ಮೊದಲ ದಿನವೇ ದಾಖಲೆ94 ಕೋಟಿ ರು. ಬಾಚಿದಸಲ್ಲು ಚಿತ್ರ ಟೈಗರ್‌ 3

KannadaprabhaNewsNetwork | Published : Nov 14, 2023 1:15 AM

ಸಾರಾಂಶ

ಸೋಮವಾರ ಬಿಡುಗಡೆಯಾದ ಸಲ್ಮಾನ್ ಖಾನ್‌ ನಟನೆಯ ‘ಟೈಗರ್‌ -3’ ಚಿತ್ರವು ಮೊದಲ ದಿನವೇ ಪ್ರಪಂಚಾದ್ಯಂತ ಬರೋಬ್ಬರಿ 94 ಕೋಟಿ ರು. ಗಳಿಕೆ ಮಾಡಿದೆ.

ಮುಂಬೈ: ಸೋಮವಾರ ಬಿಡುಗಡೆಯಾದ ಸಲ್ಮಾನ್ ಖಾನ್‌ ನಟನೆಯ ‘ಟೈಗರ್‌ -3’ ಚಿತ್ರವು ಮೊದಲ ದಿನವೇ ಪ್ರಪಂಚಾದ್ಯಂತ ಬರೋಬ್ಬರಿ 94 ಕೋಟಿ ರು. ಗಳಿಕೆ ಮಾಡಿದೆ. ಚಿತ್ರವು ಭಾರತಾದ್ಯಂತ 52.50 ಕೋಟಿ ರು., ಹಾಗೂ ವಿದೇಶಗಳಲ್ಲಿ 41.50 ಕೋಟಿ ರು. ಗಳಿಕೆ ಕಂಡಿದೆ ಎಂದು ನಿರ್ಮಾಣ ಸಂಸ್ಥೆ ಯಶ್‌ ರಾಜ್‌ ಫಿಲ್ಮ್ಸ್‌ ಘೋಷಿಸಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ನಟ ಸಲ್ಮಾನ್‌ ಸಿನಿ ಜೀವನದಲ್ಲೇ ಭರ್ಜರಿ ಆರಂಭಿಕ ಹಿಟ್‌ ನೀಡಿದ ದೊಡ್ಡ ಸಿನಿಮಾ ಎನಿಸಿಕೊಂಡಿದೆ. 2017ರಲ್ಲಿ ತೆರೆಕಂಡಿದ್ದ ‘ಟೈಗರ್‌ ಜಿಂದಾ ಹೈ’ ಚಿತ್ರದ ಸೀಕ್ವೆಲ್‌ ಆಗಿರುವ ಟೈಗರ್‌ 3 ಸಿನಿಮಾದಲ್ಲಿ ನಟಿ ಕತ್ರೀನಾ ಕೈಫ್‌ ಮತ್ತು ಇಮ್ರಾನ್‌ ಹಸ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಿದೇರ್ಶಕ ಮನೀಶ್‌ ಶರ್ಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ.

Share this article