯಾಳಂನ ಖ್ಯಾತ ನಟ ಜಯರಾಮ್‌ ನಟಿಸುತ್ತಿರುವ ಕುರಿತು ಮಾಹಿತಿ ದೊರೆತಿದ್ದು, ಅದರ ಹೊರತಾಗಿ ಯಾರಾರು ಸಿನಿಮಾದಲ್ಲಿ ನಟಿಸಿದ್ದಾರೆ ಎಂಬುದನ್ನು ರಿಷಬ್‌ ಗುಟ್ಟಾಗಿ ಇಟ್ಟಿದ್ದಾರೆ. ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿರುವ ಈ ಚಿತ್ರ ಬಿಡುಗಡೆಗೆ ಇನ್ನು 2 ತಿಂಗಳು ಮಾತ್ರ ಬಾಕಿ ಇದ್ದು, ಇನ್ನು ಚಿತ್ರತಂಡ ಪ್ರಚಾರ ಶುರು ಮಾಡುವ ನಿರೀಕ್ಷೆ ಇದೆ.

ಹೊಂಬಾಳೆ ಫಿಲಂಸ್‌ನ ವಿಜಯ ಕಿರಗಂದೂರು ಈ ಚಿತ್ರವನ್ನು ವಿಶ್ವ ಮಟ್ಟದ ಪ್ರೇಕ್ಷಕರಿಗೆ ತಲುಪಿಸಲು ಈಗಿನಿಂದಲೇ ಸಜ್ಜಾಗುತ್ತಿದ್ದಾರೆ.

PREV
Read more Articles on

Recommended Stories

ಸತ್ತವಳ ನೆರಳಲ್ಲಿ ಬದುಕಿದವರ ಪಡಿಪಾಟಲು
ಡ್ಯೂಪ್ ಬಳಸದೇ ಕಠಿಣ ಸಾಹಸ ಚಿತ್ರೀಕರಣದಲ್ಲಿ ಭಾಗಿಯಾದ ಯಶ್