ಪುನೀತ್‌ ಪುತ್ರಿ ಧೃತಿ ರಾಜ್‌ಕುಮಾರ್‌ಗೆ ಶಿವರಾಜ್‌ಕುಮಾರ್‌ ಮೆಚ್ಚುಗೆ ಸಂದೇಶ

‘ಯೂ ಮೇಡ್‌ ಮೀ ಆಂಡ್‌ ದೊಡ್ಡಪ್ಪ ವೆರಿ ಪ್ರೌಡ್‌. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ’

Follow Us

  ಸಿನಿವಾರ್ತೆ

‘ಯೂ ಮೇಡ್‌ ಮೀ ಆಂಡ್‌ ದೊಡ್ಡಪ್ಪ ವೆರಿ ಪ್ರೌಡ್‌. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ’

- ಹೀಗೆ ಹೇಳಿದ್ದು ನಟ ಶಿವರಾಜ್‌ಕುಮಾರ್‌ ಅವರು. ಇದನ್ನು ಹೇಳಿದ್ದು ಪುನೀತ್‌ರಾಜ್‌ಕುಮಾರ್‌ ಅವರ ಪುತ್ರಿ ಧೃತಿ ರಾಜ್‌ಕುಮಾರ್‌ ಅವರನ್ನು ಉದ್ದೇಶಿಸಿ. ಶಿವಣ್ಣ ಅವರ ಈ ಸಂದೇಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ‘ಹಾಯ್‌ ಟೋಟೊ, ಅಭಿನಂದನೆಗಳು. ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ. ನೀನು ದೊಡ್ಡಪ್ಪನ್ನನ್ನ ತುಂಬಾ ಹೆಮ್ಮೆ ಪಡುವಂತೆ ಮಾಡಿದ್ದೀಯ. ಅಪ್ಪು, ಅಶ್ವಿನಿ, ನೀನು ಮತ್ತು ನುಕ್ಕಿ ಜೊತೆ ಬಹಳಷ್ಟು ಒಳ್ಳೆಯ ನೆನಪುಗಳು ಈಗಲೂ ಕಣ್ಣ ಮುಂದಿದೆ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ ಇರುತ್ತೆ. ನಿನ್ನಲಿಯೇ ಅಪ್ಪು ಕಾಣುತ್ತಿದ್ದೇವೆ. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. ನಿನ್ನ ಪದವಿಗಾಗಿ ಮತ್ತೊಮ್ಮೆ ಅಭಿನಂದನೆಗಳು ಟೋಟೊ’. ಇದು ಶಿವರಾಜ್‌ ಕುಮಾರ್‌ ಅವರ ಪೂರ್ತಿ ಸಂದೇಶ.

ಶಿವಣ್ಣ ಹೀಗೆ ಧೃತಿ ರಾಜ್‌ಕುಮಾರ್‌ ಅವರನ್ನು ಮೆಚ್ಚಿಕೊಳ್ಳಲು ಕಾರಣ, ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಪಾರ್ಸನ್ಸ್‌ ಸ್ಕೂಲ್‌ ಆಫ್‌ ಡಿಸೈನ್‌ ವಿಶ್ವವಿದ್ಯಾಲಯದಲ್ಲಿ ಧೃತಿ ರಾಜ್‌ಕುಮಾರ್‌ ಪದವಿ ಪಡೆದಿದ್ದಾರೆ. ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಧೃತಿ ರಾಜ್‌ಕುಮಾರ್‌ ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಈ ಸಮಾರಂಭಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ವಿನಯ್‌ ರಾಜ್‌ಕುಮಾರ್‌, ವಂದಿತಾ ರಾಜ್‌ಕುಮಾರ್‌ ಕೂಡ ಸಾಕ್ಷಿ ಆಗಿದ್ದರು. ಇದು ರಾಜ್‌ ಕುಟುಂಬದ ಸಂಭ್ರಮಕ್ಕೆ ಕಾರಣವಾಗಿದೆ. ಆಪ್ತರು, ಅಭಿಮಾನಿಗಳು ಧೃತಿ ರಾಜ್‌ಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಶಿವರಾಜ್‌ಕುಮಾರ್‌ ಅವರು ಕೂಡ ಹೀಗೆ ವಿಶೇಷವಾಗಿ ಮೆಚ್ಚಿಕೊಂಡು ಧೃತಿ ಅವರಿಗೆ ಶುಭ ಕೋರಿದ್ದಾರೆ. ಶಿವರಾಜ್‌ಕುಮಾರ್‌ ಅವರು ಧೃತಿ ಅವರನ್ನು ಟೋಟೊ ಹಾಗೂ ವಂದಿತಾ ಅವರನ್ನು ನುಕ್ಕಿ ಎಂದು ಮುದ್ದಾಗಿ ಕರೆಯುತ್ತಾರೆ.

ನ್ಯೂಯಾರ್ಕ್‌ ಸಿಟಿಯಲ್ಲಿರುವ ಪ್ರತಿಷ್ಠಿತಿ ಸಂಸ್ಥೆಯಾಗಿರುವ ಪಾರ್ಸನ್ಸ್‌ ಸ್ಕೂಲ್‌ ಆಫ್‌ ಡಿಸೈನ್‌-ದಿ ನ್ಯೂ ಸ್ಕೂಲ್‌ಗೆ ಸುಮಾರು 128 ವರ್ಷಗಳ ಇತಿಹಾಸವಿದೆ. ಇದು ಅತ್ಯಂತ ಹಳೆಯ ಕಲೆ ಮತ್ತು ವಿನ್ಯಾಸ ಶಾಲೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಫ್ಯಾಶನ್‌ ಡಿಸೈನಿಂಗ್‌, ಇಂಟೀರಿಯರ್‌ ಡಿಸೈನ್‌, ಜಾಹೀರಾತು, ಗ್ರಾಫಿಕ್‌ ಡಿಸೈನ್‌ ವಿಷಯಗಳ ಶಿಕ್ಷಣಕ್ಕೆ ಈ ವಿಶ್ವವಿದ್ಯಾಲಯ ಪ್ರಸಿದ್ಧಿ ಪಡೆದಿದೆ. ಈ ವಿಶ್ವವಿದ್ಯಾಲಯದಲ್ಲಿ ಇಲ್ಲಸ್ಟ್ರೇಟರ್‌ (illustrator) ಹಾಗೂ ಡಿಸೈನರ್‌ ವಿಭಾಗದಲ್ಲಿ ಪದವಿ ಪಡೆಯಬೇಕು ಎನ್ನುವುದು ಧೃತಿ ರಾಜ್‌ಕುಮಾರ್‌ ಅವರ ದೊಡ್ಡ ಕನಸಾಗಿತ್ತು. ಈಗ ಅದು ನನಸಾಗಿದೆ.

Read more Articles on