ಕನ್ನಡಪ್ರಭ ಸಿನಿವಾರ್ತೆ
ಸಿನಿಮಾ ಕುರಿತು ನಿರ್ದೇಶಕ ಡಿ ಆರ್ ದಯಾನಂದ ಸ್ವಾಮಿ, ‘ಇದೊಂದು ಪೊಲಿಟಿಕಲ್ ಡ್ರಾಮಾ. ಜೊತೆಗೆ ಸೋಷಿಯಲ್ ಮೀಡಿಯಾ ಕುರಿತ ಎಳೆಯೂ ಇದೆ. ಶ್ರೀಸಾಮಾನ್ಯನ ರಾಜಕೀಯ ಪ್ರವೇಶದ ಸಂಘರ್ಷಗಳನ್ನು ಸಿನಿಮಾ ಕಟ್ಟಿಕೊಡುತ್ತದೆ’ ಎಂದರು.
ಚಂದ್ರು ನಾಲ್‌ರೋಡ್ ಕೂಲಿ ಮಾಡುವ ಯುವಕನ ಪಾತ್ರದಲ್ಲಿ ನಟಿಸಿದ್ದಾರೆ. ಕಾಲೇಜು ಹುಡುಗಿ ಪಾತ್ರದಲ್ಲಿ ನಾಯಕಿ ರೇಷ್ಮಾ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಸಣ್ಣಕ್ಕಿ ವಿಲನ್ ಪಾತ್ರದಲ್ಲಿದ್ದಾರೆ. ಸಂಜಯ್ ಹಾಸ್ಯ ಪಾತ್ರದಲ್ಲಿ ನಟಿಸಿದ್ದಾರೆ.