;Resize=(412,232))
ಸಿನಿವಾರ್ತೆ
ಯಶ್ ತನ್ನ ನಟನೆ, ನಿರ್ಮಾಣದ ‘ಟಾಕ್ಸಿಕ್’ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಡುವೆ ಮುದ್ದಿನ ಮಗಳು ಐರಾ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಪ್ರತಿಷ್ಠಿತ ಸ್ಟಾರ್ ಹೊಟೇಲ್‌ನಲ್ಲಿ ಪ್ರಿನ್ಸೆಸ್ ಥೀಮ್‌ನಲ್ಲಿ ಅದ್ದೂರಿಯಾಗಿ ಜನ್ಮದಿನಾಚರಣೆ ನಡೆದಿದೆ.
ಇನ್ನೊಂದೆಡೆ ಸುದೀಪ್ ಅವರ ‘ಮಾರ್ಕ್’ ಸಿನಿಮಾ ಡಿ.25ರಂದು ರಿಲೀಸ್ ಆಗುತ್ತಿದ್ದು, ಅವರು ಸಿನಿಮಾ ಕೆಲಸಗಳ ನಡುವೆ ತನ್ನ ಅಕ್ಕನ ಮಗನ ವಿವಾಹ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದಾರೆ. ಸುದೀಪ್ ಅಕ್ಕ ಸುರೇಖಾ ಪುತ್ರ ತಾರಣ್ ಸುರೇಶ್ ಮದುವೆ ಇಂದು ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿದೆ.