3% ಸಕ್ಸೆಸ್ : ಕೆಲವು ಚಿತ್ರಗಳು ಆಕರ್ಷಿಸಿವೆ, ಇನ್ನೊಂದಿಷ್ಟು ಚಿತ್ರಗಳು ಪರ್ವಾಗಿಲ್ಲ ಎನಿಸಿವೆ

KannadaprabhaNewsNetwork |  
Published : Dec 13, 2024, 12:49 AM ISTUpdated : Dec 13, 2024, 04:40 AM IST
Shenoys multiplex theatre

ಸಾರಾಂಶ

2024ನೇ ಸಾಲಿನ ಚಿತ್ರರಂಗದ ಸಮಗ್ರ ಅವರ್ಷ ಮುಗಿಯಲು ಎರಡು ವಾರ ಬಾಕಿ ಇದೆ. ಇಲ್ಲಿವರೆಗೂ ತೆರೆಕಂಡ ಚಿತ್ರಗಳ ಸಂಖ್ಯೆ 227. ಇಷ್ಟೂ ಚಿತ್ರಗಳಲ್ಲಿ ಸೋತಿದ್ದು, ಗೆದ್ದಿದ್ದು, ಗಳಿಸಿದ್ದು, ಸದ್ದು ಮಾಡಿದ್ದು ಹೀಗೆ ವಿಭಾಗಿಸಿದರೆ ಫಲಿತಾಂಶ ಏನಾಗಬಹುದು ಎಂಬುದು ಇಡೀ ಚಿತ್ರರಂಗಕ್ಕೇ ಗೊತ್ತಿದೆ. 

ವರ್ಷ ಮುಗಿಯಲು ಎರಡು ವಾರ ಬಾಕಿ ಇದೆ. ಇಲ್ಲಿವರೆಗೂ ತೆರೆಕಂಡ ಚಿತ್ರಗಳ ಸಂಖ್ಯೆ 227. ಇಷ್ಟೂ ಚಿತ್ರಗಳಲ್ಲಿ ಸೋತಿದ್ದು, ಗೆದ್ದಿದ್ದು, ಗಳಿಸಿದ್ದು, ಸದ್ದು ಮಾಡಿದ್ದು ಹೀಗೆ ವಿಭಾಗಿಸಿದರೆ ಫಲಿತಾಂಶ ಏನಾಗಬಹುದು ಎಂಬುದು ಇಡೀ ಚಿತ್ರರಂಗಕ್ಕೇ ಗೊತ್ತಿದೆ. ಆದರೆ, ‘ಸೋಲು-ಗೆಲುವಿಗಿಂತ ಪ್ರಯತ್ನ ಮುಖ್ಯ’ ಎನ್ನುವ ಮಾತನ್ನು ತುಂಬಾ ಗಂಭೀರವಾಗಿ ಪರಿಗಣಿಸಿದಂತೆ ಕಂಡ ಚಿತ್ರರಂಗ ವಾರಕ್ಕೆ ತಾ ಮುಂದು, ನಾ ಮುಂದು ಎನ್ನುತ್ತಾ ಮೂರು, ನಾಲ್ಕು, ಐದು, ಎಂಟು ಚಿತ್ರಗಳನ್ನು ಬಿಡುಗಡೆ ಮಾಡಿ ಪ್ರೇಕ್ಷಕರನ್ನೇ ಪರೀಕ್ಷೆ ಒಡ್ಡಿದ್ದು ಈ ವರ್ಷದ ಚಿತ್ರರಂಗದ ಸಾಹಸ ಅಂತಲೇ ಹೇಳಬೇಕು! ಆ ಮೂಲಕ ಸಕ್ಸಸ್ಸಿನ ಬೆಟ್ಟವೇರಲು ಇಡೀ ಚಿತ್ರೋದ್ಯಮ ಒಗ್ಗಟ್ಟಿನಿಂದ ದಾಖಲಿಸಿದ ಸಿನಿಮಾಗಳ ಸಂಖ್ಯೆಯಲ್ಲಿ ‘ಬಂದ ಪುಟ್ಟ ಹೋದ ಪುಟ್ಟ’ ಎನ್ನುವ ಮಾತಿಗೆ ಹಲವು ಚಿತ್ರಗಳು ತುತ್ತಾಗಿದ್ದು ಸುಳ್ಳಲ್ಲ.

