ಸಿನಿವಾರ್ತೆ

‘ಡಿ-ಬಾಸ್‌ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ಮಾನಸಿಕವಾಗಿ ತುಂಬಾ ಸ್ಟ್ರಾಂಗ್‌ ಆಗಿದ್ದಾರೆ. ಅದಕ್ಕೆಲ್ಲಾ ಕಾರಣ ನೀವು. ನಿಮ್ಮಿಂದ ಅವರು ಚೆನ್ನಾಗಿದ್ದಾರೆ’.

ಹೀಗೆಂದವರು ದರ್ಶನ್‌ ಪತ್ನಿ ವಿಜಯಲಕ್ಷ್ಮೀ. ಮಂಡ್ಯದಲ್ಲಿ ನಡೆದ ‘ಹಯಗ್ರೀವ’ ಸಿನಿಮಾದ ಟ್ರೇಲರ್‌ ಅನ್ನು ಅವರು ಬಿಡುಗಡೆ ಮಾಡಿದರು. ಈ ಸಿನಿಮಾ ಫೆ.27ರಂದು ಬಿಡುಗಡೆಯಾಗುತ್ತಿದೆ.

ಉಸಿರಿರುವವರೆಗೆ ದರ್ಶನ್‌ ಜೊತೆಗೆ ಇರೋಣ

ನಟ ಧನ್ವೀರ್‌, ‘ನಾವು ಉಸಿರಿರುವವರೆಗೆ ದರ್ಶನ್‌ ಜೊತೆಗೆ ಇರೋಣ. ನನ್ನ ಮೊದಲ ಸಿನಿಮಾದಿಂದಲೂ ನೀವೆಲ್ಲರೂ ಪ್ರೀತಿ-ಪ್ರೋತ್ಸಾಹ ತೋರಿಸುತ್ತಾ ಬಂದಿದ್ದೀರಿ. ಅದೇ ಪ್ರೋತ್ಸಾಹ ಈ ಚಿತ್ರಕ್ಕೂ ಇರಲಿ. ಥಿಯೇಟರ್‌ಗೆ ಬಂದು ಸಿನಿಮಾ ನೋಡಿ’ ಎಂದರು.


ನಿರ್ಮಾಪಕ, ಶಾಸಕ ಸಮೃದ್ಧಿ ಮಂಜುನಾಥ್‌, ‘ಹಯಗ್ರೀವ ಒಂದು ವರ್ಷದ ಹಿಂದೆಯೇ

ಬಿಡುಗಡೆಯಾಗಬೇಕಿತ್ತು. ಡಿ-ಬಾಸ್‌ ಇಲ್ಲದ ಕಾರಣ ಬಿಡುಗಡೆ ಮಾಡಿರಲಿಲ್ಲ’ ಎಂದರು.

ಟ್ರೇಲರ್‌ ಬಿಡುಗಡೆ ವೇಳೆ ಅನಿರೀಕ್ಷಿತವಾಗಿ ಮಳೆ ಸುರಿದದ್ದು ವಿಶೇಷವಾಗಿತ್ತು.

ಹಾಸ್ಯನಟರಾದ ಚಿಕ್ಕಣ್ಣ, ಗಿಲ್ಲಿ ನಟ, ವಿನೀಶ್‌ ದರ್ಶನ್‌, ಬಿಗ್‌ಬಾಸ್‌ನ ಅಶ್ವಿನಿ ಗೌಡ, ಕೆ.ಆರ್‌.ಪೇಟೆ ಶಾಸಕ ಹೆಚ್‌.ಟಿ.ಮಂಜು ಇದ್ದರು.