;Resize=(412,232))
ಶಾರೂಖ್ ಖಾನ್ ಅವರು ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅತಿಥಿ ಪಾತ್ರವಾದರೂ ಬಹಳ ಪವರ್‌ಫುಲ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೇ ನಟ ಮಿಥುನ್ ಚಕ್ರವರ್ತಿ; ಶಾರೂಖ್ ಅವರು ರಜನಿಕಾಂತ್ ಸಿನಿಮಾದಲ್ಲಿ ನಟಿಸುವ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದರು. ಇದೀಗ ತಿಳಿದುಬಂದ ಮಾಹಿತಿ ಪ್ರಕಾರ, ರಜನಿಕಾಂತ್ ನಟಿಸುತ್ತಿರುವ ಜೈಲರ್ 2 ಚಿತ್ರದ ಟೈಗರ್ ಮುತ್ತುವೇಲ್ ಪಾಂಡ್ಯನ್ ಪರವಾಗಿ ಶಾರೂಖ್ ಪಾತ್ರ ಮೂಡಿಬಂದಿದ್ದು, ಇದಕ್ಕಾಗಿ ಅವರು ಏಳೆಂಟು ದಿನ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.
ವಿಜಯ್ ಸೇತುಪತಿ, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್ 14ರಂದು ಸಿನಿಮಾ ಬಿಡುಗಡೆಯಾಗಲಿದೆ.