ಮದುವೆಯಿಂದ ಶುರುವಾಯಿತು!

2024ರಲ್ಲಿ ಸಿನಿಮಾಗಳ ಬಿಡುಗಡೆಗೆ ಚಾಲನೆ ಕೊಟ್ಟಿದ್ದು ವೇಂಪಲ್ಲಿ ಬಾವಾಜಿ ನಿರ್ದೇಶನದ ‘ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನ’ ಚಿತ್ರದಿಂದ. ಅಲ್ಲಿಂದ ಶುರುವಾಗಿ ಡಿಸೆಂಬರ್ 7ರಂದು ತೆರೆಗೆ ಬಂದ ‘ಧೀರ ಭಗತ್ ರಾಯ್’ ಹಾಗೂ ‘ಗುಂಮ್ಟಿ’ ಚಿತ್ರಗಳವರೆಗೂ 227 ಚಿತ್ರಗಳ ಬಿಡುಗಡೆಗೆ ರಾಜ್ಯದ ಚಿತ್ರಮಂದಿರಗಳು ಸಾಕ್ಷಿ ಆದವು. ವರ್ಷದ ಮೊದಲ ದಿನ ತೆರೆಗೆ ಕಂಡ ಚಿತ್ರದ ಹೆಸರು ಶುಭ ಸೂಚಕವಾಗಿಯೇ ಇತ್ತು.

 ಪ್ರಯತ್ನ, ಪ್ರಯೋಗ ಮತ್ತು ಮೆಚ್ಚುಗೆ

ಪ್ರಯತ್ನ, ಪ್ರಯೋಗವೇ ಮೊದಲ ಆದ್ಯತೆ ಎಂದುಕೊಂಡು ಬಂದು ಪ್ರೇಕ್ಷಕರನ್ನು ಮೆಚ್ಚಿಸಿದ ಒಂದಿಷ್ಟು ಚಿತ್ರಗಳಿವೆ. ಕೆಲವು ಚಿತ್ರಗಳು ಆಕರ್ಷಿಸಿವೆ, ಇನ್ನೊಂದಿಷ್ಟು ಚಿತ್ರಗಳು ಪರ್ವಾಗಿಲ್ಲ ಎನಿಸಿವೆ, ಮತ್ತೊಂದಿಷ್ಟು ಚಿತ್ರಗಳು ಅಯ್ಯೋ ಇಂಥ ಚಿತ್ರಗಳು ಗೆಲ್ಲಬೇಕಿತ್ತು ಅನಿಸಿವೆ. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಈ ಚಿತ್ರಗಳಿಂದ ಬೆಟ್ಟದಷ್ಟು ಭರವಸೆ ಸಿಕ್ಕಿದೆ. ಈ ಚಿತ್ರಗಳ ಕತೆ, ನಿರೂಪಣೆ, ತಾಂತ್ರಿಕತೆ, ನೈಜತೆ, ಪ್ರಯೋಗ ಇತ್ಯಾದಿ ಕಾರಣಗಳಿಗೆ ಬಹುಮುಖ್ಯ ಚಿತ್ರಗಳು ಎನಿಸಿಕೊಂಡಿವೆ. 227 ಚಿತ್ರಗಳ ಪೈಕಿ ನೋಡಿವರು ಮೆಚ್ಚಿಕೊಂಡ ಅಂಥ ಚಿತ್ರಗಳು 24. 1. ಕೋಳಿ ಎಸ್ರು (ಚಂಪಾ ಶೆಟ್ಟಿ)

2. ಹದಿನೇಳೆಂಟು (ಪೃಥ್ವಿ ಕೊಣನೂರು) 3. ಕೇಸ್ ಆಫ್ ಕೊಂಡಾಣ ( ದೇವಿ ಪ್ರಸಾದ್ ಶೆಟ್ಟಿ)4. ಜೂನಿ (ವೈಭವ್‌ ಮಹದೇವ್‌)5. ಸಾರಾಂಶ (ಸೂರ್ಯ ವಸಿಷ್ಠ)6. ಶಾಖಾಹಾರಿ (ಸಂದೀಪ್ ಸುಂಕದ್)7. ಧೈರ್ಯಂ ಸಾರ್ವತ್ರ ಸಾಧನಂ (ಸಾಯಿರಾಮ್)8. ಜುಗಲ್ ಬಂದಿ (ದಿವಾಕರ್ ಡಿಂಡಿಮ)9. ಕೆರೆಬೇಟೆ (ರಾಜ್ ಗುರು)10. ಸೋಮು ಸೌಂಡ್ ಇಂಜಿನಿಯರ್ (ಅಭಿ)11. ಲೈನ್ ಮ್ಯಾನ್ (ರಘು ಶಾಸ್ತ್ರಿ)12. ಸ್ಕ್ಯಾಮ್ 1770 (ವಿಕಾಸ್‌ ಪುಷ್ಪಗಿರಿ)13. ಓ2 (ರಾಘವ್‌ ನಾಯಕ್‌, ಪ್ರಶಾಂತ್‌ ನಾಯಕ್‌)14. ಚಿಲ್ಲಿ ಚಿಕನ್ (ಪ್ರತೀಕ್‌ ಪ್ರಜೋಶ್‌)15. ಕೆಂಡ (ಸಹದೇವ್‌ ಕೆಲವಡಿ)16. ರೂಪಾಂತರ (ಮಿಥಿಲೇಶ್‌ ಎಡವಲತ್‌)17. ಲಾಪಿಂಗ್ ಬುದ್ಧ (ಭರತ್‌ ರಾಜ್‌)18. ಇಬ್ಬನಿ ತಬ್ಬಿದ ಇಳೆಯಲಿ (ಚಂದ್ರಜಿತ್‌ ಬೆಳ್ಳಿಯಪ್ಪ)19. ಶಾಲಿವಾಹನ ಶಕೆ (ಗಿರೀಶ್‌ ಜಿ)20. ಬಿಟಿಎಸ್ (ಸುನೀಲ್‌ ರಾವ್‌, ಪೂರ್ಣಚಂದ್ರ ಮೈಸೂರು, ರಾಕೇಶ್‌ ಅಡಿಗ)21. ಮರ್ಯಾದೆ ಪ್ರಶ್ನೆ (ನಾಗರಾಜ್‌ ಯೋಮಯಾಜಿ)22. ಆರಾಮ್ ಅರವಿಂದ ಸ್ವಾಮಿ (ಅಭಿಷೇಕ್ ಶೆಟ್ಟಿ)23. ಮರ್ಫಿ (ಬಿ ಎಸ್‌ ಪ್ರದೀಪ್‌ ವರ್ಮ)24. ಫೋಟೋ (ಉತ್ಸವ ಗೋನವಾರ)

25. ಧೀರ ಭಗತ್‌ರಾಯ್

ಕಾಸು ನೋಡಿದ ಸಿನಿಮಾಗಳು

ಎಂಟು ಚಿತ್ರಗಳು ಬಾಕ್ಸ್ ಅಫೀಸ್‌ನಲ್ಲಿ ಗಳಿಕೆ ಮಾಡುವ ಮೂಲಕ 2024ರಲ್ಲಿ ಕಾಸು ನೋಡಿದ ಸಿನಿಮಾಗಳು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿವೆ. ಸಕ್ಸಸ್ ರೇಟ್ ಕಡಿಮೆ ಎನಿಸಿದರೂ ವರ್ಷದ ಆರಂಭದಲ್ಲಿ ಒಂದು ಹಿಟ್, ವರ್ಷದ ಕೊನೆಗೆ ಐದಾರು ಚಿತ್ರಗಳು ಕಮರ್ಷಿಯಲ್ ಆಗಿಯೂ ಚೇತರಿಸಿಕೊಂಡಿವೆ. ಹಾಗೆ ಗಳಿಕೆ ಮಾಡಿದ್ದು 8 ಚಿತ್ರಗಳು. 1. ಉಪಾಧ್ಯಕ್ಷ (ಅನಿಲ್ ಕುಮಾರ್)2. ಒಂದು ಸರಳ ಪ್ರೇಮ ಕಥೆ (ಸಿಂಪಲ್ ಸುನಿ)3. ಬ್ಲಿಂಕ್ (ಶ್ರೀನಿಧಿ ಬೆಂಗಳೂರು)5. ಮೂರನೇ ಕೃಷ್ಣಪ್ಪ (ನವೀನ್ ನಾರಾಯಣಘಟ್ಟ)6. ಭೀಮ (ದುನಿಯಾ ವಿಜಯ್)7. ಕೃಷ್ಣಂ ಪ್ರಣಯ ಸಖಿ (ಶ್ರೀನಿವಾಸ ರಾಜು)8. ಬಘೀರ (ಡಾ ಸೂರಿ)

ದೊಡ್ಡ ನಟರು ನಾಪತ್ತೆ

ಈ ವರ್ಷ ಸ್ಟಾರ್‌ ನಟರ ಹಾಜರಿ ಬಹುತೇಕ ನಾಪತ್ತೆ ಎಂದೇ ಹೇಳಬಹುದು. ಶ್ರೀಮುರಳಿ, ಗಣೇಶ್, ಧ್ರುವ ಸರ್ಜಾ, ಸತೀಶ್ ನೀನಾಸಂ, ಧನಂಜಯ್ ಅವರು ಒಂದೊಂದು ಚಿತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬಂದು ಹೋಗಿದ್ದಾರೆ. 227 ಚಿತ್ರಗಳ ಪೈಕಿ ಸ್ಟಾರ್ ನಟರ ಐದಾರು ಚಿತ್ರಗಳನ್ನು ಹೊರತುಪಡಿಸಿದರೆ ಉಳಿದ 220 ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಈ ವರ್ಷ ಕನ್ನಡ ಚಿತ್ರರಂಗವನ್ನು ಮುನ್ನಡೆಸಿದ್ದು ಅರ್ಥಾತ್ ಸಾಕಿದ್ದು ಹೊಸಬರೇ ಎಂಬುದು ವಿಶೇಷ. 

ಗಳಿಕೆ ಮತ್ತು ಲಾಭ

ಈ ವರ್ಷ ಬಂದ 227 ಚಿತ್ರಗಳ ಪೈಕಿ ಒಳ್ಳೆಯ ಗಳಿಕೆ ಮಾಡಿದ ಚಿತ್ರಗಳು ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’, ‘ಬಘೀರ’ ಚಿತ್ರಗಳು ಮಾತ್ರ. ಈ ನಾಲ್ಕೂ ಚಿತ್ರಗಳು ತಲಾ 20 ಕೋಟಿ ರೂ. ಗಳಿಕೆ ಮಾಡಿವೆ. ಈ ನಾಲ್ಕು ಚಿತ್ರಗಳ ಬಜೆಟ್‍ 15ರಿಂದ 20 ಕೋಟಿ. ಈ ಲೆಕ್ಕದಲ್ಲಿ ಈ ನಾಲ್ಕೂ ಚಿತ್ರಗಳಿಂದ ನಿರ್ಮಾಪಕರಿಗೆ 50 ರಿಂದ 60 ಕೋಟಿ ಲಾಭ ಬಂದಿದೆ ಎನ್ನಲಾಗುತ್ತಿದೆ.

ನಷ್ಟದ ಲೆಕ್ಕಾಚಾರಲಾಭದ ಜತೆಗೆ ನಷ್ಟವೂ ಇದೆ. 50 ಲಕ್ಷದಿಂದ ಶುರುವಾಗಿ 5 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಉಳಿದ ಚಿತ್ರಗಳಿಂದ ಅಂದಾಜು 520 ಕೋಟಿ ನಷ್ಟವಾಗಿದೆ ಎಂಬುದು ಒಂದು ಲೆಕ್ಕಾಚಾರ. 

ವರ್ಷದ ಕೊನೆಯ ಭರವಸೆಗಳುಈ ವರ್ಷದ ಕೊನೆಯಲ್ಲಿ ಎರಡು ದೊಡ್ಡ ಚಿತ್ರಗಳು ತೆರೆಗೆ ಬರುತ್ತಿವೆ. ಸುದೀಪ್ ಅವರು ನಟಿಸಿರುವ ‘ಮ್ಯಾಕ್ಸ್’ ಹಾಗೂ ಉಪೇಂದ್ರ ಅವರು ನಟಿಸಿ, ನಿರ್ದೇಶಿಸಿರುವ ‘ಯುಐ’ ಚಿತ್ರಗಳು. ಈ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ. ಈ ಚಿತ್ರಗಳು ವರ್ಷದ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತಷ್ಟು ಆರ್ಥಿಕ ಬಲ ತುಂಬುವ ನಂಬಿಕೆ ಇದೆ.

ಬೇರೆ ಭಾಷೆಯ ಗಳಿಕೆ ಹೇಗಿತ್ತು?1. ಹಿಂದಿಯಲ್ಲಿ 100 ಕೋಟಿ ಗಳಿಕೆ ಮಾಡಿರುವ ಕನಿಷ್ಠ 10 ಚಿತ್ರಗಳು ಸಿಗುತ್ತವೆ. ‘ಸ್ತ್ರೀ 2’ ಚಿತ್ರ ಒಂದೇ 500 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಉಳಿದಂತೆ ‘ಭೂಲ್‍ ಭುಲಯ್ಯ 3’, ‘ಸಿಂಗಂ ಅಗೇನ್‍’, ‘ಫೈಟರ್‌’ ಮುಂತಾದ ಚಿತ್ರಗಳು 300 ಕೋಟಿಗೂ ಹೆಚ್ಚಿನ ಕಲೆಕ್ಷನ್‍ ಮಾಡಿದೆ.2. ಮಲಯಾಳಂನಲ್ಲಿ ‘ಮಂಜುಮ್ಮೆಲ್‍ ಬಾಯ್ಸ್’ ಚಿತ್ರ 200 ಕೋಟಿ ದಾಟಿದೆ. ಇದರ ಜತೆಗೆ 25 ರಿಂದ 50 ಕೋಟಿ ದಾಟಿರುವ ಚಿತ್ರಗಳು ಮಲಯಾಳಂನಲ್ಲಿ ಸಿಗುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕೇರಳ ಚಿತ್ರರಂಗ ಈ ವರ್ಷ 1000 ಕೋಟಿ ಗಳಿಕೆಯ ಲೆಕ್ಕ ಹೇಳುತ್ತಿದೆ. 3. ತೆಲುಗಿನಲ್ಲಿ ‘ಕಲ್ಕಿ 2898 ಎಡಿ’ ಹಾಗೂ ‘ಪುಷ್ಪ 2’ ಚಿತ್ರಗಳು ತಲಾ ಒಂದೊಂದು ಸಾವಿರ ಕೋಟಿ ದಾಟಿವೆ. ‘ದೇವರ-1’, ‘ಹನುಮಾನ್‍’ ಚಿತ್ರಗಳು 300 ಕೋಟಿ ಗಳಿಸಿವೆ. ಅಲ್ಲಿಗೆ ತೆಲುಗು ಚಿತ್ರೋದ್ಯಮದ 2300 ಕೋಟಿ ಗಳಿಕೆ ಮಾಡಿದೆ.4. ತಮಿಳಿನಲ್ಲಿ ‘ವೆಟ್ಟಾಯನ್‍’, ‘ಕಂಗುವ’, ‘ಇಂಡಿಯನ್‍ 2’, ‘ರಾಯನ್‍’, ಅಮರನ್ ಮುಂತಾದ ಚಿತ್ರಗಳು ಪ್ರೇಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಮೆಚ್ಚುಗೆ ಆಗದೆ ಹೋದರೂ 100 ರಿಂದ 200 ಕೋಟಿ ಗಳಿಕೆ ಮಾಡಿವೆ.

PREV
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.

Recommended Stories

ಅಕ್ಷಯ್ ಖನ್ನಾಗೆ ಯಶಸ್ಸು ತಲೆಗೇರಿದೆ ಎಂದ ದೃಶ್ಯಂ 3 ನಿರ್ಮಾಪಕ
ಮಾರ್ಕ್‌ ನಂತರ ಮತ್ತಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದೇನೆ : ನವೀನ್‌ ಚಂದ್ರ